ದೊಡ್ಡಬಳ್ಳಾಪುರ: ಇಂದು ಒಂದೇ ದಿನ 8 ಮಂದಿ ಕರೊನಾ ಸೋಂಕಿತರು ಮೃತಪಡುವ ಮೂಲಕ ತಾಲೂಕಿಗಿಂದು ಕರಾಳ ಗುರುವಾರವಾಗಿ ಪರಿಣಮಿಸಿದ್ದು,ತಾಲೂಕಿನಲ್ಲಿ ಕರೊನಾ ಸೋಂಕಿತರು ಸಾವನಪ್ಪಿರುವ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ ಅನ್ವಯ,ಗುರುವಾರದ ಸಂಜೆಯ ವರಗೆ.ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 26 ಪುರುಷರು ಹಾಗೂ 19 ಮಹಿಳೆಯರು ಸೇರಿ 45 ಜನರಿಗೆ ಸೋಂಕು ದೃಡಪಟ್ಟಿದ್ದರೆ,52 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಹರಿತಲೇಖನಿಗೆ ದೊರೆತಿರುವ ಆರೋಗ್ಯ ಇಲಾಖೆಯ ಮೂಲಗಳ ಮಾಹಿತಿಯಂತೆ.ಕರೊನಾ ಸೋಂಕಿಗೆ ಒಳಗಾಗಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಂಚರಹಳ್ಳಿಯ 33 ವರ್ಷದ ಯುವಕ, ಕಚೇರಿ ಪಾಳ್ಯದ 45 ವರ್ಷದ ಪುರುಷ ತೀವ್ರ ಉಸಿರಾಟದ ತೊಂದರೆಯಿಂದ ಸಾವನಪ್ಪಿದ್ದರೆ.ದರ್ಗಾಜೋಗಹಳ್ಳಿಯ 67 ವರ್ಷದ ಮಹಿಳೆ, ಆಚಾರ್ಯಪೇಟೆಯ 52 ವರ್ಷದ ಪುರುಷ, ದೇವರಾಜನಗರದ 60 ವರ್ಷದ ಮತ್ತು 62 ವರ್ಷದ ಮಹಿಳೆಯರು, ಹಾಗೂ 75 ವರ್ಷದ ಪುರುಷ, ವಡ್ಡರಬೀದಿಯ 47ವರ್ಷದ ಮಹಿಳೆ ಅನಿಯಂತ್ರಿತ ಸಕ್ಕರೆ ಕಾಯಿಲೆಯಿಂದ ಸಾವನಪ್ಪಿದ್ದಾರೆ ಎನ್ನಲಾಗಿದೆ.
ಉಳಿದಂತೆ ತೂಬಗೆರೆ 8, ಕಚೇರಿಪಾಳ್ಯ, ಕರೇನಹಳ್ಳಿ, ದೇವರಾಜನಗರದಲ್ಲಿ ತಲಾ 3, ಗಂಗಾಧರಪುರ, ಚೈತನ್ಯನಗರ, ಭುವನೇಶ್ವರಿ ನಗರ, ಎಲೆಪೇಟೆ, ಗಾಣಿಗರಪೇಟೆ, ಕುಚ್ಚಪ್ಪನಪೇಟೆಯಲ್ಲಿ ತಲಾ 2, ಶ್ರೀನಗರ, ತ್ಯಾಗರಾಜನಗರ, ವೀರಭದ್ರಯ್ಯನ ಪಾಳ್ಯ, ಮಾರಸಂದ್ರ, ಸೋಮೇಶ್ವರ ಬಡಾವಣೆ, ರಘುನಾಥಪುರ, ಶಾಂತಿನಗರ, ಖಾಸ್ ಬಾಗ್, ಸಂಜಯನಗರ, ಆರೂಢಿ, ಕುವೆಂಪು ನಗರ, ದರ್ಗಾಜೋಗಹಳ್ಳಿ, ಬ್ಯಾಂಕ್ ಸರ್ಕಲ್, ಮುತ್ಯಾಲಮ್ಮ ಟೆಂಪಲ್, ಒಡ್ಡರಬೀದಿ ಹಾಗು ಆಚಾರ್ಯಪೇಟೆಯ ತಲಾ ಒಬ್ಬರಲ್ಲಿ ಸೊಂಕು ದೃಢಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 1244 ಮಂದಿಗೆ ಸೋಂಕು ತಗುಲಿದ್ದು, 864 ಮಂದಿ ಗುಣಮುಖರಾಗಿದ್ದರೆ 41 ಮಂದಿ ಸಾವನಪ್ಪಿದ್ದಾರೆ.
ಸೋಂಕಿಗೆ ಒಳಗಾದ 56 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 283 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರ ಹಾಗೂ ಕೆಂಗೇರಿಯ ಮಹಾವೀರ್ ಜೈನ್ ವಿದ್ಯಾರ್ಥಿ ನಿಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.