ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ನ 2021ರ ಆವೃತ್ತಿಯು ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಗ್ಲೇನ್ ಮ್ಯಾಕ್ಸ್ ವೆಲ್ 14.25 ಕೋಟಿ ರೂಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 2021 ರ ಆವೃತ್ತಿಯು ಈ ವರ್ಷದ ಏಪ್ರಿಲ್‌ನಲ್ಲಿ ಪ್ರಾರಂಭವಾಗಲಿದ್ದು, ಇಂದು ಆಟಗಾರರ ಹರಾಜು ಪ್ರಕ್ರಿಯೆ ಭರದಿಂದ ನಡೆದಿದೆ.
ಚೆನ್ನೈನಲ್ಲಿ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು ಇಂದಿನ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಗ್ಲೇನ್ ಮ್ಯಾಕ್ಸ್ ವೆಲ್ ದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮ್ಯಾಕ್ಸ್ ವೆಲ್ ರನ್ನು ಬರೊಬ್ಬರಿ14.25 ಕೋಟಿ ರೂಗಳಿಗೆ ಖರೀದಿ ಮಾಡಿದೆ.
ಮ್ಯಾಕ್ಸ್ ವೆಲ್ ಮೂಲ ಬೆಲೆ 2 ಕೋಟಿ ರೂಗಳಾಗಿತ್ತು. ಆದರೆ ಮ್ಯಾಕ್ಸ್ ವೆಲ್ ಖರೀದಿಗಾಗಿ ಸಿಎಸ್ ಕೆ ಮತ್ತು ಕೆಕೆಆರ್ ತಂಡಗಳು ಭಾರಿ ಪೈಪೋಟಿ ನೀಡಿದ ಕಾರಣ ಅವರು ಮೂಲ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟವಾಗಿದ್ದಾರೆ ಎನ್ನಲಾಗಿದೆ.
ಮತ್ತೊಬ್ಬ ಆಸ್ಟ್ರೇಲಿಯಾ ಆಟಗಾರ ಸ್ಟೀವ್ ಸ್ಮಿತ್ 2.20 ಕೋಟಿ ರೂಗಳಿಗೆ ದೆಹಲಿ ಪಾಲಾಗಿದ್ದಾರೆ. ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ರನ್ನು ಕೋಲ್ಕತಾ ತಂಡ 3.20 ಕೋಟಿ ರೂ ನೀಡಿ ಖರೀದಿ ಮಾಡಿದೆ. ಭಾರತದ ಆಟಗಾರ ಶಿವಂ ದುಬೆ 4.40 ಕೋಟಿ ರೂಗಳಿಗೆ ರಾಜಸ್ಥಾನ ತಂಡದ ಪಾಲಾಗಿದ್ದಾರೆ. ಇಂಗ್ಲೆಂಡ್ ತಂಡದ ಮೋಯಿನ್ ಅಲಿ 7 ಕೋಟಿ ರೂಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ.
ಇನ್ನುಳಿದಂತೆ ಭಾರತದ ಕುರಣ್ ನಾಯರ್, ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಜೇಸನ್ ರಾಯ್, ವೆಸ್ಟ್ ಇಂಡೀಸ್ ತಂಡದ ಎವಿನ್ ಲೂಯಿಸ್, ಆಸಿಸ್ ಆಟಗಾರ ಆ್ಯರಾನ್ ಫಿಂಚ್, ಭಾರತದ ಮಧ್ಯಮ ಕ್ರಮಾಂಕದ ಆಟಗಾರ ಹನುಮವಿಹಾರಿ, ಆಲ್ರೌಂಡರ್ ಕೇದಾರ್ ಜಾದವ್, ಮಾರಾಟವಾಗದೇ ಉಳಿದಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…