ಬೆಂ.ಗ್ರಾ.ಜಿಲ್ಲೆ: ಕೌಶಲ್ಯಾಭಿವೃಧ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಉದ್ಯಮಶೀಲತಾ ಅಭಿವೃದ್ದಿ ಕೇಂದ್ರ(ಸಿಡಾಕ್)ದ ಸಂಯುಕ್ತಾಶ್ರಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಉದ್ಯಮಿದಾರರಿಗೆ “ಉದ್ಯಮದಲ್ಲಿ ತಾಂತ್ರಿಕ ಉನ್ನತೀಕರಣ,ವಿಸ್ತರಣೆ ಮತ್ತು ವೈವಿಧ್ಯಮಯ” ಕುರಿತ ಎರಡು ದಿನಗಳ ಕಾರ್ಯಾಗಾರವನ್ನು ಫೆಬ್ರವರಿ 24 ಮತ್ತು 25 ರಂದು ದೊಡ್ಡಬಳ್ಳಾಪುರ ಪಟ್ಟಣ ಎಸ್.ಬಿ.ಐ. ಬ್ಯಾಂಕ್ ಹತ್ತಿರದ ಕೆ.ಐ.ಡಿ.ಬಿ ಕೈಗಾರಿಕಾ ಪ್ರದೇಶದಲ್ಲಿರುವ ಅಪೇರಲ್ ಪಾರ್ಕ್ನಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಾಗಾರದಲ್ಲಿ ಹಾಲಿ ನಡೆಸುತ್ತಿರುವ ಉದ್ಯಮದಲ್ಲಿ ತಾಂತ್ರಿಕ ಉನ್ನತಿಕರಣ, ಉದ್ಯಮವನ್ನು ವಿಸ್ತರಿಸುವ ಕುರಿತು ಮತ್ತು ವೈವಿದ್ಯಮಯ ಉದ್ಯಮಗಳನ್ನು ಕೈಗೊಳ್ಳಲು ಮಾಹಿತಿಯನ್ನು ನೀಡಲಾಗುವುದು. ವಿವಿಧ ಇಲಾಖೆಗಳ ನುರಿತ ತಜ್ಞರು ಕಾರ್ಯಾಗಾರದಲ್ಲಿ ಭಾಗವಹಿಸಿ ಮಾಹಿತಿಯನ್ನು ನೀಡಲಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಸಕ್ತ ಹಾಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಉದ್ಯಮಿದಾರರು ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದಾಗಿದೆ.
ಆಸಕ್ತ ಉದ್ಯಮಿದಾರರು ಕಾರ್ಯಗಾರದ ಸ್ಥಳದಲ್ಲಿ ವರದಿ ಮಾಡಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಂಟಿ ನಿದೇರ್ಶಕರ ಕಚೇರಿ, ‘ಸಿಡಾಕ್’, ಕೆಜಿಟಿಟಿಐ ಕಟ್ಟಡ.ಕೌಶಲ್ಯ ಭವನ ಆವರಣ, ಡೈರಿ ವೃತ್ತ, ಬನ್ನೇರ್ ಘಟ್ಟ ರಸ್ತೆ, ಬೆಂಗಳೂರು ಹಾಗೂ ಮೊ.ಸಂ.: 7760145784 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ(ಸಿಡಾಕ್)ದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…