ದೊಡ್ಡಬಳ್ಳಾಪುರ: ಅರಣ್ಯ ಪ್ರದೇಶಕ್ಕೆ ವ್ಯಾಪಿಸಿದ್ದ ಬೆಂಕಿ ತಗುಲಿದ ಪರಿಣಾಮ ಕಣದಲ್ಲಿ ಬಣವೆ ಹಾಕಲಾಗಿದ್ದ 9 ಲೋಡ್ ನಷ್ಟು ರಾಗಿ ಹುಲ್ಲು ಬೆಂಕಿಗೆ ಆಹುತಿಯಾಗಿರುವ ಘಟನೆ ತಾಲೂಕಿನ ಕೆಳಗಿನ ನಾಯಕರಂಡನಹಳ್ಳಿಯಲ್ಲಿ ಸಂಭವಿಸಿದೆ.
ಕೆಳಗಿನ ನಾಯಕರಂಡನಹಳ್ಳಿಯಲ್ಲಿ ಒಂದೇ ಕಣದಲ್ಲಿ ಹಾಕಲಾಗಿದ್ದ ಜಯಬಾಯಿ,, ಸೀತಾಬಾಯಿ ಹಾಗೂ ನಟರಾಜನಾಯ್ಕ ಎನ್ನುವವರ 9ಲೋಡ್ ನಷ್ಟು ಮೂರು ಬಣವೆ ಬೆಂಕಿಗೆ ಆಹುತಿಯಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದೂ ಬೆಂಕಿ ನಂದಿಸುವ ಕಾರ್ಯ ಆರಂಭಿಸಲಾದರೂ ಬೆಂಕಿಯ ಕೆನ್ನಾಲಿಗೆಗೆ ಬಣವೆಗಳು ಭಸ್ಮವಾಗಿದೆ.
ಆಕಸ್ಮಿಕವಾಗಿ ಸಂಭವಿಸಿದ ಘಟನೆಯಿಂದಾಗಿ ರೈತರ ಸಾವಿರಾರು ಮೌಲ್ಯದ ಬಣವೆ ಬೆಂಕಿಗೆ ಆಹುತಿಯಾಗಿದ್ದು, ದೊಡ್ಡಬಳ್ಳಾಪುರದ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…