ದೊಡ್ಡಬಳ್ಳಾಪುರ: ಯುಗಾದಿ ವೇಳೆ ಬಯಲುಸೀಮೆಯಲ್ಲಿ ವಿಶಿಷ್ಟವಾಗಿ ಆಚರಿಸುವ ಕಾಮಣ್ಣಮೂರ್ತಿಯನ್ನು ತಣ್ಣಗೆ ಮಾಡುವ ಆಚರಣೆಯು ನಗರದ ವಿವಿಧೆಡೆ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಜೇಡಿಮಣ್ಣಿನಿಂದ ಬಿಡಿಸಿದ್ದ ಸುಂದರ ಕಾಮನ ಮೂರ್ತಿಗೆ ಅಲಂಕಾರ ಮಾಡಲಾಗಿತ್ತು. ವಿವಿಧ ಅಳತೆಗಳ ಕಾಮನಮೂರ್ತಿಗೆ ಕಾಮನ ತಣ್ಣಗಿನ ಆಚರಣೆ ಮಾಡಲಾಯಿತು. ಕೆಲವೆಡೆ ವಿಶೇಷ ಮಂಟಪ ನಿರ್ಮಿಸಿ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು.
ನಗರದ ದರ್ಗಾಪುರ, ಖಾಸ್ ಬಾಗ್, ತೂಬಗೆರೆ ಪೇಟೆ, ಗಾಣಿಗರ ಪೇಟೆ, ಚೌಡೇಶ್ವರಿ ದೇವಾಲಯ ಸಮೀಪ, ತೇರಿನ ಬೀದಿ ವೃತ್ತ ಮೊದಲಾದೆಡೆ ವಿವಿಧ ಮಾದರಿಯ ಕಾಮಣ್ಣನ ಮೂರ್ತಿಗಳನ್ನು ಬಿಡಿಸಿ ಪೂಜೆ ಸಲ್ಲಿಸಲಾಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..