ಬೆಂಗಳೂರು: ಆದಾಯ ತೆರಿಗೆ ಇಲಾಖೆಯ ಹೊಸ, ತೆರಿಗೆ – ಸ್ನೇಹಿ ಇ-ಫೈಲಿಂಗ್ ಪೋರ್ಟಲ್ ಇದೇ ತಿಂಗಳ ಜೂನ್ 7ರಂದು ಉದ್ಘಾಟನೆಗೊಳ್ಳಲಿದೆ.
ಈ ಪೋರ್ಟಲ್ ನಲ್ಲಿ ಹಲವು ಹೊಸ ವೈಶಿಷ್ಟ್ಯಗಳ ಸೇರ್ಪಡೆಗೊಳಿಸಲಾಗಿದ್ದು,ಉಚಿತವಾಗಿ ಐಟಿಆರ್ ಸಿದ್ಧತಾ ಸಂವಹನಾತ್ಮಕ ತಂತ್ರಾಂಶವೂ ಲಭ್ಯವಿರುವುದರ ಜೊತೆಗೆ ತೆರಿಗೆದಾರರ ನೆರವಿಗೆ ಹೊಸ ಸಹಾಯವಾಣಿ ಕೇಂದ್ರ ಇರಲಿದೆ.
ಆದಾಯ ತೆರಿಗೆ ಇಲಾಖೆ ತನ್ನ ಹೊಸ ಇ-ಫೈಲಿಂಗ್ ಪೋರ್ಟಲ್ www.incometax.gov.in ಈ ಹೊಸ ಇ-ಫೈಲಿಂಗ್ ಪೋರ್ಟಲ್ ತೆರಿಗೆದಾರರಿಗೆ ಅನುಕೂಲಕರ ಮತ್ತು ಆಧುನಿಕವಾಗಿದೆ, ಇದು ತೆರಿಗೆದಾರರಿಗೆ ತಡೆರಹಿತ ಸೇವೆ ನೀಡುತ್ತದೆ ಎಂದು ವರದಿಯಾಗಿದೆ.
ಹೊಸ ಪೋರ್ಟಲ್ ನ ಕೆಲವು ಮುಖ್ಯಾಂಶಗಳ ವಿವರ ಈ ಕೆಳಗಿನಂತಿದೆ:
ತೆರಿಗೆದಾರರಿಗೆ ತ್ವರಿತ ಮರುಪಾವತಿ ನೀಡಲು ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ತಕ್ಷಣದ ಪ್ರಕ್ರಿಯೆಯೊಂದಿಗೆ ಸಂಯೋಜಿಸಲ್ಪಟ್ಟ ಹೊಸ ತೆರಿಗೆದಾರ ಸ್ನೇಹಿ ಪೋರ್ಟಲ್.
ತೆರಿಗೆದಾರರಿಂದ ಅನುಸರಣಾ ಕ್ರಮಕ್ಕಾಗಿ ಎಲ್ಲಾ ಸಂವಹನ ಮತ್ತು ಅಪ್ ಲೋಡ್ ಗಳು ಅಥವಾ ಬಾಕಿ ಇರುವ ಕ್ರಮಗಳನ್ನು ಒಂದೇ ಡ್ಯಾಶ್ ಬೋರ್ಡ್ ನಲ್ಲಿ ಪ್ರದರ್ಶಿಸಲಾಗುತ್ತದೆ.
ಐಟಿಆರ್ 1, 4 (ಆನ್ ಲೈನ್ ಮತ್ತು ಆಫ್ ಲೈನ್) ಮತ್ತು ಐಟಿಆರ್ 2 (ಆಫ್ ಲೈನ್) ಗಾಗಿ ತೆರಿಗೆ ಪಾವತಿದಾರರಿಗೆ ಪ್ರಾರಂಭಿಸಲು ಸಹಾಯ ಮಾಡಲು ಸಂವಾದಾತ್ಮಕ ಪ್ರಶ್ನೆಗಳೊಂದಿಗೆ ಐಟಿಆರ್ ತಯಾರಿಕೆ ತಂತ್ರಾಂಶ ಲಭ್ಯವಿದೆ.
ಐಟಿಆರ್ 3, 5, 6, 7 ತಯಾರಿಸಲು ಸೌಲಭ್ಯ ಶೀಘ್ರದಲ್ಲೇ ಲಭ್ಯವಾಗಲಿದೆ;ತೆರಿಗೆದಾರರು ತಮ್ಮ ಐಟಿಆರ್ ಸಲ್ಲಿಕೆ ಪೂರ್ವದಲ್ಲಿ ಭರ್ತಿ ಮಾಡಲು ಬಳಸಲಾಗುವ ಐಟಿಆರ್ ನಲ್ಲಿ ವೇತನ, ,ಗೃಹ ಆಸ್ತಿ, ವ್ಯವಹಾರ / ವೃತ್ತಿ ಸೇರಿದಂತೆ ಆದಾಯದ ಕೆಲವು ವಿವರಗಳನ್ನು ಒದಗಿಸಲು ತಮ್ಮ ಪ್ರೊಫೈಲ್ ಅನ್ನು ಪೂರ್ವಭಾವಿಯಾಗಿ ನವೀಕರಿಸಲು ಸಾಧ್ಯವಾಗುತ್ತದೆ.
ಟಿಡಿಎಸ್ ಮತ್ತು ಎಸ್.ಎಫ್.ಟಿ ಲೆಕ್ಕಾಚಾರದ ದಾಖಲೆಗಳನ್ನು ಅಪ್ ಲೋಡ್ (ಕೊನೆಯ ದಿನಾಂಕ ಜೂನ್ 30, 2021) ಮಾಡಿದ ನಂತರ ವೇತನ ಆದಾಯ, ಬಡ್ಡಿ, ಲಾಭಾಂಶ ಮತ್ತು ಬಂಡವಾಳ ಆದಾಯ (ಕ್ಯಾಪಿಟಲ್ ಗೈನ್)ಗಳೊಂದಿಗೆ ಪೂರ್ವ -ಭರ್ತಿಯ ವಿವರವಾದ ಸಕ್ರಿಯಗೊಳಿಸುವಿಕೆ ಲಭ್ಯವಿರುತ್ತದೆ.
ತೆರಿಗೆದಾರರಿಗೆ ನೆರವಾಗಲು ಮತ್ತು ಪ್ರಾಮಾಣಿಕವಾಗಿ ತೆರಿಗೆದಾರರ ಪ್ರಶ್ನೆಗಳಿಗೆ ಸ್ಪಂದಿಸಲು ಹೊಸ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದೆ. ವಿವರವಾದ ಎಫ್.ಎ.ಕ್ಯುಗಳು, ಬಳಕೆದಾರರ ಕೈಪಿಡಿ, ವಿಡಿಯೋಗಳು ಮತ್ತು ಚಾರ್ಟ್ಬಾಟ್/ಲೈವ್ ಏಜೆಂಟ್ ಅನ್ನು ಒದಗಿಸಲಾಗುತ್ತದೆ.
ಆದಾಯ ತೆರಿಗೆ ನಮೂನೆಗಳನ್ನು ಭರ್ತಿ ಮಾಡುವ ಕಾರ್ಯಗಳು, ತೆರಿಗೆ ವೃತ್ತಿಪರರ ಸೇರ್ಪಡೆ, ನೋಟಿಸ್ ಗಳಿಗೆ ಸ್ಪಂದನೆಯ ಸಲ್ಲಿಕೆಯಲ್ಲಿ ಮುಖಾಮುಖಿರಹಿತ ಪರಿಶೀಲನೆ ಅಥವಾ ಮೇಲ್ಮನವಿ ಲಭ್ಯವಿರುತ್ತದೆ.
ಯಾವುದೇ ತೆರಿಗೆದಾರರಿಗಾಗುವ ಅನಾನುಕೂಲತೆಯನ್ನು ತಪ್ಪಿಸಲು ಮುಂಗಡ ತೆರಿಗೆ ಕಂತು ಪಾವತಿ ದಿನಾಂಕದ ನಂತರ 2021ರ ಜೂನ್ 18 ರಂದು ಹೊಸ ತೆರಿಗೆ ಪಾವತಿ ವ್ಯವಸ್ಥೆಯನ್ನು ಪ್ರಾರಂಭಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
ತೆರಿಗೆ ಪಾವತಿದಾರರಿಗೆ ವಿವಿಧ ವೈಶಿಷ್ಟ್ಯಗಳ ಬಗ್ಗೆ ಪರಿಚಯ ಮಾಡಿಕೊಳ್ಳಲು ಸಾಧ್ಯವಾಗುವಂತೆ ಪೋರ್ಟಲ್ ನ ಪ್ರಾರಂಭಿಕ ಆರಂಭದ ಬಳಿಕ ಮೊಬೈಲ್ ಆಪ್ ಅನ್ನು ಸಹ ಬಿಡುಗಡೆ ಮಾಡಲಾಗುತ್ತದೆ. ಹೊಸ ವ್ಯವಸ್ಥೆಯೊಂದಿಗೆ ಪರಿಚಿತವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು, ಆದ್ದರಿಂದ, ಹೊಸ ಪೋರ್ಟಲ್ ಪ್ರಾರಂಭವಾದ ನಂತರದ ಆರಂಭಿಕ ಅವಧಿಗೆ ಎಲ್ಲಾ ತೆರಿಗೆದಾರರು / ಬಾಧ್ಯಸ್ಥರು ತಾಳ್ಮೆಯಿಂದ ಇರುವಂತೆ ಇಲಾಖೆ ವಿನಂತಿಸಿದೆ ಮತ್ತು ಇದು ಒಂದು ಪ್ರಮುಖ ಪರಿವರ್ತನೆಯಾಗಿರುವುದರಿಂದ ಇತರ ಕಾರ್ಯಗಳು ಬಿಡುಗಡೆಯಾಗುತ್ತವೆ.
ಸಿಬಿಡಿಟಿ ತನ್ನ ತೆರಿಗೆ ಪಾವತಿದಾರರು ಮತ್ತು ಇತರ ಬಾಧ್ಯಸ್ಥರಿಗೆ ಸುಲಭವಾಗಿ ಅನುಸರಣೆ ನೀಡುವ ನಿಟ್ಟಿನಲ್ಲಿ ಇದು ಮತ್ತೊಂದು ಉಪಕ್ರಮವಾಗಿದೆ ಎನ್ನಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….