ಹಾವೇರಿ: ಜಿಲ್ಲೆಯ ಹಿರೆಕೆರೂರು ಮತಕ್ಷೇತ್ರ ವ್ಯಾಪ್ತಿಯ ದೂದೀಹಳ್ಳಿ ವಸತಿ ಶಾಲೆಗಳಲ್ಲಿ ಸ್ಥಾಪಿಸಿರುವ ಕೋವಿಡ್ ಕೇರ್ ಸೆಂಟರ್ಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದರು.
ಕೋವಿಡ್ ಕೇರ್ ಸೆಂಟರ್ಗೆ ಭೇಟಿ ನೀಡಿ ಕೇರ್ ಸೆಂಟರ್ನ ಸ್ಥಿತಿಗತಿ, ಸ್ವಚ್ಛತೆ ಹಾಗೂ ಸೋಂಕಿತರಿಗೆ ನೀಡುವ ಆಹಾರದ ಬಗ್ಗೆ ಮಾಹಿತಿ ಪಡೆದು ವಾಸ್ತವತೆ ಪರಿಶೀಲಿಸಿದರು.
ಕೋವಿಡ್ ಕೇರ್ ಸೆಂಟರ್ಗೆ ಭೇಟಿ ನೀಡಿ,ಉತ್ತಮ ಗುಣಮಟ್ಟದ ಆಹಾರ ನೀಡಲಾಗುತ್ತಿದೆಯೇ? ಯಾವ ಅಡುಗೆಯನ್ನು ನೀಡುತ್ತಿದ್ದಾರೆ? ಸೌಲಭ್ಯ ಹೇಗಿದೆ ಎಂಬುದರೆಲ್ಲದರ ಬಗ್ಗೆ ಸೋಂಕಿತರೊಂದಿಗೆ ಮಾತನಾಡಿ ವಿವರ ಪಡೆದರು.
ಕೋವಿಡ್ ಕೇರ್ ಸೆಂಟರ್ ಅನ್ನು ಸೋಂಕಿತರು ಮನೆಯಂತೆ ಭಾವಿಸಿ ಲವಲವಿಕೆಯಿಂದ ಇದ್ದು, ಧನಾತ್ಮಕ ಚಿಂತನೆಗಳನ್ನು ಮಾಡಬೇಕು. ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆದು ಗುಣಮುಖರಾಗಬೇಕೆಂದು ಸೋಂಕಿತರಿಗೆ ಮನೋಸ್ಥೈರ್ಯ ತುಂಬಿದರು. ಆಹಾರದ ಗುಣಮಟ್ಟ ಹಾಗೂ ಗುಣಮಟ್ಟದ ತರಕಾರಿ ಕಂಡು ಸಂತಸ ಪಟ್ಟರು.ಅಲ್ಲದೇ ಅಡುಗೆ ತಯಾರಿಸುವವರು ಮಾಸ್ಕ್, ಹ್ಯಾಂಡ್ ಗ್ಲೌಸ್ ಅನ್ನು ಕಡ್ಡಾಯವಾಗಿ ಬಳಸಬೇಕೆಂದು ಬಿ.ಸಿ.ಪಾಟೀಲ್ ಹೇಳಿದರು.
ತಹಶೀಲ್ದಾರ್ ಕೆ.ಉಮಾ, ಕಾರ್ಯನಿರ್ವಾಹಣಾಧಿಕಾರಿ ಶ್ರೀನಿವಾಸ್ ಪಿಎಸ್ಐ ಚಂದನ್ ಮತ್ತಿತ್ತರ ಅಧಿಕಾರಿಗಳು ಜೊತೆಗಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….