ದೊಡ್ಡಬಳ್ಳಾಪುರ: ತಾಲೂಕಿನ ಆರೂಢಿ ಗ್ರಾಮದಲ್ಲಿ ಪಡಿತರ ಪಡೆಯಬೇಕಾದರೆ ಕೋವಿಡ್ ತಪಾಸಣೆ ಒಳಗಾಗುವುದು ಕಡ್ಡಾಯವಾಗಿದೆ.
ಕೋವಿಡ್-19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಸೋಂಕಿತರ ಪತ್ತೆ ಹಚ್ಚಲು, ಆರೂಢಿ ಗ್ರಾಮಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಈ ಉಪಾಯವನ್ನು ಮಾಡಿವೆ.
ಈ ಹಿನ್ನೆಲೆ ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗೆ ಬರುವ ಗ್ರಾಹಕರಿಗೆ ಸ್ಥಳದಲ್ಲಿಯೇ ಕೋವಿಡ್ ತಪಾಸಣೆ ಮಾಡಲಾಗುತ್ತಿದೆ.
ಸುಮಾರು 600 ಕಾರ್ಡ್ ಹೊಂದಿರುವ ನ್ಯಾಯಬೆಲೆ ಅಂಗಡಿ ಇದಾಗಿದೆ. ಇಂದಿನಿಂದ ಪಡಿತರ ವಿತರಣೆ ಆರಂಭವಾಗಿದ್ದು, ನಿರಂತರ ತಪಾಸಣೆ ನಡೆಸುವ ಮೂಲಕ ಸೋಂಕಿತರ ಪತ್ತೆ ಹಚ್ಚುವ ಯೋಜನೆ ರೂಪಿಸಲಾಗಿದೆ.
ತಪಾಸಣೆ ಕಾರಣ ಆರಂಭದಲ್ಲಿ ಆತಂಕದಿಂದ ಪಡಿತರ ಪಡೆಯಲು ಗ್ರಾಹಕರು ಹಿಂದೇಟು ಹಾಕಿದರಾದರೂ, ಸಮಯ ಕಳೆದಂತೆ ತಪಾಸಣೆಗೆ ಒಳಗಾಗಿ ಪಡಿತರ ಪಡೆಯುತ್ತಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….