ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಕಾರ್ಯನಿರ್ವಹಿಸಿ ಇಂದು ವಯೋ ನಿವೃತ್ತಿ ಹೊಂದಿದ ಶಿಕ್ಷಕರಾದ ಜಿ.ಬಿ.ಗಂಗಾಧರಯ್ಯ, ಹನುಮಂತಯ್ಯ, ಆರ್.ವೀರಪ್ಪ, ಶಿವಕುಮಾರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಗಳ ಕಛೇರಿ ದ್ವಿತಿಯ ದರ್ಜೆ ಸಹಾಯಕ ಆರ್.ಹುಸೇನ್ ಖಾನ್ ರವರನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ನಗರದ ಗುರುಭವನದಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಶಿಕ್ಷಣ ಇಲಾಖೆಯಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸಿದ ಕಾರಣ ಈ 5 ಮಂದಿಯನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಜೈಕುಮಾರ್, ಕಾರ್ಯದರ್ಶಿ ಎಸ್.ವಿ.ವಸಂತಗೌಡ, ಪದಾಧಿಕಾರಿಗಳಾದ, ಎಸ್.ಮಂಜುನಾಥ, ಕೆ.ಆರ್.ನರಸಿಂಹಮೂರ್ತಿ, ಎ.ವಿ.ಚಂದ್ರಪ್ಪ, ಕೆ.ಹೆಚ್.ಬಸವಲಿಂಗಯ್ಯ, ಸಿ.ಕೆ.ಮುತ್ತರಾಜು, ಚಂದ್ರಕಲಾ, ಅಮ್ಜದ್ ಖಾನ್ ಹಾಗೂ ನೌಕರರ ಸಂಘದ ಎಂ.ಎಸ್.ರಾಜಶೇಖರ್, ವಿ.ಧನಂಜಯ ಮತ್ತು ನಾಮನಿರ್ದೇಶಿತ ಸದಸ್ಯರು, ಶಿಕ್ಷಕರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..