ಚಿಕ್ಕಬಳ್ಳಾಪುರ: ವಾರಾಂತ್ಯದ ನಿಷೇಧವಿದ್ದರೂ ಬೆಳ್ಳಂಬೆಳಿಗ್ಗೆ ನಂದಿಗಿರಿಧಾಮ ದತ್ತ ಸಾವಿರಾರು ಪ್ರವಾಸಿಗರು ಆಗಮಿಸಿದ್ದಾರೆ.
ಕಾರು ಹಾಗೂ ಬೈಕ್ ಗಳಲ್ಲಿ ನಂದಿಗಿರಿಧಾಮ ದತ್ತ ಬರುತ್ತಿರುವ ಪ್ರವಾಸಿಗರು, ನಂದಿಗಿರಿಧಾಮ ನಿಷೇಧಿಸಲಾಗಿದೆಯಾದರು ಕ್ಯಾರೆ ಎನ್ನದೆ ಬರುತ್ತಿದ್ದಾರೆ.
ಕೋವಿಡ್ ಸೋಂಕು ತಡೆಗಟ್ಟಲು ವಾರಾಂತ್ಯದಲ್ಲಿ ವಿಶ್ವವಿಖ್ಯಾತ ನಂದಿಗಿರಿಧಾಮ ಸಂಪೂರ್ಣ ಬಂದ್ ಮಾಡಲಾಗಿದೆ.
ಈ ಹಿನ್ನಲೆ ನಂದಿಬೆಟ್ಟದ ತಪ್ಪಲಿನ ಚೆಕ್ ಪೋಸ್ಟ್ ಬಳಿ ಪ್ರವಾಸಿಗರಿಗೆ ತಡೆಯೊಡ್ಡಲಾಗುತ್ತಿದ್ದು, ನಂದಿಬೆಟ್ಟದ ತಪ್ಪಲಿನ ಚೆಕ್ ಫೋಸ್ಟ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದೆ.
ನಿಷೇಧದ ಕಾರಣ ತಪ್ಪಲಿನಲ್ಲೇ ಬೀಡುಬಿಟ್ಟಿರುವ ಸಾವಿರಾರು ಮಂದಿ ಪ್ರವಾಸಿಗರು, ಚೆಕ್ ಪೋಸ್ಟ್ ಬಳಿ ತಡೆ ಒಡ್ಡುತ್ತಿರುವ ಕಾರಣ ಅಕ್ಕ ಪಕ್ಕದ ಬೆಟ್ಟ ಗುಡ್ಡಗಳನ್ನು ಅತ್ತಿಳಿಯುತ್ತಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……