ಬೆಂಗಳೂರು: ಕಾರು ಅಪಘಾತದಲ್ಲಿ ತೀವ್ರ ಪೆಟ್ಟಾಗಿ ಚಿಕಿತ್ಸೆಗೆ ದಾಖಲಾಗಿರುವ ಮಗನ ಚಿಕಿತ್ಸೆಗೆ ನೆರವಾಗುವಂತೆ ತಾಯಿ ಒಬ್ಬರು ಮನವಿ ಮಾಡಿದ್ದಾರೆ.
ತೀರಾ ಕಷ್ಟದಲ್ಲಿ ಜೀವನ ನಡೆಸುತ್ತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಆರೂಢಿ ಗ್ರಾಮದ ತಂದೆಯಿಲ್ಲದ ಬಡ ಕುಟುಂಬದ ಯುವಕ ಕಾರ್ತಿಕ್, ಚಾಲಕ ವೃತ್ತಿ ಮಾಡಿ ಕುಟುಂಬವನ್ನು ಪೋಷಣೆ ಮಾಡುತ್ತಿದ್ದು, ಇತ್ತೀಚೆಗೆ ಅಪಘಾತದಲ್ಲಿ ತೀವ್ರ ಪೆಟ್ಟಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಚಿಕಿತ್ಸೆಗಾಗಿ ಪ್ರಖ್ಯಾತ ನಿಮಾನ್ಸ್, ವಿಕ್ಟೋರಿಯಾ ಸೇರಿದಂತೆ ಅನೇಕ ಆಸ್ಪತ್ರೆಗಳಿಗೆ ತೆರಳಿದರು ಸಹ ವೈದ್ಯರು ಸ್ಪಂದಿಸದ ಕಾರಣ, ಅನಿವಾರ್ಯವಾಗಿ ಕೆಂಗೇರಿ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಹಣದ ಕೊರತೆ ಎದುರಾಗಿದೆ.
ಚಿಕಿತ್ಸೆಗೆ ಅಗತ್ಯವಿರುವ ಹಣವನ್ನು ಭರಿಸುವುದೇ ತಾಯಿ ಮಂಜಮ್ಮ ಅವರಿಗೆ ದೊಡ್ಡ ಚಿಂತೆಯಾಗಿದ್ದು, ದಾನಿಗಳು ಹಾಗೂ ಸಾರ್ವಜನಿಕರ ಮಾನವೀಯ ನೆರವಿಗಾಗಿ ಮನವಿ ಮಾಡಿದ್ದಾರೆ.
ಆದ್ದರಿಂದ ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ದಾನಿಗಳು ಹಾಗೂ ಸಾರ್ವಜನಿಕರು ಉದಾರ ಮನಸ್ಸಿನಿಂದ ಧನಸಹಾಯ ಮಾಡಿದ್ದಲ್ಲಿ ಯುವಕನ ಚಿಕಿತ್ಸೆಗೆ ನೆರವಾಗುತ್ತದೆ.
ಸಹಾಯ ಮಾಡಲಿಚ್ಛಿಸುವವರು ಮಂಜಮ್ಮ ಅವರ ಹೆಸರಿನಲ್ಲಿ ಶಾಖೆಯಲ್ಲಿ ತೆರೆಯಲಾದ ಉಳಿತಾಯ ಖಾತೆ ಸಂಖ್ಯೆ 12182100003263 (PKGB0012182)ಕ್ಕೆ ಸಲ್ಲಿಸುವಂತೆ ವಿನಂತಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..