ಬೆಂಗಳೂರು: ನಗರಸಭೆ ಹಾಗು ಪುರಸಭೆಗೆ ಚುನಾವಣಾ ಇಲಾಖೆ ದಿನಾಂಕ ಘೋಷಿಸಲಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ. ಆದರೆ ನಾಮಪತ್ರ ಸಲ್ಲಿಕೆಗೆ ದಾಖಲೆ ಹಾಗೂ ನೀತಿ ನಿಯಮಗಳ ಕುರಿತು ಅಭ್ಯರ್ಥಿಗಳ ಗೊಂದಲವಿದೆ. ನಿಟ್ಟಿನಲ್ಲಿ ನಾಮಪತ್ರ ಸಲ್ಲಿಕೆಯ ಗೊಂದಲ ನಿವಾರಿಸಲು ಹರಿತಲೇಖನಿ ವಿಶೇಷ ವರದಿ ನೀಡುತ್ತಿದೆ.
1. ನಾಮಪತ್ರ ಪ್ರಪತ್ರ-2 ನಲ್ಲಿ ಸಲ್ಲಿಸಬೇಕು. ಸೂಚಕರು ಮತ್ತು ಅಭ್ಯರ್ಥಿಯು ಕಡ್ಡಾಯವಾಗಿ ಸಹಿ ಮಾಡಿರಬೇಕು. ಸಹಿ ಮಾಡದ ನಾಮಪತ್ರಗಳನ್ನ ತಿರಸ್ಕರಿಸಲಾಗುವುದು.
2. ನಾಮ ಪತ್ರದಲ್ಲಿ ಹೆಸರು ಮತ್ತು ಅಂಚೆ ವಿಳಾಸವನ್ನು ಸ್ಪಷ್ಟವಾಗಿ ಹಾಗೂ ಪೂರ್ಣವಾಗಿ ನಮೂದಿಸಬೇಕು.
3.> ಪ್ರಮಾಣ ಪತ್ರ / ಘೋಷಣಾ ಪತ್ರವನ್ನು ಅಫಿಡವಿಟ್ (ರೂ. 20 ರ ಛಾಪಾ ಕಾಗದಲ್ಲಿ) ಸಲ್ಲಿಸಬೇಕು. 2 (ಎರಡು) ಮೂಲಪ್ರ‍್ರತಿ ಹಾಗೂ 3 (ಮೂರು) ಜೆರಾಕ್ಸ್ ಪ್ರತಿ ಒಟ್ಟು 5 (ಐದು) ಪ್ರತಿ ನೀಡಬೇಕು.
> ಅಭ್ಯರ್ಥಿಯು ಅಫಿಡವೀಟ್‌ನಲ್ಲಿ ಎಲ್ಲಾ ಪುಟಗಳಿಗೆ ಸಹಿ ಮಾಡಿರಬೇಕು.
> ಅಫಿಡವೀಟ್‌ನ ಎಲ್ಲಾ ಕಾಲಂಗಳನ್ನು ಕಡ್ಡಾಯವಾಗಿ ಭರ್ತಿ ಮಾಡಿರಬೇಕು.
> ಅನ್ವಯವಾಗದ ಕಾಲಂಗಳಲ್ಲಿ “ಅನ್ವಯಿಸುವುದಿಲ್ಲ” / “NIL” ಎಂದು ಬರೆಯಬೇಕು
> ನೋಟರಿ ಪಬ್ಲಿಕ್‌ರಿಂದ ದೃಢೀಕರಿಸಿರಬೇಕು.
> ಅಫಿಡವಿಟ್ ಸಲ್ಲಿಸದಿದ್ದಲ್ಲೀ ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಕಲಂ 36 ರಂತೆ ಅನರ್ಹತೆಯ ಮಾನದಂಡವಾಗುತ್ತದೆ.
4. ಅಭ್ಯರ್ಥಿಯು ಕಡ್ಡಾಯವಾಗಿ ಸಂಬಂಧಿಸಿದ ವಾರ್ಡ್ ಮತದಾರರ ಪಟ್ಟಿಯ ದೃಢೀಕೃತ ಉದ್ದರಣವನ್ನು ಸಲ್ಲಿಸಬೇಕು.
5. ಅಭ್ಯರ್ಥಿಯ ವಯಸ್ಸು 21 ವರ್ಷ ಕ್ಕಿಂತ ಕಡಿಮೆ ಇರಬಾರದು (ದಾಖಲೆ ಲಗತ್ತಿಸುವುದು)
6. ಒಬ್ಬ ಅಭ್ಯರ್ಥಿ 4 ನಾಮಪತ್ರಗಳನ್ನು ಮಾತ್ರ ಸಲ್ಲಿಸಬಹುದಾಗಿದೆ.
7.> ರಾಷ್ಟ್ರೀಯ / ರಾಜ್ಯ ಪಕ್ಷವಾಗಿದ್ದಲ್ಲಿ ಒಬ್ಬರು ಸೂಚಕರು
> ನೋಂದಾಯಿತ / ಪಕ್ಷೇತರವಾಗಿದ್ದಲ್ಲಿ 5 ಜನ ಸೂಚಕರ ಸಹಿ ಮಾಡಿರಬೇಕು
> ಸೂಚಕರು ಕಡ್ಡಾಯವಾಗಿ ಇದೇ ವಾರ್ಡ್ ಕ್ಷೇತ್ರದ ಮತದಾರರಾಗಿರಬೇಕು
8. ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾಗಿದ್ದಲ್ಲಿ ಎ ಮತ್ತು ಬಿ ನಮೂನೆಗಳನ್ನು ನಾಮಪತ್ರ ಸಲ್ಲಿಸುವ ಕೊನೆಯ ದಿನ ದಿನಾಂಕ:23/08/201 ರಂದು 3.00 ಗಂಟೆಯೊಳಗೆ ಸಲ್ಲಿಸಬೇಕು. ಮತ್ತು ಮೂಲ ಸಹಿಯುಳ್ಳ ಫಾರಂ “ಎ” ಮತ್ತು ಫಾರಂ “ಬಿ” ಅಭ್ಯರ್ಥಿಯು ಸಲ್ಲಿಸಬೇಕು (ಮೂಲ ಪ್ರತಿ)
9. ಸಾಮಾನ್ಯ ಅಭ್ಯರ್ಥಿಗೆ ರೂ. 2000/- ಮತ್ತು ಹಿಂದುಳಿದ ವರ್ಗ/ ಅನುಸೂಚಿತ ಜಾತಿ/ ಅನುಸೂಚಿತ ಪಂಗಡ / ಮಹಿಳೆಗೆ ರೂ.1000/- ಠೇವಣಿ ಹಣ ನೀಡತಕ್ಕದ್ದು
10.> ಚುನಾವಣಾಧಿಕಾರಿಗಳ ಕಛೇರಿಯ 100 ಮೀ ಒಳಗೆ ಕೇವಲ ಎರಡು ವಾಹನಗಳು ಪ್ರವೇಶಿಸಬಹುದು.
> ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕಡ್ಡಾಯ ಸೂಚನೆಗಳು ಚುನಾವಣಾಧಿಕಾರಿಗಳ ಕೊಠಡಿ ಒಳಗೆ ಅಭ್ಯರ್ಥಿಯ ಜೊತೆಗೆ 2 ಜನರಿಗೆ ಮಾತ್ರ ಪ್ರವೇಶವಿರುತ್ತದೆ.
11. 4 (ನಾಲ್ಕು) ಪಾಸ್‌ಪೋರ್ಟ್ + 4 (ನಾಲ್ಕು) ಸ್ಟ್ಯಾಂಪ್ ಸೈಜ್ (2.5* 2 ಸೆಂ.ಮೀ ಅಳತೆಯ) ಇತ್ತೀಚಿನ ಭಾವಚಿತ್ರವಾಗಿದ್ದು ಅದು ಬಿಳಿ / ಅರೆ ಬಿಳಿ ಹಿನ್ನೆಲೆಯಲ್ಲಿ ಸಂಪೂರ್ಣ ಮುಖ ಚಿತ್ರದೊಂದಿಗೆ ಸಲ್ಲಿಸಬೇಕು.
12. ಭಾರತದ ಸಂವಿಧಾನ, ಪ್ರಜಾ ಪ್ರಾತಿನಿಧ್ಯ ಕಾಯ್ದೆಯಡಿಗಳಲ್ಲಿ ತಮ್ಮ ಆರ್ಹತೆ ಮತ್ತು ಅನರ್ಹತೆಗಳ ಬಗ್ಗೆ ಮಾಹಿತಿ ಹೊಂದಿರಬೇಕು.
13. ಮತಪತ್ರಗಳಲ್ಲಿ ಮುದ್ರಿತವಾಗಬೇಕಾದ ಅಭ್ಯರ್ಥಿಯ ಹೆಸರಿನ ಮಾದರಿ
14. ಅಭ್ಯರ್ಥಿಯ ಮಾದರಿ ಸಹಿ
15. ಮೀಸಲಿರುವ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುವವರು ತಹಸೀಲ್ದಾರ್‌ರವರಿಂದ ಪಡೆದಿರುವ ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..