ಬೆಂ.ಗ್ರಾ.ಜಿಲ್ಲೆ: ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಸಕಾಲ ಸಚಿವರಾದ ಬಿ.ಸಿ.ನಾಗೇಶ್ ಇಂದು(ಆಗಸ್ಟ್ 24 ರಂದು) ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಸಚಿವರು ಇಂದು ಬೆಳಿಗ್ಗೆ 09.30 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಹತ್ತಿರ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.
ನಂತರ ನೆಲಮಂಗಲದಿಂದ ಬೆಂಗಳೂರಿಗೆ ರಸ್ತೆ ಮೂಲಕ ಪ್ರಯಾಣಿಸಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಎ.ಆರ್.ರವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಾಥಮಿಕ, ಪ್ರೌಢ ಮತ್ತು ಸಕಾಲ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರು ಇಂದು ನೆಲಮಂಗಲ ತಾಲೂಕಿನಲ್ಲಿ ಭೇಟಿ ನೀಡಲಿರುವ ಶಾಲೆಗಳ ವಿವರ:
1. ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜ್, GJC, ನೆಲಮಂಗಲ ಟೌನ್.
2. ಶ್ರೀ ಮಂಜುನಾಥ ಬಾಲಕಿಯರ ಪ್ರೌಢಶಾಲೆ, ನೆಲಮಂಗಲ ಟೌನ್.
3. ಕರೀತಿಮ್ಮರಾಯಸ್ವಾಮಿ ಪ್ರೌಢ ಶಾಲೆ, ಬೇಗೂರು (ಮಂಜುನಾಥ ಪ್ರೌಢ ಶಾಲೆಯಿಂದ 9 ಕಿ. ಮೀ.)
4. KPS ತ್ಯಾಮಗೊಂಡ್ಲು. (ಬೇಗೂರಿನಿಂದ 9 ಕಿ. ಮೀ.)
5. TKKM High school, ತ್ಯಾಮಗೊಂಡ್ಲು.
6. ಜ್ಞಾನಧಾಮ High School ತ್ಯಾಮಗೊಂಡ್ಲು.
7. GHS ಬರದಿ ಮಂಡಿಗೆರೆ (ತ್ಯಾಮಗೊಂಡ್ಲುವಿನಿಂದ 10 ಕಿ. ಮೀ.) ಬರದಿ ಮಂಡಿಗೆರೆಯಿಂದ ಬೆಂಗಳೂರಿಗೆ ಪ್ರಯಾಣ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……