ದೊಡ್ಡಬಳ್ಳಾಪುರ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 38ನೇ ರಾಜ್ಯ ಮಟ್ಟದ ಟೆಕ್ವಾಂಡೋ ಸ್ಪರ್ಧೆಯಲ್ಲಿ, ನಗರದ ಲೋಕೇಶ್ ಟೆಕ್ವಾಂಡೋ ಅಕಾಡೆಮಿಯ ಕ್ರೀಡಾಪಟುಗಳು ಒಂದು ಬೆಳ್ಳಿ, ಮೂರು ಕಂಚಿನ ಪದಕ ಪಡೆದಿದ್ದಾರೆ.
ಕೋಚ್ ಲೋಕೇಶ್ ಅವರಿಂದ ತರಬೇತಿ ಪಡೆದ ಕ್ರೀಡಾಪಟುಗಳಾದ ಅಭಯ್ ಬೆಳ್ಳಿ ಪದಕವನ್ನು ಪಡೆದರೆ, ಮಯೂರ್, ಭಾರ್ಗವ್ ಹಾಗೂ ಕೀರ್ತನ ಕಂಚಿನ ಪದಕವನ್ನು ಪಡೆದಿದ್ದಾರೆ.
ಒಲಂಪಿಕ್ ಅಸೋಸಿಯೇಶನ್ ಆಫ್ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಸಿ.ಜಿ.ಶಶಿವರ್ಧನ್ ಪದಕಗಳನ್ನು ವಿತರಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..