ದೊಡ್ಡಬಳ್ಳಾಪುರ: ಮಂಗಳವಾರ ಸಂಭವಿಸಿದ ಕೂಲಿ ಕಾರ್ಮಿಕರ ಫುಡ್ ಪಾಯ್ಸನ್ ಪ್ರಕರಣಕ್ಕೆ ಕಾರಣವಾಗಿದ್ದ ಹೋಟೆಲ್ ಅನ್ನು ಪೊಲೀಸರು ಹಾಗೂ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಅಲ್ಲದೆ ಘಟನೆಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಚಿಕ್ಕಬೆಳವಂಗಲ ಸಮೀಪದ ಹೋಟೆಲ್ ನಿಂದ ಸಂಕರಸನಹಳ್ಳಿಯ ರೈತ ಊಟ ಕೊಂಡೋಯ್ದು ಕಾರ್ಮಿಕರಿಗೆ ನೀಡಿದ್ದ ವೇಳೆ ಅವಾಂತರ ಸೃಷ್ಟಿಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಪ್ರಕರಣದ ಕುರಿತು ಹರಿತಲೇಖನಿಯ ಓದುಗರಾದ ರವಿ ಅವರು ಮಂಗಳವಾರ ಅದೇ ಹೋಟೆಲ್ ನಲ್ಲಿ ಊಟ ಮಾಡಿದ್ದು ಸಾಂಬಾರ್ ನಲ್ಲಿ ವ್ಯತ್ಯಾಸವಾಗಿತ್ತು, ಈ ಕುರಿತು ಹೋಟೆಲ್ ಅವರಿಗೆ ಗಮನಕ್ಕೆ ತಂದರು ಮಹತ್ವ ನೀಡಲಿಲ್ಲ. ಅವರು ಸಹಿತ ಸುಮಾರು ಹತ್ತು ಮಂದಿ ಊಟ ತಿನ್ನದೆ ಕೈತೊಳೆದು ತೆರಳಿದೆವು ಎಂದು ಕರೆ ಮಾಡಿ ತಿಳಿಸಿದ್ದಾರೆ.
ಹೋಟೆಲ್ ಗಳ ನಡುವೆ ತೀವ್ರ ಸ್ಪರ್ಧೆ: ಊಟದ ಕುರಿತು ಸ್ಪರ್ಧೆಗೆ ಬೀಳುತ್ತಿರುವ ಹೋಟೆಲ್ ಮಾಲೀಕರು ಹಾಗೂ ಸಿಬ್ಬಂದಿಗಳಿಂದ ಇಂತಹ ಅಚಾತುರ್ಯಕ್ಕೆ ಕಾರಣವಾಗುತ್ತಿದೆ ಎಂಬ ಆರೋಪ ವ್ಯಾಪಕವಾಗಿದೆ.
ತಾಲೂಕಿನ ಹಲವು ಹೋಟೆಲ್, ಬೇಕರಿಗಳಲ್ಲಿ ಸ್ಚಚ್ಚತೆ ಕುರಿತು ಗಮನಹರಿಸುತ್ತಿಲ್ಲ, ಪ್ರತಿಷ್ಟಿತ ಬೇಕರಿಗಳಲ್ಲಿ ಬೆಂಗಳೂರಿನಲ್ಲಿ ಉಳಿದ ವಸ್ತುಗಳನ್ನು ಇಲ್ಲಿ ಮಾರಾಟ ಮಾಡುತ್ತಿದ್ದು, ಹೇಳುವವರು ಕೇಳುವವರು ಇಲ್ಲವಾಗಿದ್ದಾರೆ.ಇದನ್ನು ಗಮನಿಸಬೇಕಾದ ಆರೋಗ್ಯ ಇಲಾಖೆಯ ಪುಡ್ ಇನ್ಸ್ಪೆಕ್ಟರ್ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ದೊಡ್ಡಬಳ್ಳಾಪುರದ ಕೀರ್ತಿ ಮಹೇಶ್ ಆರೋಪಿಸಿದ್ದಾರೆ.
ಮತ್ತೆ ಈ ರೀತಿಯ ಘಟನೆ ಮರುಕಳಿಸದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಲು ಹೋಟೆಲ್ ಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಇನ್ನೂ ಅನಾರೋಗ್ಯಕ್ಕೆ ಈಡಾಗಿ ಚಿಕಿತ್ಸೆ ಪಡೆದು ಊರಿಗೆ ತೆರಳಿದ್ದ ಕಾರ್ಮಿಕರ ಆರೋಗ್ಯ ಸುಧಾರಿಸಿದ್ದು, ಆರೋಗ್ಯ ಇಲಾಖೆ ನಿರಂತರ ಸಂಪರ್ಕದಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..