ಕುಶಿನಗರ್: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾಂಗ್ರೆಸ್ ಪಕ್ಷವನ್ನು ತೀವ್ರ ಮಾತುಗಳಲ್ಲಿ ಖಂಡಿಸಿದ್ದಾರೆ.
ಇಂದು ಕುಶಿನಗರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಯಾರು ದೇಶಕ್ಕೆ ನೋವು ಕೊಡುತ್ತಾರೋ ಅವರನ್ನು ಸಹಿಸಿಕೊಳ್ಳುವುದಿಲ್ಲ ಎಂದು ಹೇಳಿದರು. ಆದರೆ ಅದಕ್ಕೂ ಮೊದಲು ‘ಕಾಂಗ್ರೆಸ್ ಪಕ್ಷ ಭಯೋತ್ಪಾದನೆಯ ತಾಯಿ’ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಈ ಹಿಂದೆ ಎಸ್ಪಿ, ಬಿಎಸ್ಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ಇದ್ದಾಗ ಅವು ಕೊಟ್ಟಿದ್ದೇನು..? ಬರೀ ಕಾಯಿಲೆಗಳು, ನಿರುದ್ಯೋಗ, ಮಾಫಿಯಾ ರಾಜ್ಯ ಮತ್ತು ಭ್ರಷ್ಟಾಚಾರಗಳನ್ನೇ ಕೊಟ್ಟಿದ್ದಾರೆ.
2017ಕ್ಕಿಂತಲೂ ಮೊದಲು ಎಲ್ಲರಿಗೂ ರೇಶನ್ ಸಿಗುತ್ತಿತ್ತಾ? ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಳಿತದಲ್ಲಿ ಓಲೈಕೆ ರಾಜಕಾರಣಕ್ಕೆ ಅವಕಾಶವೇ ಇಲ್ಲ. ಹಿಂದೆ ಯಾರು ಅಬ್ಬಾ ಜಾನ್ ಎನ್ನುತ್ತಿದ್ದರೋ (ಓಲೈಕೆ ರಾಜಕಾರಣ ಮಾಡುತ್ತಿದ್ದರೋ) ಅವರಿಗೆ ಮಾತ್ರ ರೇಶನ್ ಸಿಗುತ್ತಿತ್ತು. ಬಡವರ ರೇಶನ್ ಎಲ್ಲ ಅವರೇ ನುಂಗುತ್ತಿದ್ದರು ಎಂದು ಯೋಗಿ ವಾಗ್ದಾಳಿ ನಡೆಸಿದ್ದಾರೆ.
ನೆಹರೂ ಅವರಿಗೆ ರಾಮನಲ್ಲಿ ನಂಬಿಕೆ ಇರಲಿಲ್ಲ..ರಾಮನ ಭಕ್ತರಿಗೆ ಅವಮಾನ ಮಾಡುವವರನ್ನು ಜನರು ಒಪ್ಪಿಕೊಳ್ಳಲೇಬಾರು. ಚೇಳು ಎಲ್ಲಿದ್ದರೂ ಅದು ಕಚ್ಚುತ್ತದೆ ಎಂಬುದನ್ನು ಸದಾ ನೆನಪಿಟ್ಟುಕೊಳ್ಳಬೇಕು. ನಮ್ಮ ಪ್ರಧಾನಮಂತ್ರಿಯವರು ದೇಶದಲ್ಲಿದ್ದ ಅನಿಷ್ಟ ಪದ್ಧತಿ ತ್ರಿವಳಿ ತಲಾಖ್ನ್ನು ರದ್ದುಗೊಳಿಸಿದರು.ಎಂದು ಆರೋಪಿಸಿದ್ದಾರೆಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..