ದೊಡ್ಡಬಳ್ಳಾಪುರ: ತಾಲೂಕಿನಾಧ್ಯಂತ ಶುಕ್ರವಾರ ನಡೆದ ವಿಶೇಷ ಕೋವಿಡ್-19 ಲಸಿಕಾ ಮೇಳ ದಾಖಲೆ ಬರೆದಿದ್ದರೆ, ಗ್ರಾಮಾಂತರ ಪ್ರದೇಶದಲ್ಲಿ ಸಿಬ್ಬಂದಿ ಕೊರತೆಯಿಂದ ಲಸಿಕಾ ಮೇಳಕದಲ್ಲಿ ಬೆವರು ಸುರಿಸುತಾಗಿತ್ತು.
18 ವರ್ಷ ಮೇಲ್ಪಟ್ಟವರಿಗೆ ಆಯೋಜಿಸಲಾಗಿದ್ದ ಕೋವಿಡ್-19 ವಿಶೇಷ ಲಸಿಕಾ ಮೇಳದಲ್ಲಿ, ಹರಿತಲೇಖನಿಗೆ ಆರೋಗ್ಯ ಇಲಾಖೆ ಮೂಲಗಳ ನೀಡಿರುವ ಮಾಹಿತಿ ಅನ್ವಯ 16 ಸಾವಿರ ಗಡಿ ಮೀರಿ ಲಸಿಕೆ ನೀಡಲಾಗಿದೆ ಎನ್ನಲಾಗಿದೆ.
ಜಿಲ್ಲಾಡಳಿತ ದೊಡ್ಡಬಳ್ಳಾಪುರ ತಾಲ್ಲೂಕಿಗೆ 30 ಸಾವಿರ ಲಸಿಕೆ ಗುರಿಯನ್ನು ನೀಡಿತ್ತಾದರೂ. ತಾಲೂಕು ಆಡಳಿತ, ಆರೋಗ್ಯ ಇಲಾಖೆ, ತಾಲೂಕು ಪಂಚಾಯಿತಿ, ಗ್ರಾಮಪಂಚಾಯಿತಿ ಮತ್ತಿತರ ಇಲಾಖೆಗಳ ಸಹಯೋಗದೊಂದಿಗೆ ಬೆಳಗ್ಗೆಯಿಂದಲೂ ನಡೆದ ಲಸಿಕಾ ಅಭಿಯಾನದಲ್ಲಿ ದಾಖಲೆಯ 16 ಸಾವಿರಕ್ಕು ಹೆಚ್ಚು ಲಸಿಕೆ ನೀಡಲಾಗಿದೆ ಎನ್ನಲಾಗುತ್ತಿದೆ.
ನಾಗರೀಕರು ಲಸಿಕೆಯನ್ನು ಪಡೆಯಲು ಸಹಕಾರಿಯಾಗುವಂತೆ ಅವರ ಗ್ರಾಮ ಮಟ್ಟಗಳಲ್ಲಿ ಹಾಗೂ ಪಟ್ಟಣಗಳ ವ್ಯಾಪ್ತಿಯಲ್ಲಿ ಬರುವ ವಾರ್ಡ್ ಗಳಲ್ಲಿಯೇ ಲಸಿಕಾಕರಣದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎನ್ನಲಾಗಿದ್ದರೂ, ಗ್ರಾಮಾಂತರ ಪ್ರದೇಶಗಳಲ್ಲಿನ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ಕೈಗಾರಿಕಾ ವಸಾಹತು, ಕೊಳಗೇರಿ ಪ್ರದೇಶಗಳು, ಆಪಾರ್ಟ್ಮೆಂಟ್ಸ್ ಗಳು, ಕಟ್ಟಡ ಕಾಮಗಾರಿ ಸ್ಥಳಗಳು, ಅಲೆಮಾರಿ ಗುಂಪುಗಳು, 18 ವರ್ಷ ಮೇಲ್ಪಟ್ಟ ಕಾಲೇಜು ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಕ್ಯಾಬ್ ಡ್ರೈವರ್ ಗಳು, ಹೋಟಲ್ ಸಿಬ್ಬಂದಿಗಳು, ಗಾರ್ಮೆಂಟ್ಸ್ ನೌಕರರಿಗೆ ಲಸಿಕೆ ನೀಡಲು ಬಳಸಿಕೊಂಡ ಕಾರಣ ನಗರ ಮತ್ತು ಕಸಬಾದಲ್ಲಿ ಹೆಚ್ಚಿನ ಲಸಿಕೆ ಕಾರ್ಯವಾಗಿದ್ದು, ಗ್ರಾಮಾಂತರ ಪ್ರದೇಶದಲ್ಲಿ ಉಳಿದ ಸಿಬ್ಬಂದಿಗಳು ಮೇಳದಲ್ಲಿ ಲಸಿಕೆ ನೀಡಲು ಆಸ್ಪತ್ರೆ, ಲಸಿಕಾ ಮೇಳಾ ಆಯೋಜಿತ ಸ್ಥಳ ಹಾಗೂ ಹಳ್ಳಿಗಳಿಗೆ ತೆರಳಿ ಲಸಿಕೆ ನೀಡುವ ಮೂಲಕ ಏಕಪಾತ್ರಾಭಿನಯ ಮಾಡಬೇಕಾದ ಅನಿರ್ವಾರ್ಯತೆ ಗ್ರಾಮಾಂತರ ಪ್ರದೇಶಗಳಲ್ಲಿ ಕಂಡು ಬಂತ್ತು.
ಲಸಿಕೆ ಪಡೆಯದೆ ಇದ್ದ ಯುವ ಸಮುದಾಯದ ಬಹುತೇಕರು ಪ್ರಧಾನಿ ಮೋದಿ ಜನ್ಮದಿನದ ಕಾರಣ ಲಸಿಕೆ ಪಡೆದು ಸಂಭ್ರಮಿಸಿದರೆ, ಲಸಿಕೆ ಕಾರ್ಯದ ವಿಳಂಬ, ಆರೋಗ್ಯ ಇಲಾಖೆಯ ಕೆಲ ಸಿಬ್ಬಂದಿಗ ಬೇಜವಬ್ದಾರಿ, ಲಸಿಕೆ ಕೊರತೆಯಿಂದ ಬೇಸತ್ತಿದ್ದ ಜನತೆ ಮೇಳದಲ್ಲಿ ಪಾಲ್ಗೊಂಡು ಲಸಿಕೆ ಪಡೆದು ವಿಶೇಷ ಮೇಳವನ್ನು ಸದುಪಯೋಗ ಪಡಿಸಿಕೊಂಡರು.
ಪ್ರಸ್ತುತ ತಾಲೂಕಿನಲ್ಲಿ 16 ಸಾವಿರಕ್ಕು ಹೆಚ್ಚು ಮಂದಿಗೆ ಲಸಿಕೆ ನೀಡುವ ಮೂಲಕ ದಾಖಲೆ ಬರೆಯಲಾಗಿದೆ ಎನ್ನಲಾಗುತ್ತಿದ್ದು, ಇದಕ್ಕು ಮುನ್ನ ತಾಲೂಕಿನಲ್ಲಿ 8 ಸಾವಿರ ಲಸಿಕೆ ನೀಡಿರುವುದು ದಾಖಲೆಯಾಗಿತ್ತು ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..