ದೊಡ್ಡಬಳ್ಳಾಪುರ: ನಗರದ ಲಾವಣ್ಯ ಪದವಿ ಪೂರ್ವ ಕಾಲೇಜಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ 114ನೇ ಜಯಂತಿಯನ್ನು ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಲಾವಣ್ಯ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ವಿಶ್ವಾಸ್ ಗೌಡ ಮತ್ತು ಎಬಿವಿಪಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹ ಸಂಚಾಲಕ ಸುಬ್ರಮಣಿ, ಇಂದಿನ ಯುವಕರು ಭಗತ್ ಸಿಂಗ್ ಅವರ ಆದರ್ಶದಲ್ಲಿ ನಡೆಯಬೇಕಿದೆ, ಅವರು ಕಂಡ ಸ್ವಾತಂತ್ರ್ಯ ನಮಿಗಿನ್ನು ದೊರೆತಿಲ್ಲ, ದೇಶದ ಪ್ರತಿ ಜನರು ಎಂದು ನೆಮ್ಮದಿಯಿಂದ ಊಟ ಮಾಡುತ್ತಾರೋ, ಪ್ರತಿ ಒಬ್ಬರಿಗೂ ಶಿಕ್ಷಣ ದೊರೆಯುತ್ತದೆಯೋ, ಸ್ತ್ರೀಯರು ಎಂದು ಅಂಜಿಕೆಯಿಲ್ಲದೆ ರಾತ್ರಿ ವೇಳೆಯೂ ಸಂಚರಿಸುತ್ತಾರೋ ಆಗ ಭಾರತ ಸಂಪೂರ್ಣವಾಗಿ ಸ್ವಾತಂತ್ರ್ಯವಾಗುತ್ತದೆ ಎಂಬುದಾಗಿತ್ತು. ಅವರ ಕನಸನ್ನು ನನಸು ಮಾಡುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಲಾವಣ್ಯ ಕಾಲೇಜಿನ ಪ್ರಾಧ್ಯಾಪಕರಾದ ನವೀನ್, ಮಂಜುನಾಥ್, ಮಹದೇವಪ್ಪ, ಎಬಿವಿಪಿ ಕಾರ್ಯಕರ್ತರಾದ ಕೆ.ಪಿ.ಉದೀತ್, ತನಿಷ್ಕ್, ಶೇಖರ್ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……