ಬೈಂದೂರು: ಉದ್ಯೋಗವಿಲ್ಲದೆ ಬೇಸರಗೊಂಡ 25 ವರ್ಷದ ಯುವಕ ನೋರ್ವ ನೇಣಿಗೆ ಶರಣಾಗಿದ್ದಾನೆ.
ಮೃತನನ್ನು ತಗ್ಗರ್ಸೆ ಗ್ರಾಮದ ಯುವಕ ರಕ್ಷತ್ (25) ಎಂದು ಗುರುತಿಸಲಾಗಿದೆ.
ರಕ್ಷತ್ ಸುಮಾರು 4 ವರ್ಷಗಳಿಂದ ಯಾವುದೇ ಉದ್ಯೋಗವಿಲ್ಲದೇ ಒಂಟಿಯಾಗಿ ಮನೆಯಲ್ಲಿ ಇದ್ದು ಮಾನಸಿಕ ಖಿನ್ನತೆಗೊಳಗಾಗಿ ವಸತಿ ಗೃಹದಲ್ಲಿ ಯಾರು ಇಲ್ಲದ ಸಮಯ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ವರದಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿದ್ದು ಅತೀ ಮುಖ್ಯವಾಗಿ ಅರ್ಥಿಕ ಕಾರಣಗಳಿಗೆ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಕೋಸ್ಟಲ್ ಮಿರರ್ ವರದಿ ಮಾಡಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……