ದೊಡ್ಡಬಳ್ಳಾಪುರ: ನಗರಸಭೆ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ನಡೆಸಲು ಚುನಾವಣಾಧಿಕಾರಿ ಅರುಳ್ ಕುಮಾರ್ ದಿನಾಂಕ ನಿಗದಿ ಪಡಿಸಿದ್ದಾರೆ.
ದೊಡ್ಡಬಳ್ಳಾಪುರ ನಗರಸಭೆಯ 9ನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಆಯ್ಕೆಗೆ ಇದೇ ತಿಂಗಳ 26ರಂದು ನಗರಸಭೆ ಸಭಾಂಗಣದಲ್ಲಿ ಸಭೆ ನಡೆಸಲು ಆದೇಶಿಸಿದ್ದಾರೆ.
ನಾಮಪತ್ರ ಸ್ವೀಕರಿಸಲು ಅಕ್ಟೋಬರ್ 26ರ ಬೆಳಗ್ಗೆ 9ರಿಂದ 11ವರೆಗೆ ನಿಗದಿ ಪಡಿಸಲಾಗಿದ್ದು, ಮಧ್ಯಾಹ್ನ 1ಗಂಟೆಗೆ ಚುನಾವಣೆ ಸಭೆ ಪ್ರಾರಂಭವಾಗಲಿದೆ.
ನಾಮಪತ್ರ ಪರಿಶೀಲನೆಗೆ ಮಧ್ಯಾಹ್ನ 1-15ರಿಂದ 1-30ರ ವರಗೆ ಸಮಯ ನಿಗದಿ ಪಡಿಸಲಾಗಿದ್ದು, ನಾಮಪತ್ರ ಹಿಂಪಡೆಯಲು ಮಧ್ಯಾಹ್ನ 1-30 ರಿಂದ 2 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಅಲ್ಲದೆ ಚುನಾವಣೆ ಅಗತ್ಯವೆನಿಸಿದಲ್ಲಿ ಮಧ್ಯಾಹ್ನ 2ರ ನಂತರ ಚುನಾವಣೆ ನಡೆಸಲು ಸಮಯ ನಿಗದಿ ಪಡಿಸಲಾಗಿದೆ.
ಅಕ್ಟೋಬರ್ 08.2020 ರಂದು ಹೊರಡಿಸಿರುವ ಅಧಿಸೂಚನೆಯಂತೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ‘ಅ’ (ಮಹಿಳೆ) ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ವರ್ಗಕ್ಕೆ ಮೀಸಲಾಗಿದ್ದು, ಅದರನ್ವಯ ಚುನಾವಣೆ ನಡೆಯಲಿದೆ.
ಚುನಾವಣೆ ಮುಗಿದು ಹಲವು ದಿನ ಕಳೆದರು, ಸ್ಪಷ್ಟ ಬಹುಮತವಿಲ್ಲದೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಯಾರು ಆಯ್ಕೆಯಾಗಬಹುದೆಂಬ ಕುತೂಹಲಕ್ಕೆ ಅ.26ರಂದು ತೆರೆಬೀಳಲಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…….