ದೊಡ್ಡಬಳ್ಳಾಪುರ: ಕಳೆದ ಕೆಲ ದಿನಗಳಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆ ಹಲವು ಕೆರೆಗಳಿಗೆ ನೀರು ತುಂಬಿಸಿ ಹರ್ಷಕ್ಕೆ ಕಾರಣವಾಗಿದ್ದರೆ. ಸೋಮವಾರ ರಾತ್ರಿ ಆರ್ಭಟಿಸಿರುವ ಮಳೆರಾಯ ಕೆಲವೆಡೆ ಅವಾಂತರ ಸೃಷ್ಟಿಸಿ ಸಾರ್ವಜನಿಕರ ಆಸ್ತಿಪಾಸ್ತಿ ನಷ್ಟ ಉಂಟಾಗಿ, 6 ಮೇಕೆಗಳ ಜೀವ ಹರಣಕ್ಕು ಕಾರಣವಾಗಿದೆ.
ಕುಸಿದ ಮನೆ: ನಗರದ ಕರೇನಹಳ್ಳಿಯ ಎಸ್.ಎನ್.ಪ್ರೇಮನಾಥ್ ಎನ್ನುವವರಿಗೆ ಸೇರಿದ ಮನೆ ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಭಾನುವಾರವಷ್ಟೆ ಆ ಮನೆಯಿಂದ ಬೇರೆ ಮನೆಗೆ ಪ್ರೇಮನಾಥ್ ಕುಟುಂಬ ಸ್ಥಳಾಂತರಗೊಂಡಿತ್ತು.
ಮತ್ತೆ ಕುಸಿದ ಸೇತುವೆ: ಸತತ ಹಲವು ವರ್ಷಗಳಿಂದ ಸಂಪರ್ಕ ಸೇತುವೆ ಕಡಿತಗೊಂಡು ತಾತ್ಕಾಲಿಕ ಸೇತುವೆಯನ್ನೆ ಆಶ್ರಯಿಸಿರುವ ಕೊಟ್ಟಿಗೇಮಾಚೇನಹಳ್ಳಿ ಗ್ರಾಮಸ್ಥರಿಗೆ ಮಳೆ ಮತ್ತೆ ಸಂಕಷ್ಟ ತಂದೊಡ್ಡಿದೆ. ಸೋಮವಾರ ಸುರಿದ ಮಳೆಯಿಂದ ತಾತ್ಕಾಲಿಕ ಸೇತುವೆ ಒಂದು ಭಾಗ ಕುಸಿದಿದ್ದು ಮತ್ತೆ ಗ್ರಾಮಕ್ಕೆ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ.
ಆರು ಮೇಕೆಗಳ ಸಾವು: ಮತ್ತೊಂದು ಪ್ರಕರಣದಲ್ಲಿ ಕೂಗೋನಹಳ್ಳಿ ಕಾಲೋನಿಯಲ್ಲಿ ಗೋಡೆ ಕುಸಿದ ಪರಿಣಾಮ 6 ಮೇಕೆಗಳು ಸಾವನಪ್ಪಿವೆ.
ಸೋಮವಾರ ರಾತ್ರಿ 10ಗಂಟೆ ಸಮಯದಲ್ಲಿ ಸುರಿದ ಮಳೆಗೆ ಕೂಗೋನಹಳ್ಳಿ ಕಾಲೋನಿಯಲ್ಲಿ ಚೆನ್ನಪ್ಪ ಎನ್ನವವರ ಕೊಟ್ಟಿಗೆಯ ಮೇಲೆ ಗೋಡೆ ಕುಸಿದ ಪರಿಣಾಮ ಕೊಟ್ಟಿಗೆಯಲ್ಲಿದ್ದ 6 ಮೇಕೆಗಳು ಸಾವನಪ್ಪಿವೆ. ಇದರಿಂದಾಗಿ ರೈತ ಚೆನ್ನಪ್ಪರಿಗೆ ಸಾವಿರಾರು ನಷ್ಟವಾಗಿದೆ.
ಒಟ್ಟಾರೆ ತಾಲೂಕಿನಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆ ಹಲವು ಅವಾಂತರ ಸೃಷ್ಟಿಸಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……