ದೊಡ್ಡಬಳ್ಳಾಪುರ: ಕೊವಿಡ್ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಕಾರ್ಯಕ್ರಮ ಗುರುವಾರದಿಂದ ತಾಲೂಕಿನ ಶಾಲೆಗಳಲ್ಲಿ ಪುನರ್ ಆರಂಭವಾಗಿದೆ.
ನಗರದ ಸರ್ಕಾರಿ ಪ.ಪೂ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಅಕ್ಷರ ದಾಸೋಹ ಬಿಸಿಯೂಟ ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಕಾರಿ ಆರ್.ವಿ.ಶುಭಮಂಗಳ ವಿದ್ಯಾರ್ಥಿಗಳಿಗೆ ಊಟ ಬಡಿಸುವ ಮೂಲಕ ಚಾಲನೆ ನೀಡಿದರು. ಮಕ್ಕಳು ಸಾಮಾಜಿಕ ಅಂತರದೊಂದಿಗೆ ಕುಳಿತು, ಶ್ಲೋಕ ಪಠಿಸಿ ಬಿಸಿಯೂಟ ಸೇವಿಸಿದರು. ಮೊದಲ ದಿನದ ಅಂಗವಾಗಿ ಸಿಹಿ ಹಾಗೂ ಖಾರಾ ಪೊಂಗಲ್ ಮಾಡಲಾಗಿತ್ತು.
ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ನಡೆದು ಸುಮಾರು ಒಂದೂವರೆ ವರ್ಷ ಕಳೆದಿದ್ದು, ಕೊವಿಡ್ ಸಮಯದಲ್ಲಿ ಮಕ್ಕಳಿಗೆ ದಿನಸಿ ನೀಡಲಾಗುತ್ತಿತ್ತು. ಈಗ ಬಿಸಿಯೂಟ ಮತ್ತೆ ಆರಂಭಗೊಂಡಿದ್ದು, ಶಾಲೆಯಲ್ಲಿನ 730 ಮಕ್ಕಳು ನಿತ್ಯ ಊಟ ಮಾಡುವ ಮೂಲಕ ಹಸಿವನ್ನು ನೀಗಿಸಿಕೊಂಡು, ತರಗತಿಗಳಿಗೆ ಉತ್ಸಾಹದಿಂದ ಹಾಜರಾಗಲು ಸಹಕಾರಿಯಾಗಿದೆ ಎಂದು ಶಾಲೆಯ ಪ್ರಭಾರಿ ಉಪಪ್ರಾಂಶುಪಾಲ ಮಂಜುನಾಥ್ ಜಟ್ಟಯ್ಯ ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಸಿಆರ್ಪಿ ಸಿ.ಎಚ್.ರಾಮಚಂದ್ರಯ್ಯ ಹಾಗೂ ಶಾಲೆಯ ಶಿಕ್ಷಕರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ...