ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಅವಧಿ ಮುಗಿದಿರುವ ಅರುಳುಮಲ್ಲಿಗೆ ಗ್ರಾಮ ಪಂಚಾಯಿತಿಯ18 ಸದಸ್ಯ ಸ್ಥಾನಗಳು, ದರ್ಗಾಜೋಗಿಹಳ್ಳಿಯ 24 ಸದಸ್ಯ ಸ್ಥಾನಗಳು ಹಾಗೂ ತೆರವಾಗಿರುವ ತಿಪ್ಪೂರು ಪಂಚಾಯ್ತಿಯ 1ಸ್ಥಾನಕ್ಕೆ ನಡೆದ ಚುನಾವಣೆ ಶಾಂತಿಯುತವಾಗಿ ಮುಗಿದಿದೆ.
ಅಂತಿಮ ವರದಿಯಂತೆ ಶೇ.83.11 ರಷ್ಟು ಮತದಾನ ನಡೆದಿದ್ದು, ಎಸ್.ಎಂ.ಗೊಲ್ಲಹಳ್ಳಿಯಲ್ಲಿ ಅತಿಹೆಚ್ಚು ಶೇ. 97.45 ರಷ್ಟು ಮತದಾನ ನಡೆದಿದೆ.
ಅರಳುಮಲ್ಲಿಗೆ ಗ್ರಾಮಪಂಚಾಯಿತಿ: ಅರಳುಮಲ್ಲಿಗೆ -1 ಒಟ್ಟು 799 ಮತದಾರರಲ್ಲಿ 740 (ಶೇ.92.62), ಅರಳುಮಲ್ಲಿಗೆ-2 ಒಟ್ಟು 960 ಮತದಾರರಲ್ಲಿ 847(ಶೇ.88.23), ಏಕಾಶಿಪುರ ಒಟ್ಟು 867 ಮತದಾರರಲ್ಲಿ 820 (ಶೇ.94.58), ಆಲಹಳ್ಳಿ ಒಟ್ಟು 888 ಮತದಾರರಲ್ಲಿ 827 (ಶೇ.93.13), ಎಸ್.ಎಂ.ಗೊಲ್ಲಹಳ್ಳಿ ಒಟ್ಟು 549 ಮತದಾರರಲ್ಲಿ 535 (ಶೇ.97.45), ಕರೇನಹಳ್ಳಿ -1 ಒಟ್ಟು 2225 ಮತದಾರರಲ್ಲಿ 1415(ಶೇ.63.60 ), ಕರೇನಹಳ್ಳಿ -2 ಒಟ್ಟು 1038 ಮತದಾರರಲ್ಲಿ 753 (ಶೇ.73.54) ಒಟ್ಟು 7,326 ಮತದಾರರಲ್ಲಿ 5937 ಮಂದಿ (ಶೇ.81.04) ಮತದಾನ ಮಾಡಿದ್ದಾರೆ.
ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯಿತಿ: ಒಟ್ಟು 7,418 ಮತದಾರಿದ್ದು, ವಾರ್ಡ್ -1 ರಲ್ಲಿ ಒಟ್ಟು 646 ಮತದಾರರಲ್ಲಿ 534(ಶೇ.82.66), ವಾರ್ಡ್ -2 ರಲ್ಲಿ ಒಟ್ಟು 874 ಮತದಾರರಲ್ಲಿ 660(ಶೇ.75.51), ವಾರ್ಡ್ –3 ರಲ್ಲಿ ಒಟ್ಟು 672 ಮತದಾರರಲ್ಲಿ 583(ಶೇ.86.76), ವಾರ್ಡ್ -4 ರಲ್ಲಿ ಒಟ್ಟು 1124 ಮತದಾರರಲ್ಲಿ 913(ಶೇ.81.23) ವಾರ್ಡ್ -5 ರಲ್ಲಿ ಒಟ್ಟು 662 ಮತದಾರರಲ್ಲಿ 553(ಶೇ.83.53) ವಾರ್ಡ್ -6 ರಲ್ಲಿ ಒಟ್ಟು 488 ಮತದಾರರಲ್ಲಿ 404(ಶೇ.82.79), ವಾರ್ಡ್ -7 ರಲ್ಲಿ ಒಟ್ಟು 754 ಮತದಾರರಲ್ಲಿ 618(ಶೇ.81.96), ವಾರ್ಡ್ -8 ರಲ್ಲಿ ಒಟ್ಟು 703 ಮತದಾರರಲ್ಲಿ 630(ಶೇ.89.62) ವಾರ್ಡ್ -9 ರಲ್ಲಿ ಒಟ್ಟು 866 ಮತದಾರರಲ್ಲಿ 746(ಶೇ.82.66), ನಾಗಸಂದ್ರ ಒಟ್ಟು 629 ಮತದಾರರಲ್ಲಿ 600(ಶೇ.95.30) ಸೇರಿ ಒಟ್ಟಾರೆ 6241 (ಶೇ.84.13) ಮಂದಿ ಮತಚಲಾಯಿಸಿದ್ದಾರೆ.
ತಿಪ್ಪೂರು ಗ್ರಾಮ ಪಂಚಾಯಿತಿ: ಒಂದು ಕ್ಷೇತ್ರದಲ್ಲಿ 792 ಮತದಾರರಲ್ಲಿ 734 (ಶೇ.92.68) ಮಂದಿ ಮತದಾರರು ಮತ ಚಲಾಯಿಸಿದ್ದಾರೆ.
ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಡಿ.30ರಂದು ಮತ ಎಣಿಕೆ ನಡೆಯಲಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….