ಬೆಂ.ಗ್ರಾ.ಜಿಲ್ಲೆ: ಕೋವಿಡ್-19 ವೈರಾಣುವಿನ ಹೊಸ ರೂಪಾಂತರಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸೂಕ್ತ ಮುಂಜಾಗ್ರತಾ ಕ್ರಮವಾಗಿ ಹಾಗೂ ಲಸಿಕೆ ಪಡೆಯದೇ ಬಾಕಿ ಉಳಿದಿರುವ ಫಲಾನುಭವಿಗಳಿಗೆ ಲಸಿಕೆಗಳನ್ನು ನೀಡುವ ಉದ್ದೇಶದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಡಿಸೆಂಬರ್ 27ರ ಸೋಮವಾರ ಬೆಳಿಗ್ಗೆ 7.30 ಗಂಟೆಯಿಂದ ಜನವರಿ 2ರ ಭಾನುವಾರದವರೆಗೆ ತೀವ್ರ ತರಹದ ಕೋವಿಡ್-19 ಲಸಿಕಾಕರಣ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಲಸಿಕಾಕರಣ ಅಭಿಯಾನದಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಗ್ರಾಮಗಳಿಗೆ ವೈದ್ಯಕೀಯ ತಂಡಗಳು ಭೇಟಿ ನೀಡಿ ಲಸಿಕೆ ನೀಡಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ತಿಳಿಸಿದ್ದಾರೆ.
ಡಿಸೆಂಬರ್ 28ರಂದು ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ರಾಮಪುರ, ನಲ್ಲಗಾನಹಳ್ಳಿ, ಯನಗುಂಟೆ, ಕಮ್ಮಸಂದ್ರ, ಅತ್ತಿಬೆಲೆ, ಬೆಂಡಿಗಾನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ತೆನಿಯೂರು, ಚಿಕ್ಕ ಅರಳಗೆರೆ, ಮುತ್ಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಮುತ್ಕೂರು, ಮೆದಿಮಲ್ಲಸಂದ್ರ, ಅನುಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಓಬಳಾಪುರ, ಗುಂಡೂರು, ಖಾಜಿ ಹೊಸಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಸೋಮಲಾಪುರ, ಲಿಂಗಧೀರ ಮಲ್ಲಸಂದ್ರ, ಹಂದೇನಹಳ್ಳಿ, ಬಾಣರಹಳ್ಳಿ, ಹೊಂಚನಹಳ್ಳಿ, ನಂದಗುಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ನಡುವಿನಪುರ, ಕೆ.ಶೆಟ್ಟಿಹಳ್ಳಿ, ಮೆಡೂರ್, ಭುವನಹಳ್ಳಿ, ಕೆ.ಮಲ್ಲಸಂದ್ರ ವ್ಯಾಪ್ತಿಯ ಗ್ರಾಮ ನಡುವತಿ, ಹೊಸಕೋಟೆ ಸರ್ಕಾರಿ ಆಸ್ಪತ್ರೆ ವ್ಯಾಪ್ತಿಯ ಗ್ರಾಮಗಳಾದ ಕಿಲ್ಲಾರಿಪೇಟೆ, ಗಾಣಿಗರಪೇಟೆ, ಕುರುಬರಪೇಟೆ, ಮುಗಬಾಳ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ದೊಡ್ಡನಲ್ಲೂರಹಳ್ಳಿ, ನಿಡಘಟ್ಟ, ಅತ್ತಿವಟ, ದಾಸರಹಳ್ಳಿ, ಕೊಳತೂರ, ಜಡಿಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಪೂಜೇನ ಅಗ್ರಹಾರ, ಸರ್ಕಾರ ಗುಟ್ಟಹಳ್ಳಿ, ಪೆತ್ತನಹಳ್ಳಿ, ಗಣಗಲು, ವಾಗಟ, ಬ್ಯಾಲನರಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಚಿಕ್ಕಕೊರಟಿ, ದೊಡ್ಡಕೊರಟಿ, ಗುಡ್ರಹಳ್ಳಿ, ಮಾರ್ಸಂದಹಳ್ಳಿ, ಸತಿಗೇನಹಳ್ಳಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹೊಸಕೋಟೆ ವ್ಯಾಪ್ತಿಯ ಗ್ರಾಮಗಳಾದ ಕಮ್ಮವಾರಿಪೇಟೆ, ಚಿಕ್ಕತಿಗಳರ ಪೇಟೆ, ಕಿಲಾರಿ ಪೇಟೆ, ಬ್ರಾಹ್ಮಿಣ್ ಸ್ಟ್ರೀಟ್, ಪಕಿರ್‌ವಾಡ, ಶಿವನಾಪುರ ವ್ಯಾಪ್ತಿಯ ಗ್ರಾಮಗಳಾದ ಗಂಜರ್‌ನಹಳ್ಳಿ ಹಾಗೂ ಕೊರಡಹಳ್ಳಿ ಲಸಿಕಾಕರಣ ನಡೆಯಲಿದೆ.
ದೇವನಹಳ್ಳಿ ತಾಲ್ಲೂಕಿನ ಕುಂದಾಣ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ವೆಂಕಟಾಪುರ, ದಿನ್ನೂರ್, ಬಚ್ಚಹಳ್ಳಿ, ವಿಜಯಪುರ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಯಲುವಹಳ್ಳಿ, ಸಂತೆ ಮೈದಾನ, ಜೆ.ಸಿ. ಬಡಾವಣೆ, ಅಶೋಕ ನಗರ, ಬೂದಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮ ಹಂದರಹಳ್ಳಿ, ಅರದೇಶನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಚಿಕ್ಕಣ್ಣಹೊಸಹಳ್ಳಿ, ಜಾಲಿಗೆ, ಬಸವನಪುರ, ವಿಶ್ವನಾಥಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಬ್ಯಾಡರಹಳ್ಳಿ, ಚಿಕ್ಕಗೊಲ್ಲಹಳ್ಳಿ, ಆವತಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಬೈರಪ್ಪನಹಳ್ಳಿ, ಕೋರಮಂಗಲ, ಗೊಬ್ಬರಗುಂಟೆ, ಚನ್ನರಾಯಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಗೋಪಸಂದ್ರ, ಡಿಕೆಹಳ್ಳಿ, ಕೊನಗಿನಬೆಲೆ, ಸಿಟಿ ಮಂಗಲ, ಕೊಯಿರಾ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಮಂಗೊಂಡನಹಳ್ಳಿ, ಮಾಯಸಂದ್ರ, ನಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಬಿದಲಾಪುರ, ಬಾಲೇಪುರ, ಅರಿಶಿಣಕುಂಟೆ, ನಲ್ಲಪ್ಪನಹಳ್ಳಿ, ಮಲ್ಲೆಪುರ, ಕಾರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಮೂಡಗಾರಹಳ್ಳಿ, ಮಗ್ಜಿಗ್ರಹಳ್ಳಿ 2, ಸೊರ್ರೆರಹಳ್ಳಿ, ಜಿಎಂ ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಪಿ ರಂಗನಾಥಪುರ, ಸಿ ಎನ್ ಹೊಸೂರು, ಹೊಲೇರಹಳ್ಳಿ, ದೇವನಹಳ್ಳಿ ಸರ್ಕಾರಿ ಆಸ್ಪತ್ರೆ ವ್ಯಾಪ್ತಿಯ ಗ್ರಾಮಗಳಾದ ಅಕ್ಕುಪೇಟೆ, ಯಲಹಂಕಬೀದಿ ಹಾಗೂ ಶಾಂತಿನಗರ ಉತ್ತರದಲ್ಲಿ ಲಸಿಕಾಕರಣ ನಡೆಯಲಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಆರೂಢಿ ವ್ಯಾಪ್ತಿಯ ಆರೂಢಿ ಗ್ರಾಮ, ದೊಡ್ಡಹೆಜ್ಜಾಜ್ಜಿ ವ್ಯಾಪ್ತಿಯ ಗ್ರಾಮಗಳಾದ ರಾಮಪುರ, ಹೊಲೇರಹಳ್ಳಿ, ರಾಮೇಶ್ವರ, ಚಿಕ್ಕನಹಳ್ಳಿ, ಜೋಡಿಕರೆಪುರ, ದೊಡ್ಡ ಬೆಳವಂಗಲ, ದೊಡ್ಡ ತುಮಕೂರು ವ್ಯಾಪ್ತಿಯ ಗ್ರಾಮಗಳಾದ ಹೊಸಹುಡ್ಯಾ, ದೊಂಬರಹಳ್ಳಿ, ಆಲಹಳ್ಳಿ, ಯಲ್ಲುಪುರ, ಕರೇನಹಳ್ಳಿ, ಚಿಕ್ಕ ತುಮಕೂರು, ಜಿ ಹೊಸಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಕಟ್ಟೆಹಿಂಡಲಹಳ್ಳಿ, ಮಾಕಳಿ, ಓಜೇನಹಳ್ಳಿ, ಸೊಣ್ಣೇನಹಳ್ಳಿ, ವಾಣಿಗರಹಳ್ಳಿ, ಹಾಲೇನಹಳ್ಳಿ ವ್ಯಾಪ್ತಿಯ ನೆಲ್ಲೇನಹಳ್ಳಿ ಗ್ರಾಮ, ಹುಲಿಕುಂಟೆ ವ್ಯಾಪ್ತಿಯ ಗ್ರಾಮಗಳಾದ ಚನ್ನಬಸವೈನಪಾಳ್ಯ, ತೂಬಕುಂಟೆ, ದೊಡ್ಡಮಂಕಲಾಲ, ಭೋವಿಪಾಳ್ಯ, ಮುತ್ತುಗದಹಳ್ಳಿ, ಚಿಕ್ಕಮಂಕನಾಳ, ಕಾಡನೂರು ವ್ಯಾಪ್ತಿಯ ಗ್ರಾಮಗಳಾದ ಕಲ್ಲುದೇವನಹಳ್ಳಿ, ಮುಪ್ಪಾಡಿಘಟ್ಟ, ಕಮ್ಮಸಂದ್ರ ವ್ಯಾಪ್ತಿಯ ಗ್ರಾಮಗಳಾದ ಜೋಡಿತಿಮ್ಮಸಂದ್ರ, ಪುಟ್ಟೇನಹಳ್ಳಿ, ಕನ್ನಮಂಗಲ, ಕನಸವಾಡಿ ವ್ಯಾಪ್ತಿಯ ಗ್ರಾಮಗಳಾದ ಕನಸವಾಡಿ, ರಾಮದೇವನಹಳ್ಳಿ, ಕಲ್ಲೋಡು, ಕೊನಘಟ್ಟ ವ್ಯಾಪ್ತಿಯ ಗ್ರಾಮಗಳಾದ ನಾಗದೇನಹಳ್ಳಿ ತಿಮ್ಮಸಂದ್ರ, ಹಮಾಮ್, ಕೊನೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಕಾಮನ ಅಗ್ರಹಾರ, ತಂಬೇನಹಳ್ಳಿ, ಬೂಚನಹಳ್ಳಿ, ಕಣಗಲಪುರ, ಗಾಂಧಿನಗರ, ಮರಳೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಗಾಳಿಪೂಜೆ, ಹಸನಘಟ್ಟ, ರಾಜೀವ್‌ಗಾಂಧೀ ನಗರ, ಮೇಲೆಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಮೇಲೆಕೋಟೆ ಗ್ರಾಮ, ಎಸ್.ಎಸ್.ಘಾಟಿ ವ್ಯಾಪ್ತಿಯ ಗ್ರಾಮಗಳಾದ ಪಾಲ್ ಪಾಲ್ ದಿನ್ನೆ, ಗುಂಜೂರು, ಮಾಕಳಿ, ಹಾಡೋನಹಳ್ಳಿ, ದುರ್ಗೇನಹಳ್ಳಿ, ಸಾಸಲು ವ್ಯಾಪ್ತಿಯ ಗ್ರಾಮಗಳಾದ ಅಣೈಹನಪಾಳ್ಯ, ಮಾಚೇನಹಳ್ಳಿ, ಗರುಡಗಲ್ಲು, ಲಕ್ಕೇನಹಳ್ಳಿ, ತೂಬಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಸಿದ್ದಾಪುರ, ಚನ್ನಾಪುರ, ದೊಡ್ಡರಾಯಪ್ಪನಹಳ್ಳಿ, ಯಲ್ಲದನಹಳ್ಳಿ, ಸೊತೇನಹಳ್ಳಿ, ಕೊಂಡಸಂದ್ರ, ನಂದಿಗುಂಡ, ದೊಡ್ಡಬಳ್ಳಾಪುರ ಗ್ರಾಮೀಣ ವ್ಯಾಪ್ತಿಯ ಗ್ರಾಮಗಳಾದ ಎಕಸಿಪುರ, ಪಾಲನ್‌ಜೋಗಿಹಳ್ಳಿ, ಅರಳಮಲ್ಲಿಗೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಎಸ್.ಎನ್.ಹಳ್ಳಿ(|), ಮುತ್ತೂರು(|), ಶ್ರೀನಗರ(|) ಹಾಗೂ ರಂಗಪ್ಪ ಸರ್ಕಲ್(F) ನಲ್ಲಿ ಲಸಿಕಾಕರಣ ನಡೆಯಲಿದೆ.
ನೆಲಮಂಗಲ ತಾಲ್ಲೂಕಿನ ಭೈರನಾಯಕನಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಯಾದಲು, ಗೊಲ್ಲಹಳ್ಳಿ, ದಾಬಸ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಸುಗ್ಗಯ್ಯನಪಾಳ್ಯ, ಲಕ್ಕೂರು ತೋಟ, ತಿಮ್ಮನಾಯಕನಹಳ್ಳಿ, ಪೆಮ್ಮನಹಳ್ಳಿ, ನಿಜಗಲ್ ಕೆಂಪೊಹಳ್ಳಿ, ಮಾಡೇನಹಳ್ಳಿ, ಹೊಸನಿಜಗಲ್, ಮಾದಲಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಬೆಟ್ಟಹಳ್ಳಿ ಪಾಳ್ಯ, ಬೆಟ್ಟಹಳ್ಳಿ, ಬೋಲಮಾರನಹಳ್ಳಿ, ಕೋಡಿಪಾಳ್ಯ, ಬರಡಿಪಾಳ್ಯ, ಬರಡಿ, ಮಣ್ಣೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಎಡಿ ಕಾಲೋನಿ, ಎಕೆ ಕಾಲೋನಿ, ತೇರಿನಬೀದಿ, ಮಾರಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಅಳಲೆದಿಬ್ಬ, ಮಲೋನಾಗತೀಹಳ್ಳಿ, ಹುಚ್ಚೇಗೌಡನಪಾಳ್ಯ, ಕುಲುವನಹಳ್ಳಿ, ಸುಧಾನಗರ, ತಿಪ್ಪಗೊಂಡನಹಳ್ಳಿ, ತಾಳೆಕೆರೆ, ತಾಳೆಕೆರಪಾಳ್ಯ, ದೊಡ್ಡೇರಿ, ಶಿವಗಂಗೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಗೌರಾಪುರ, ಇಸಾಮಿಪಾಳ್ಯ, ಕುಟ್ಟಘಟ್ಟ, ದೇವಗಾನಹಳ್ಳಿ, ಗೊಗಡು, ಬರಗೇನಹಳ್ಳಿ, ತಡಸೀಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಮಾವಿನಕೊಮ್ಮನಹಳ್ಳಿ, ವಿಜಯಲಕ್ಷ್ಮೀ ಹ್ಯಾಲೋ ಬ್ರಿಕ್ಸ್ ಮಾವಿನಕೊಮ್ಮನಹಳ್ಳಿ, ಬಳ್ಳಗೆರೆ, ಕೆಂಚನಪುರ, ವಡ್ಡರಪಾಳ್ಯ, ಎಲೆಕ್ಯಾತನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಬೊಮ್ಮಲಿಂಗಯನಪಾಳ್ಯ, ಚಿಕ್ಕಮುತ್ರಾಯನಪಾಳ್ಯ, ರುದ್ರನಪಾಳ್ಯ, ತ್ಯಾಮಗೊಂಡ್ಲು ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮಗಳಾದ ಸೆಂದಿಬೀದಿ, ಬಡಾವಣೆ, ಆನೆಬೀದಿ ಹಾಗೂ ಶೆಟ್ಟರಬೀದಿಯಲ್ಲಿ ಲಸಿಕಾಕರಣ ನಡೆಯಲಿದೆ.
ಮೊದಲ ಮತ್ತು ಎರಡನೇ ಡೋಸ್ ಲಸಿಕೆ ಪಡೆಯದೆ ಬಾಕಿ ಉಳಿಸಿಕೊಂಡಿರುವ ಫಲಾನುಭವಿಗಳು ಕೋವಿಡ್-19 ಲಸಿಕಾ ಮೇಳದಲ್ಲಿ ಭಾಗವಹಿಸಿ, ಲಸಿಕೆಯನ್ನು ಕಡ್ಡಾಯವಾಗಿ ಪಡೆಯುವ ಮೂಲಕ, ಶೇ.100ರಷ್ಟು ಲಸಿಕಾಕರಣ ಪ್ರಗತಿಯನ್ನು ಸಾಧಿಸಲು ಸಹಕಾರ ನೀಡಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಶ್ರೀನಿವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….