ಯಲಹಂಕ: ಬೀದಿ ಶ್ವಾನಗಳಿಗೆ ಬೆಚ್ಚಗಿನ ಮನೆ. ಹಳೇ ಟೈರ್‌ಗೆ ಸಿಗುತ್ತಿದೆ ಹೊಸ ರೂಪ. ಚಳಿ.ಗಾಳಿಗೆ ಶ್ವಾನಗಳಿಗೆ ಇಲ್ಲಿದೆ ರಕ್ಷಣೆ ಬೀದಿಶ್ವಾನಗಳ ಕಷ್ಟಕ್ಕೆ ಸ್ಪಂದಿಸುವ ಹೃದಯವಂತರೊಬ್ಬರ ಕತೆ ಇದಾಗಿದೆ.
ಸಾಮಾನ್ಯವಾಗಿ ಬೀದಿಶ್ವಾನಗಳು ಚಳಿಗಾಲದ ಈ ಸಂದರ್ಭದಲ್ಲಿ ಸಂಕಷ್ಟ ಅನುಭವಿಸುತ್ತಿವೆ. ಕೆಲವೊಂದು ಪರಿಸ್ಥಿತಿಯಲ್ಲಿ ಇಂತಹ ಕಠಿಣ ಹವಾಮಾನದ ಕಾರಣದಿಂದ ಪ್ರಾಣ ಕಳೆದುಕೊಂಡ ಶ್ವಾನಗಳೂ ಇವೆ. ಇದನ್ನೆಲ್ಲಾ ನೋಡುವಾಗ ಖಂಡಿತಾ ಮರುಕ ಉಂಟಾಗುತ್ತದೆ.
ಹೀಗಾಗಿ ಬೀದಿ ಬದಿ ನಾಯಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ರಾಜಾನುಕುಂಟೆಯ ಅನುಸೂಯ ಆನಂದ್ ಎಂಬುವವರು ತಮ್ಮ ಪೆಟ್ರೋಲ್ ಬಂಕ್‌ನಲ್ಲಿ ವಿಶೇಷ ಪ್ರಯತ್ನ ಮಾಡಿದ್ದಾರೆ. ಅದೇನೆಂದರೆ ಈ ಶ್ವಾನಕ್ಕೆ ಬೆಚ್ಚನೆಯ ಗೂಡಿನ ನಿರ್ಮಾಣ ಮಾಡಿರುವುದು.
ದಯೆ, ಕರುಣೆ ಮನುಷ್ಯನಲ್ಲಿಬೇಕಾದ ಬಹು ದೊಡ್ಡ ಗುಣಗಳು. ಈ ಎರಡು ಗುಣಗಳಿದ್ದರೆ ಮತ್ತೊಬ್ಬರ ಅಥವಾ ಮತ್ತೊಂದು ಜೀವದ ಕಷ್ಟಕ್ಕೆ ಸ್ಪಂದಿಸುವ ಗುಣವೂ ಗಟ್ಟಿಗೊಳ್ಳುತ್ತದೆ. ಈ ರೀತಿಯ ಮನಸ್ಸಿನ ಅದೆಷ್ಟೊ ಹೃದಯವಂತರು ನಮ್ಮ ನಡುವೆ ಇದ್ದಾರೆ.
ಹಳೆಯ ಬಿಸಾಡುವ ಟೈರು ಈಗ ಗೂಡಿನ ರೂಪ ಪಡೆದುಕೊಂಡಿದೆ. ಈಗ ಎಲ್ಲರ ಮನೆಯಲ್ಲೂ ಗೂಡಿನ ರೂಪ ಕೊಡುತ್ತಿದ್ದಾರೆ. ಹೀಗಾಗಿ ಪಕ್ಕದ ಟಯರ್ ಅಂಗಡಿಯಿಂದ ಬಿಸಾಡುತ್ತಿದ್ದ ಟೈರ್ ಮೇಲ್ಬಾಗವನ್ನು ತೆಗೆದು ಗೂಡು ನಿರ್ಮಿಸಿದ್ದಾರೆ. ಆ ಟೈರ್ ಒಳಗೆ ಬಟ್ಟೆಯನ್ನು ಹಾಸಿದ್ದಾರೆ.
ನಾಯಿಯನ್ನು ಹಲವಾರು ದಿನಗಳಿಂದ ಗಮನಿಸಿದ್ದೇನೆ ವಿಪರೀತ ಚಳಿ ಸಾಕಷ್ಟು ತೊಂದರೆ ಅನುಭವಿಸುತ್ತಿತ್ತು. ಮಲಗಲು ಯಾವುದೇ ನಿರ್ದಿಷ್ಟ ಸ್ಥಳ ಇರಲಿಲ್ಲ. ಕೆಲವು ವಾಹನ ಅಡಿಯಲ್ಲೂ ಮಲಗಿ ಪ್ರಾಣ ಕಳೆದುಕೊಳ್ಳುತ್ತವೆ. ಆದ್ದರಿಂದ ಇಲ್ಲೊಂದು ಶ್ವಾನಕ್ಕೆ ಸಣ್ಣ ಗೂಡು ನಿರ್ಮಿಸಿದೆ ಎನ್ನುತ್ತಾರೆ ಅನುಸೂಯ ಆನಂದ್.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….