ದೊಡ್ಡಬಳ್ಳಾಪುರ: ಬೆಳೆ ಹಾನಿ ಪರಿಹಾಕ್ಕೆಂದು ರೈತ ಸಂಪರ್ಕ ಕೇಂದ್ರಕ್ಕೆ ನೀಡಿದ ಅರ್ಜಿಗಳನ್ನು ನೊಂದಣಿ ಮಾಡದ ಸಾಸಲು ರೈತ ಸಂಪರ್ಕ ಕೇಂದ್ರದ ಅಧಿಕಾರಿ ವಿರುದ್ಧ ರೈತರು ಪ್ರತಿಭಟನೆ ನಡೆಸಿರುವ ಘಟನೆ ತಾಲೂಕಿನ ಸಾಸಲು ಗ್ರಾಮದಲ್ಲಿ ನಡೆದಿದೆ.
ಸಾಸಲು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸಿದ್ದಲಿಂಗಯ್ಯ ಅವರಿಗೆ ಮಳೆಯಿಂದ ಹಾನಿಗೊಳಗಾದ 100ಕ್ಕು ಹೆಚ್ಚು ರೈತರು ಪರಿಹಾರಕ್ಕೆ ಅರ್ಜಿನೀಡಿದ್ದು ಆದರೆ ಪರಿಹಾರಕ್ಕೆ ಅರ್ಜಿಗಳನ್ನು ನೊಂದಣಿ ಮಾಡದೆ ವರ್ಗಾವಣೆಯಾಗಿದ್ದು, ಪರಿಹಾರ ದೊರಕಿಲ್ಲ ಎಂದು ರೈತರು ಆರೋಪಿಸಿದರು.
ಈ ವೇಳೆ ಸ್ಥಳಕ್ಕೆ ಬಂದ ಶಾಸಕ ಟಿ.ವೆಂಕಟರಮಣಯ್ಯ ಹಾಗೂ ತಹಶೀಲ್ದಾರ್ ಮೋಹನಕುಮಾರಿ ಅವರು ರೈತರ ದೂರನ್ನು ಆಲಿಸಿ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳನ್ನು ಕರೆಸಿ ವಿಚಾರಿಸಿದರು, ಆದರೆ ಅಧಿಕಾರಿಗಳು ಯಾವುದೇ ಅರ್ಜಿಗಳನ್ನು ಕೃಷಿ ಅಧಿಕಾರಿ ನೀಡಿಲ್ಲ ಎಂದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಟಿ.ವೆಂಕಟರಮಣಯ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ ಕರೆ ಮಾಡಿ ರೈತರಿಗಾದ ಸಮಸ್ಯೆ ಗಮನಕ್ಕೆ ತಂದು ಮರು ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು ಅಲ್ಲದೆ ಬೇಜವಬ್ದಾರಿ ತೋರಿದ ಕೃಷಿ ಅಧಿಕಾರಿಯ ವಜಾಗೊಳಿಸುವಂತೆ ಒತ್ತಾಯಿಸಿದರು.
ಈ ವೇಳೆ ತಹಶೀಲ್ದಾರ್ ಮೋಹನಕುಮಾರಿ, ಎಪಿಎಂಸಿ ಅಧ್ಯಕ್ಷ ವಿಶ್ವನಾಥ್ ರೆಡ್ಡಿ, ತಾಪಂ ಮಾಜಿ ಅಧ್ಯಕ್ಷ ನಾಗರಾಜ್, ಸಹಾಯ ಕೃಷಿ ನಿರ್ದೇಶಕಿ ಸುಶೀಲಮ್ಮ ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….