ದೊಡ್ಡಬಳ್ಳಾಪುರ: ಮೂಡನಂಬಿಕೆಯ ವಿರುದ್ಧ ಸಮಾಜಿಕ ಅರಿವು ಮೂಡಿಸುವಲ್ಲಿ ನಿರಂತರ ಶ್ರಮಿಸುತ್ತಿರುವ ಡಾ.ಹುಲಿಕಲ್ ನಟರಾಜ್ ಅವರನ್ನು ಸಿದ್ದಶ್ರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಜ.13ರಂದು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ಅಯೊಜಿಸಿರುವ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಕೆಂದ್ರ ರಸಗೊಬ್ಬರ ರಸಾಯನಿಕ ಮತ್ತು ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬ ಅವರು ಪ್ರಶಸ್ಥಿ ಪ್ರಧಾನ ಮಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವಿಕರಿಸುವಂತೆ ಇಂದು ಹುಲಿಕಲ್ ನಟರಾಜ್ ರವರ ನಿವಾಸದಲ್ಲಿ ಸಂಘದ ಪ್ರಮುಖರು ಆಹ್ವಾನ ನೀಡಿದರು.
ಆಹ್ವಾನ ಪತ್ರ ನೀಡಿ ಮಾತನಾಡಿದ ಕರ್ನಾಟಕ ರಾಜ್ಯ ಕುರುಬರ ಸಂಘದ ಹಿರಿಯ ನಿರ್ದೇಶಕ ಹಾಗೂ ಕನಕ ಗುರುಪೀಠದ ದರ್ಮದರ್ಶಿ ಡಾ.ಕೆ.ಎಂ.ಕೃಷ್ಣಮೂರ್ತಿ, ಹುಲಿಕಲ್ ನಟರಾಜ್ ರವರಿಗೆ ಸಿದ್ದಶ್ರೀ ಪ್ರಶಸ್ತಿ ಸಂದಿರುವುದು ಹೆಮ್ಮೆಯ ವಿಷಯವಾಗಿದೆ.
ನಿಜವಾದ ಸಾಧಕರನ್ನು ಗುರುತಿಸಿ ಗೌರವದಿಂದ ನಡೆಸಿಕೊಳ್ಳುವುದು ನಮ್ಮ ಮಠದ ಪರಂಪರೆಯಾಗಿದೆ. ಆದ್ದರಿಂದ ಪ್ರಶ್ನಸ್ತಿಗೆ ಆಯ್ಕೆಯಾದ ಹುಲಿಕಲ್ ನಟರಾಜ್ ಅವರು ಜ.13 ರಂದು ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕನ್ನಡ ಪಕ್ಷದ ಪ್ರದಾನ ಕಾರ್ಯದರ್ಶಿ ಡಿ.ಪಿ.ಅಂಜನೇಯ, ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಸಂಘಟನಾ ಕಾರ್ಯದರ್ಶಿ ಪರಮೇಶ್, ಪ್ರಾಂಶುಪಾಲರಾದ ಎಂಸಿ.ಮಂಜುನಾಥ್, ಶಿಕ್ಷಕ ಗಿರಿರಂಗಯ್ಯ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….