ಮೇಷ: ಕೈ ತಪ್ಪಿದ ಅವಕಾಶಗಳು ಪುನಃ ದೊರೆಯಲಿವೆ. ಈ ಬಾರಿ ಅವಕಾಶವನ್ನು ಸದುಪಯೋಗಿಸಿಕೊಳ್ಳಿ. ಅಧಿಕಾರಿಗಳ ಭೇಟಿಯಿಂದ ಕಾರ್ಯ ಸಾಧನೆಗೆ ಅನುಕೂಲವಾಗುವುದು. ಸರ್ಕಾರಿ ಕೆಲಸಗಳು ಕೈಗೂಡುವುದು.
ವೃಷಭ: ಸಾಮಾಜಿಕ ಚಟುವಟಿಕೆಗಳು ಹೆಚ್ಚಲಿವೆ. ಪರಿಸ್ಥಿತಿ ಅವಲೋಕಿಸಿಕೊಂಡು ಮುಂದಿನ ಹೆಜ್ಜೆ ಇರಿಸಿ. ಇತರರ ಬಗ್ಗೆ ಅನುಕಂಪ ತೋರುವ ನೀವು, ನಿಮ್ಮ ಬಗ್ಗೆಯೂ ಗಮನವಿರಿಸಿಕೊಳ್ಳಲು ಮರೆಯದಿರಿ.
ಮಿಥುನ: ಇಂದು ನಿಮ್ಮ ವಾಕ್ಚಾತುರ್ಯವನ್ನು ಪ್ರದರ್ಶಿಸಲು ಸುವರ್ಣಾವಕಾಶ ಲಭಿಸುವುದು. ಧೈರ್ಯದಿಂದ ನಿಮ್ಮ ವಾದವನ್ನು ಮಂಡಿಸುವಲ್ಲಿ ಯಶಸ್ವಿಯಾಗುವಿರಿ. ಅನಗತ್ಯ ಚಿಂತೆಗಳನ್ನು ಮೈಮೇಲೆ ಎಳೆದುಕೊಳ್ಳಬೇಡಿ.
ಕಟಕ: ಮಾರುಕಟ್ಟೆಯ ಬದಲಾವಣೆ ಅನುಕೂಲಕ್ಕೆ ತಕ್ಕಂತೆ ಇರುವುದು. ವ್ಯವಹಾರಗಳಲ್ಲಿ ನುರಿತವರ ಸಲಹೆಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಶಿಕ್ಷಕ ವರ್ಗದವರಿಗೆ ಅಧಿಕ ಜವಾಬ್ದಾರಿಯ ಕೆಲಸವಿರುವುದು.
ಸಿಂಹ: ನಿಮ್ಮ ಪ್ರಯತ್ನಗಳಿಗೆ ವ್ಯಕ್ತಿಯೊಬ್ಬರ ಬೆಂಬಲ ದೊರೆತು ಯಶಸ್ವಿಯಾಗಿ ನೆರವೇರಲಿದೆ. ತೈಲ ಲೇಪನ, ಅಭ್ಯಂಗದಂತಹ ವಿಧಿಯ ಆಚರಣೆಯಿಂದ ಹಿರಿಯರ ಆರೋಗ್ಯ ಉತ್ತಮಗೊಳ್ಳುವುದು.
ಕನ್ಯಾ: ಹಲವು ದಿನದ ಬಿಡುವಿಲ್ಲದ ಕೆಲಸದಿಂದ ಬಳಲಿರುವ ನೀವು ವಿಶ್ರಾಂತಿಗಾಗಿ ಸ್ವಲ್ಪ ಸಮಯವನ್ನು ಮೀಸಲಿಡುವುದು ಉತ್ತಮ. ಖಾದ್ಯ ತೈಲಗಳ ವ್ಯಾಪಾರಗಳಿಂದ ಹೇರಳ ಲಾಭ. ಗೃಹಕ್ಕೆ ಬಂಧು-ಮಿತ್ರರ ಆಗಮನ.
ತುಲಾ: ಪಿತ್ರಾರ್ಜಿತ ಆಸ್ತಿಗಳ ವಿಚಾರದಲ್ಲಿ ಸಹೋದರರಲ್ಲಿ ಭಿನ್ನಾಭಿಪ್ರಾಯ ಮೂಡಿಬರಲಿದೆ. ಪ್ರಯತ್ನಪಟ್ಟ ಸರ್ಕಾರಿ ಕೆಲಸಗಳು ದಿನದ ಅಂತ್ಯಕ್ಕೆ ಫಲ ನೀಡಲಿವೆ. ಉದ್ಯೋಗದಲ್ಲಿ ವದಂತಿಗೆ ಕಿವಿಗೊಡದಿರಿ.
ವೃಶ್ಚಿಕ: ನಿರುದ್ಯೋಗಿಗಳ ಅಲೆದಾಟ ತಪ್ಪಿ ಹೊಸ ಕೆಲಸ ಪ್ರಾರಂಭ ಮಾಡುವ ಅವಕಾಶ. ಬುದ್ಧಿವಂತಿಕೆ ಹಾಗೂ ಯೋಜನೆಗಳು ವ್ಯವಹಾರವನ್ನು ಸುಲಭಗೊಳಿಸುತ್ತದೆ. ಗುಂಪು ಚಟುವಟಿಕೆಗಳಿಗೆ ಮುಂದಾಳತ್ವವು ಅನಗತ್ಯವಾಗಿರುವುದು.
ಧನಸ್ಸು: ಸಾಮಾಜಿಕ ಚಟುವಟಿಕೆಗಳಲ್ಲಿ ನಿಮ್ಮ ಕೊಡುಗೆಯು ಎಲ್ಲರ ಪ್ರಶಂಸೆಗೆ ಪಾತ್ರವಾಗುವುದು. ಭಾವನಾತ್ಮಕ ಸಂಬಂಧಗಳಿಂದ ದೂರ ಉಳಿಯುವ ಸ್ಥಿತಿ ಬರಲಿದೆ. ಕಾಫಿ ಬೆಳೆಗಾರರಿಗೆ ಉತ್ತಮ ಆದಾಯ.
ಮಕರ: ವೃತ್ತಿಯಲ್ಲಿ ಸಾಕಷ್ಟು ಪೈಪೋಟಿಯನ್ನು ಎದುರಿಸಬೇಕಾದರೂ ನಿಮ್ಮ ಸ್ವಲ್ಪ ಪ್ರಯತ್ನದಿಂದ ಜಯವನ್ನು ಹೊಂದುವಿರಿ. ಆರ್ಥಿಕ ಭದ್ರತೆ ಬಗ್ಗೆ ತಯಾರಿ ನೆಡೆಸಿಕೊಳ್ಳಿ. ಜಾಗ ಖರೀದಿಸಲು ಅಥವಾ ಒಪ್ಪಂದಕ್ಕೆ ಸಹಿ ಹಾಕಲು ಸುದಿನ.
ಕುಂಭ: ಹೊಸ ಕ್ಲಿನಿಕ್ ಆರಂಭದ ಶುಭಕಾರ್ಯಗಳ ಬಗ್ಗೆ ಹಿರಿಯರೊಡನೆ ಸಮಾಲೋಚನೆ ನಡೆದು ತೀರ್ಮಾನ ಸಿಗಲಿದೆ. ಶಿಕ್ಷಣ ಮುಂದುವರೆಸಲು ಬಂಧುಗಳ ಸಹಾಯ ದೊರಕುವುದು.
ಮೀನ: ಸ್ವತಂತ್ರ ಮನೋಭಾವದಿಂದ ಹೊರ ಬರುವಂತಾಗಲಿದೆ. ಮನೆಯಲ್ಲಿ ಅಗತ್ಯ ಹೊಂದಾಣಿಕೆಯನ್ನು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಅದರಿಂದಾಗಿ ಮನೆಯ ವಾತಾವರಣ ಸರಿಯಾಗಿರುವುದು.
ತಿಥಿ: ದಶಮಿ
ನಕ್ಷತ್ರ: ಅನುರಾಧ ನಕ್ಷತ್ರ
ಈ ದಿನದ ವಿಶೇಷ: ತಲಕಾಡು ಮನೋನ್ಮನೀ ಅಮ್ಮನವರ ಜಯಂತಿ
ರಾಹುಕಾಲ: 02:03 ರಿಂದ 03:30
ಗುಳಿಕಕಾಲ: 09:42 ರಿಂದ 11:09
ಯಮಗಂಡಕಾಲ: 06:49 ರಿಂದ 08:15
ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್. ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು. ಮತ್ತು ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ಮೊ: 9620445122
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….