ಈ ರಾಶಿಯವರ ಕೈ ತಪ್ಪಿದ ಅವಕಾಶಗಳು ಪುನಃ ದೊರೆಯಲಿವೆ / ದಿನ ಭವಿಷ್ಯ: ಗುರುವಾರ, ಜನವರಿ 27, 2022, ದೈನಂದಿನ ರಾಶಿ ಭವಿಷ್ಯ

ಮೇಷ: ಕೈ ತಪ್ಪಿದ ಅವಕಾಶಗಳು ಪುನಃ ದೊರೆಯಲಿವೆ. ಈ ಬಾರಿ ಅವಕಾಶವನ್ನು ಸದುಪಯೋಗಿಸಿಕೊಳ್ಳಿ. ಅಧಿಕಾರಿಗಳ ಭೇಟಿಯಿಂದ ಕಾರ್ಯ ಸಾಧನೆಗೆ ಅನುಕೂಲವಾಗುವುದು. ಸರ್ಕಾರಿ ಕೆಲಸಗಳು ಕೈಗೂಡುವುದು.

ವೃಷಭ: ಸಾಮಾಜಿಕ ಚಟುವಟಿಕೆಗಳು ಹೆಚ್ಚಲಿವೆ. ಪರಿಸ್ಥಿತಿ ಅವಲೋಕಿಸಿಕೊಂಡು ಮುಂದಿನ ಹೆಜ್ಜೆ ಇರಿಸಿ. ಇತರರ ಬಗ್ಗೆ ಅನುಕಂಪ ತೋರುವ ನೀವು, ನಿಮ್ಮ ಬಗ್ಗೆಯೂ ಗಮನವಿರಿಸಿಕೊಳ್ಳಲು ಮರೆಯದಿರಿ.

ಮಿಥುನ: ಇಂದು ನಿಮ್ಮ ವಾಕ್ಚಾತುರ್ಯವನ್ನು ಪ್ರದರ್ಶಿಸಲು ಸುವರ್ಣಾವಕಾಶ ಲಭಿಸುವುದು. ಧೈರ್ಯದಿಂದ ನಿಮ್ಮ ವಾದವನ್ನು ಮಂಡಿಸುವಲ್ಲಿ ಯಶಸ್ವಿಯಾಗುವಿರಿ. ಅನಗತ್ಯ ಚಿಂತೆಗಳನ್ನು ಮೈಮೇಲೆ ಎಳೆದುಕೊಳ್ಳಬೇಡಿ.

ಕಟಕ: ಮಾರುಕಟ್ಟೆಯ ಬದಲಾವಣೆ ಅನುಕೂಲಕ್ಕೆ ತಕ್ಕಂತೆ ಇರುವುದು. ವ್ಯವಹಾರಗಳಲ್ಲಿ ನುರಿತವರ ಸಲಹೆಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಶಿಕ್ಷಕ ವರ್ಗದವರಿಗೆ ಅಧಿಕ ಜವಾಬ್ದಾರಿಯ ಕೆಲಸವಿರುವುದು.

ಸಿಂಹ: ನಿಮ್ಮ ಪ್ರಯತ್ನಗಳಿಗೆ ವ್ಯಕ್ತಿಯೊಬ್ಬರ ಬೆಂಬಲ ದೊರೆತು ಯಶಸ್ವಿಯಾಗಿ ನೆರವೇರಲಿದೆ. ತೈಲ ಲೇಪನ, ಅಭ್ಯಂಗದಂತಹ ವಿಧಿಯ ಆಚರಣೆಯಿಂದ ಹಿರಿಯರ ಆರೋಗ್ಯ ಉತ್ತಮಗೊಳ್ಳುವುದು.

ಕನ್ಯಾ: ಹಲವು ದಿನದ ಬಿಡುವಿಲ್ಲದ ಕೆಲಸದಿಂದ ಬಳಲಿರುವ ನೀವು ವಿಶ್ರಾಂತಿಗಾಗಿ ಸ್ವಲ್ಪ ಸಮಯವನ್ನು ಮೀಸಲಿಡುವುದು ಉತ್ತಮ. ಖಾದ್ಯ ತೈಲಗಳ ವ್ಯಾಪಾರಗಳಿಂದ ಹೇರಳ ಲಾಭ. ಗೃಹಕ್ಕೆ ಬಂಧು-ಮಿತ್ರರ ಆಗಮನ.

ತುಲಾ: ಪಿತ್ರಾರ್ಜಿತ ಆಸ್ತಿಗಳ ವಿಚಾರದಲ್ಲಿ ಸಹೋದರರಲ್ಲಿ ಭಿನ್ನಾಭಿಪ್ರಾಯ ಮೂಡಿಬರಲಿದೆ. ಪ್ರಯತ್ನಪಟ್ಟ ಸರ್ಕಾರಿ ಕೆಲಸಗಳು ದಿನದ ಅಂತ್ಯಕ್ಕೆ ಫಲ ನೀಡಲಿವೆ. ಉದ್ಯೋಗದಲ್ಲಿ ವದಂತಿಗೆ ಕಿವಿಗೊಡದಿರಿ.

ವೃಶ್ಚಿಕ: ನಿರುದ್ಯೋಗಿಗಳ ಅಲೆದಾಟ ತಪ್ಪಿ ಹೊಸ ಕೆಲಸ ಪ್ರಾರಂಭ ಮಾಡುವ ಅವಕಾಶ. ಬುದ್ಧಿವಂತಿಕೆ ಹಾಗೂ ಯೋಜನೆಗಳು ವ್ಯವಹಾರವನ್ನು ಸುಲಭಗೊಳಿಸುತ್ತದೆ. ಗುಂಪು ಚಟುವಟಿಕೆಗಳಿಗೆ ಮುಂದಾಳತ್ವವು ಅನಗತ್ಯವಾಗಿರುವುದು.

ಧನಸ್ಸು: ಸಾಮಾಜಿಕ ಚಟುವಟಿಕೆಗಳಲ್ಲಿ ನಿಮ್ಮ ಕೊಡುಗೆಯು ಎಲ್ಲರ ಪ್ರಶಂಸೆಗೆ ಪಾತ್ರವಾಗುವುದು. ಭಾವನಾತ್ಮಕ ಸಂಬಂಧಗಳಿಂದ ದೂರ ಉಳಿಯುವ ಸ್ಥಿತಿ ಬರಲಿದೆ. ಕಾಫಿ ಬೆಳೆಗಾರರಿಗೆ ಉತ್ತಮ ಆದಾಯ.

ಮಕರ: ವೃತ್ತಿಯಲ್ಲಿ ಸಾಕಷ್ಟು ಪೈಪೋಟಿಯನ್ನು ಎದುರಿಸಬೇಕಾದರೂ ನಿಮ್ಮ ಸ್ವಲ್ಪ ಪ್ರಯತ್ನದಿಂದ ಜಯವನ್ನು ಹೊಂದುವಿರಿ. ಆರ್ಥಿಕ ಭದ್ರತೆ ಬಗ್ಗೆ ತಯಾರಿ ನೆಡೆಸಿಕೊಳ್ಳಿ. ಜಾಗ ಖರೀದಿಸಲು ಅಥವಾ ಒಪ್ಪಂದಕ್ಕೆ ಸಹಿ ಹಾಕಲು ಸುದಿನ.

ಕುಂಭ: ಹೊಸ ಕ್ಲಿನಿಕ್ ಆರಂಭದ ಶುಭಕಾರ್ಯಗಳ ಬಗ್ಗೆ ಹಿರಿಯರೊಡನೆ ಸಮಾಲೋಚನೆ ನಡೆದು ತೀರ್ಮಾನ ಸಿಗಲಿದೆ. ಶಿಕ್ಷಣ ಮುಂದುವರೆಸಲು ಬಂಧುಗಳ ಸಹಾಯ ದೊರಕುವುದು.

ಮೀನ: ಸ್ವತಂತ್ರ ಮನೋಭಾವದಿಂದ ಹೊರ ಬರುವಂತಾಗಲಿದೆ. ಮನೆಯಲ್ಲಿ ಅಗತ್ಯ ಹೊಂದಾಣಿಕೆಯನ್ನು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಅದರಿಂದಾಗಿ ಮನೆಯ ವಾತಾವರಣ ಸರಿಯಾಗಿರುವುದು.
 

ತಿಥಿ:
ದಶಮಿ

ನಕ್ಷತ್ರ:
ಅನುರಾಧ ನಕ್ಷತ್ರ

ಈ ದಿನದ ವಿಶೇಷ: ತಲಕಾಡು ಮನೋನ್ಮನೀ ಅಮ್ಮನವರ ಜಯಂತಿ


ರಾಹುಕಾಲ:
02:03 ರಿಂದ 03:30

ಗುಳಿಕಕಾಲ:
09:42 ರಿಂದ 11:09

ಯಮಗಂಡಕಾಲ:
06:49 ರಿಂದ 08:15

ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್. ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು. ಮತ್ತು ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ಮೊ: 9620445122

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

ರಾಜಕೀಯ

ಮುಖ್ಯಮಂತ್ರಿ ಬದಲಾವಣೆ ಖಚಿತ, ಸಿದ್ದರಾಮಯ್ಯ ಕೇಂದ್ರಕ್ಕೆ ಹೋಗುವುದು ಗ್ಯಾರಂಟಿ: ಆರ್‌.ಅಶೋಕ

ಮುಖ್ಯಮಂತ್ರಿ ಬದಲಾವಣೆ ಖಚಿತ, ಸಿದ್ದರಾಮಯ್ಯ ಕೇಂದ್ರಕ್ಕೆ ಹೋಗುವುದು ಗ್ಯಾರಂಟಿ: ಆರ್‌.ಅಶೋಕ

ಮುಖ್ಯಮಂತ್ರಿ ಹುದ್ದೆಗೆ ಎರಡೂವರೆ ವರ್ಷಗಳ ಅಗ್ರಿಮೆಂಟ್‌ ನಡೆದಿದ್ದು, ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಕೆಳಕ್ಕಿಳಿಸಲು ಸಿದ್ಧತೆ ನಡೆದಿದೆ; ಆರ್‌.ಅಶೋಕ (R.Ashoka) ಹೇಳಿದರು.

[ccc_my_favorite_select_button post_id="110676"]
ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್‌ ಅವರಿಗೆ ಬಿ.ವೈ.ವಿಜಯೇಂದ್ರ ಸನ್ಮಾನ

ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್‌ ಅವರಿಗೆ ಬಿ.ವೈ.ವಿಜಯೇಂದ್ರ ಸನ್ಮಾನ

ಬಮೂಲ್ (Bamul) ನಿರ್ದೇಶಕ ಸ್ಥಾನಕ್ಕೆ ದೊಡ್ಡಬಳ್ಳಾಪುರದಿಂದ ವಿಜೇತರಾದ ಬಿ.ಸಿ.ಆನಂದ್ ಕುಮಾರ್ (B.C.Ananad Kumar) ಅವರನ್ನು ಬಿ.ವೈ.ವಿಜಯೇಂದ್ರ (B.Y.Vijayendra)

[ccc_my_favorite_select_button post_id="110404"]
ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ವಿಶ್ವದ ಬೇರೆ ಬೇರೆ ದೇಶಗಳಿಗೆ ಹೊಲಿಕೆ ಮಾಡಿದಾಗ ಭಾರತವು ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ ಸಚಿವ ಪ್ರಲ್ಹಾದ ಜೋಶಿ (Pralhad Joshi)

[ccc_my_favorite_select_button post_id="108459"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಎಚ್ಚರ.. ಗೌರಿಬಿದನೂರಿನಲ್ಲಿ ದರೋಡೆಕೋರರ ಆತಂಕ..!| Video ನೋಡಿ

ಎಚ್ಚರ.. ಗೌರಿಬಿದನೂರಿನಲ್ಲಿ ದರೋಡೆಕೋರರ ಆತಂಕ..!| Video ನೋಡಿ

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು (Gauribidanur) ನಗರದಲ್ಲಿ ದರೋಡೆ ಗ್ಯಾಂಗ್ ಓಡಾಟ ನಡೆಸಿರುವುದು ಜನತೆಯನ್ನು ಬೆಚ್ಚಿಬೀಳುವಂತೆ ಮಾಡಿದೆ.

[ccc_my_favorite_select_button post_id="110671"]
ಬ್ರೇಕ್ ಫೇಲ್: 5 ಬಸ್ಸುಗಳ ನಡುವೆ ಅಪಘಾತ.. 6 ಭಕ್ತರಿಗೆ ಗಂಭೀರ ಪೆಟ್ಟು..!

ಬ್ರೇಕ್ ಫೇಲ್: 5 ಬಸ್ಸುಗಳ ನಡುವೆ ಅಪಘಾತ.. 6 ಭಕ್ತರಿಗೆ ಗಂಭೀರ ಪೆಟ್ಟು..!

ಯಾತ್ರೆಗೆ ತೆರಳುತ್ತಿದ್ದ 5 ಬಸ್ಸುಗಳ ನಡುವೆ ಡಿಕ್ಕಿ ಸಂಭವಿಸಿ (Accident) 6 ಮಂದಿ ಭಕ್ತರು ಗಂಭೀರವಾಗಿ ಗಾಯಗೊಂಡಿರುವ ಘಟನೆ

[ccc_my_favorite_select_button post_id="110578"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!