ಬೆಂಗಳೂರು, (ಆಗಸ್ಟ್.06): ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಕೇಳಿ ಬಂದಿರುವ ಮೂಡಾ ಹಗರಣದ ಹಿನ್ನೆಲೆಯಲ್ಲಿ ರಾಜೀನಾಮೆಗೆ ಒತ್ತಾಯಿಸಿ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆ ಇಂದಿಗೆ ನಾಲ್ಕನೆ ದಿನಕ್ಕೆ ಕಾಲಿಟ್ಟಿದೆ.
ಈ ಬೆನ್ನಲ್ಲೇ ನಿನ್ನೆ ಪಾದಯಾತ್ರೆ ವೇಳೆ ಜೆಡಿಎಸ್‌ನ ಓರ್ವ ಕಾರ್ಯಕರ್ತೆ ಹೃದಯಾಘಾತದಿಂದ ಸಾವನಪ್ಪಿದ್ದರೆ, ಮತ್ತೊಂದೆಡೆ ಖಾಸಗಿ ಸುದ್ದಿ ವಾಹಿನಿ ಸಿಬ್ಬಂದಿಗಳ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ಕಾಂಗ್ರೆಸ್ ಟ್ವಿಟ್ ಮಾಡಿದ್ದು, ಪಾದಯಾತ್ರೆಯಲ್ಲಿ ಬಿಜೆಪಿಯ ರೌಡಿ ಮೋರ್ಚಾ ಮತ್ತೊಮ್ಮೆ ಕಾರ್ಯಾಚರಣೆಗೆ ಇಳಿದಿದೆ ಎಂದು ಟೀಕಿಸಿದೆ.
ರೌಡಿ ಮೋರ್ಚಾದ ಗೂಂಡಾಗಿರಿಯ ನೇತೃತ್ವವನ್ನು ಶಾಸಕ ಹರೀಶ್ ಪೂಂಜಾ ವಹಿಸಿಕೊಂಡಿದ್ದಾರೆಯೇ? ಎಂದು ಪ್ರಶ್ನಿಸಿದೆ.
ಪಾದಯಾತ್ರೆಯಲ್ಲಿ ರೌಡಿ ಮೋರ್ಚಾದ ಕಾರ್ಯಕರ್ತರು ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ್ದು ಬಿಜೆಪಿಯ ಗೂಂಡಾ ಸಂಸ್ಕೃತಿಯ ಪ್ರತೀಕ ಎಂದು ಕಾಂಗ್ರೆಸ್ ಗುಮ್ಮಿದೆ.
ಮೊದಲು ಅರಣ್ಯ ಅಧಿಕಾರಿಗಳ ಮೇಲೆ ಹಲ್ಲೆ, ನಂತರ ಪೊಲೀಸರ ಮೇಲೆ ಹಲ್ಲೆ, ಈಗ ಮಾಧ್ಯಮದವರ ಮೇಲೆ ಹಲ್ಲೆ. ಇದು ಹರೀಶ್ ಪೂಂಜಾನ ಗೂಂಡಾಗಿರಿಯ ಇತಿಹಾಸವೇ? ಶಾಸಕ ಹರೀಶ್ ಪೂಂಜಾನನ್ನು ಗೂಂಡಾಗಿರಿಗಾಗಿಯೇ ಬೆಳಸುತ್ತಿದ್ದೀರಾ ಎಂದು ಕಾಂಗ್ರೆಸ್ ಕುಟುಕಿದೆ.
ಘಟನೆಯ ವಿವರ; ಶಾಸಕರ ಹರೀಶ್ ಪೂಂಜಾ ಬೆಂಬಲಿಗರು ಎನ್ನಲಾಗುತ್ತಿರುವ ಬಿಜೆಪಿ ಕಾರ್ಯಕರ್ತರು, ಖಾಸಗಿ ನ್ಯೂಸ್ ಚಾನಲ್‌ನ ವರದಿಗಾರರ ಮೇಲೆ ಹಲ್ಲೆ ನಡೆಸಿದ್ದಾರೆ. ವರದಿಗಾರರಾದ ಜಿ.ಮಂಜುನಾಥ, ಮೋಹನ್, ಕ್ಯಾಮೆರಾ ಮೆನ್ ಅವಿರಾಜ್, ಚಾಲಕ ಆನಂದ್ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ವರದಿ ಮಾಡಲು ಅವಕಾಶ ತೆರಳುತ್ತಿದ್ದ ವೇಳೆ ಕಾರು ಅಡ್ಡ ಹಾಕಿ ಹಲ್ಲೆ ನಡೆಸಲಾಗಿದ್ದು, ಈ ವೇಳೆ ಶಾಸಕ ಹರೀಶ್ ಪೂಂಜಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಮಾಧ್ಯಮಗಳು ಏನು ಕಿತ್ತು ಕೊಳ್ಳಲು ಆಗಲ್ಲವೆಂದು ಬೆದರಿಕೆ ಸಹ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಪಾದಯಾತ್ರೆ ವರದಿಗಾಗಿ ಕಾರಿನಲ್ಲಿ ಹೋಗುತ್ತಿದ್ದ ವೇಳೆ, ವರದಿಗಾರರು ಸಹ ಪಾದಯಾತ್ರೆ ನಡೆಸಬೇಕು ಎಂದು ಹಲ್ಲೆ ನಡೆಸಲಾಗಿದೆ.
ಈ ಸಂಬಂಧ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಗಮನ ತರಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….