ದೊಡ್ಡಬಳ್ಳಾಪುರ, (ಆಗಸ್ಟ್.06); ಕೆಲ ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಸೋಮವಾರ ತಾಲೂಕಿನ ಕೆಲವೆಡೆ ಧಾರಾಕಾರವಾಗಿ ಸುರಿಯಿತು.
ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಿಸಿಲು ವಾತಾವರಣ ಕಾಣಿಸಿ ಕೊಂಡಿತ್ತು. ಸಂಜೆ 4 ಗಂಟೆ ಬಳಿಕ ಮೋಡ ಕವಿದ ವಾತಾವರಣ ಸೃಷ್ಟಿಯಾಗಿತ್ತು. ಸಂಜೆಯ ನಂತರ ಮಳೆ ಅಬ್ಬರಿಸಿತು.
ಈ ಬೆನ್ನಲ್ಲೆ ಮಳೆಯ ನೀರು ನುಗ್ಗಿ ರೈಲ್ವೇ ಸ್ಟೇಷನ್ ಬಳಿ ನಿವಾಸಿಗಳು ಪರದಾಡುವಂತಾಗಿತ್ತು.
ರೈಲ್ವೆ ಸ್ಟೇಷನ್ ಬಳಿಯ ಮಂತ್ರಾಲಯ ಹೋಟೆಲ್, ಕಮಲ್ ಸ್ಟುಡಿಯೋ ಹಾಗೂ ಈ ವ್ಯಾಪ್ತಿಯ ಮನೆಗಳಿಗೆ ನೀರು ನುಗ್ಗಿ ಹಾನಿಯುಂಟಾಗಿದೆ.
ಮಳೆ ನೀರು ಚರಂಡಿಗಳ ಮೂಲಕ ಕೆರೆಗೆ ಹಾದು ಹೋಗಲು ಅವಕಾಶವಿಲ್ಲದಂತೆ ಚರಂಡಿಯನ್ನು ಮುಚ್ಚಿರುವುದರಿಂದ ಈ ವ್ಯಾಪ್ತಿಯಲ್ಲಿ ಅಂಗಡಿ, ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತಿದೆ.
ಕೂಡಲೇ ನಗರಸಭೆ ಅಧಿಕಾರಿಗಳು ಹೆಚ್ಚೆತ್ತು ಮುಚ್ಚಿರುವ ಚರಂಡಿ ತೆರವುಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….