ದೊಡ್ಡಬಳ್ಳಾಪುರ, (ಆಗಸ್ಟ್.06): ತಾಲೂಕಿನ ಘಾಟಿ ಸಮೀಪದ ಮಾಧವ ಸೃಷ್ಟಿ ರಾಷ್ಟ್ರೋತ್ಥಾನ ಗೋಶಾಲೆಯ ಬಳೊಯ ಮಾಕಳಿ ಅರಣ್ಯ ಪ್ರದೇಶದ ಬಳಿ ಮೇಯಲು ಬಿಟ್ಟಿದ್ದ ಹಳ್ಳಿಕಾರ್ ಕರುವಿನ ಮೇಲೆ ಚಿರತೆ ದಾಳಿ ನಡೆಸಿದ್ದು, ಕರು ಸಾವನ್ನಪ್ಪಿದೆ.
ಘಾಟಿ ಬಳಿಯ ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ ಇಂದು ಮಧ್ಯಾಹ್ನ ಘಟನೆ ನಡೆದಿದ್ದು, ಗೋಶಾಲೆಯ 250 ಗೋವುಗಳು ಹಿಂದೂಪುರ – ಗೌರಿಬಿದನೂರು ನಡುವಿನ ರಸ್ತೆಯ, ಗೋಶಾಲೆಗೆ ಹೊಂದಿಕೊಂಡಿರುವ ಕಾಡಿನ ಬಳಿ ಹಾದು ಹೋಗಿರುವ ರೈಲ್ವೆ ಬ್ರಿಡ್ಜ್ ಸಮೀಪ ಮೇವನ್ನು ಮೇಯುತ್ತಿದ್ದ ಸಮಯದಲ್ಲಿ ಚಿರತೆ ದಾಳಿ ನಡೆಸಿದೆ.
ಈ ವೇಳೆ ಹಳ್ಳಿಕಾರ್ ಕರುವಿನ ಕುತ್ತಿಗೆ ಬಾಯಾಕಿರುವ ಚಿರತೆ, ಗೋಶಾಲೆಯ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಚಿರತೆ ಪರಾರಿಯಾಗಿದೆ.
ತಾಲೂಕಿನಲ್ಲಿ ಚಿರತೆ ಹಾವಳಿ ಮಿತಿಮೀರುತ್ತಿದ್ದು, ಜಾನುವಾರುಗಳನ್ನು ಬಲಿ ಪಡೆಯುತ್ತಿರುವ ಘಟನೆ ಪದೇ ಪದೇ ಸಂಭವಿಸುತ್ತಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….