ಮದ್ದೂರು, (ಆಗಸ್ಟ್.06); ಜೆಡಿಎಸ್ ಜೋಕರ್‌ಇದ್ದಂತೆ. ಇಸ್ಪೀಟ್ ಆಟದಲ್ಲಿರುವಂತೆ ಜೆಡಿಎಸ್ ಅನ್ನು ಹೇಗಾದರೂ ಹೊಂದಿಸಿಕೊಳ್ಳಬಹುದು. ಇತ್ತ ರಮ್ಮಿ ಆಡುವುದಕ್ಕೆ, ಅತ್ತ ಸೆಟ್ ಆಟಕ್ಕೂ ಸೇರಿಸಿಕೊಳ್ಳಬಹುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ವ್ಯಂಗ್ಯ ವಾಡಿದ್ದಾರೆ.
ಸೋಮವಾರ ಮದ್ದೂರು ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಕೇಂದ್ರದ ಎನ್.ಡಿ.ಎ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ಅನುದಾನ ನೀಡದೆ ಮಲಯಾಯಿ ದೋರಣೆ ತೋರಿರುವ ವಿರುದ್ಧ ಹಾಗೂ ಕರ್ನಾಟಕ ಬಿ.ಜೆ.ಪಿ ನಾಯಕರುಗಳ 21 ಭ್ರಷ್ಟ ಹಗರಣಗಳ ವಿರುದ್ಧ “ಜನಾಂದೋಲನ ಕಾರ್ಯಕ್ರಮ” ದಲ್ಲಿ ಭಾಗವಹಿಸಿ ಅವರು ಮಾತನಾಡಿರು.
ಈ ಹಿಂದೆ ಯಡಿಯೂರಪ್ಪನವರು ಸಿಎಂ ಆಗಿದ್ದಾಗ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮೇಲೆ ನನಗೇನೂ ದ್ವೇಷವಿಲ್ಲ. ಆದರೆ, ಜೆಡಿಎಸ್‌ನಲ್ಲಿರುವ ಅಪ್ಪ-ಮಗನೇ ನನ್ನ ಟಾರ್ಗೆಟ್ ಎಂದು ಹೇಳಿದ್ದರು. ಆ ಮಾತನ್ನು ಜೆಡಿಎಸ್‌ನವರು ಈಗ ಮರೆತಿದ್ದಾರೆ.
ಬಿಜೆಪಿ-ಜೆಡಿಎಸ್‌ನವರು ಮೈತ್ರಿಯೋ, ಮದುವೆಯೋ ಏನೋ ಆಗಿದ್ದಾರೆ. ಈ ಮೈತ್ರಿ ಅದೆಷ್ಟು ದಿನ ಉಳಿಯುವುದೋ ನೋಡೋಣ ಎಂದು ಕುಟುಕಿದರು.
ಈ ಸಂದರ್ಭದಲ್ಲಿ ಸಚಿವ ಸಂಪುಟದ ಸಚಿವರುಗಳಾದ ಚೆಲುವರಾಯಸ್ವಾಮಿ,, ಎಚ್.ಕೆ.ಪಾಟೀಲ್, ಹೆಚ್.ಕೆ.ಮಹದೇವಪ್ಪ, ದಿನೇಶ್ ಗುಂಡೂರಾವ್, ಶಿವಾನಂದ ಪಾಟೀಲ್, ಡಾ.ಸುಧಾಕರ್, ಸಂತೋಷ್ ಲಾಡ್, ಮಧು ಬಂಗಾರಪ್ಪ, ದೆಹಲಿ ವಿಶೇಷ ಪ್ರತಿನಿಧಿಯಾದ ಟಿ.ಬಿ.ಜಯಚಂದ್ರ, ಮಾಜಿ ಸಚಿವ ರಾಮನಾಥ್ ರೈ ಸೇರಿದಂತೆ ಶಾಸಕರು, ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಮುಖಂಡರುಗಳು ಉಪಸ್ಥಿತರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….