ಬೆಂಗಳೂರು, (ಸೆ.08): ಬಿಜೆಪಿ ಪರವಾಗಿರುವ ಬಹುತೇಕ ನ್ಯೂಸ್ ಚಾನೆಲ್‌ಗಳು ಕಾಂಗ್ರೆಸ್ ವಿರುದ್ಧ ಉದ್ದೇಶ ಇಟ್ಟುಕೊಂಡೇ ಸುದ್ದಿ ಮಾಡುತ್ತಿವೆ ಎಂಬುದು ಕೊನೆಗೂ ಕಾಂಗ್ರೆಸ್ ನಾಯಕರಿಗೆ ಅರಿವಿಗೆ ಬಂದಿದ್ದು, ಬಿಜೆಪಿ ಪರವಾಗಿರುವ ಕನ್ನಡ ನ್ಯೂಸ್ ಚಾನೆಲ್ ಗಳಿಗೆ ಕಾಂಗ್ರೆಸ್ ಪೆಟ್ಟುಕೊಡಲು ಸಿದ್ಧತೆ ನಡೆಸಿರುವ ಕುರಿತು ವರದಿಯಾಗಿದೆ.
ಹೌದು, ಬಿಜೆಪಿ ಪರವಾಗಿರುವ ಟಿವಿ ಚಾನೆಲ್‌ಗಳ ವಿರುದ್ಧ ಕಾಂಗ್ರೆಸ್ ಹೊಸ ಬ್ರಹ್ಮಾಸ್ತ್ರ ಸಿದ್ಧಪಡಿಸಿದೆಯಂತೆ. ಅಂದಹಾಗೆ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷ ಪೂರೈಸಿದ್ದು, ಇದೀಗ 2ನೇ ವರ್ಷ ಪೂರೈಸುವತ್ತ ಮುನ್ನಡೆದಿದೆ. ಹೀಗಿದ್ದಾಗಲೇ, ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ & ಜೆಡಿಎಸ್ ನಾಯಕರು ಸಾಲು ಸಾಲು ಗಂಭೀರ ಆರೋಪಗಳನ್ನ ಮಾಡುತ್ತಿದ್ದಾರೆ.
ಅದರಲ್ಲೂ ‘ಮುಡಾ’ ಸೈಟ್ ಹಗರಣ ಮುಂದೆ ಇಟ್ಟುಕೊಂಡು ವಿರೋಧ ಪಕ್ಷಗಳ ನಾಯಕರು ಸಿಎಂ ಸಿದ್ದರಾಮಯ್ಯ & ಕಾಂಗ್ರೆಸ್ ಸರ್ಕಾರದ ಪ್ರಮುಖರ ವಿರುದ್ಧವಾಗಿ ದೊಡ್ಡ ಮಟ್ಟದಲ್ಲಿ ಹೋರಾಟ ಸಂಘಟಿಸಿ ಮೈಸೂರು ಜಾಥಾ ನಡೆಸಿದ್ದಾರೆ.
ಇದರ ಬೆನ್ನಲ್ಲೇ ಮಾಧ್ಯಮಗಳು ಕೂಡ ಮುಖ್ಯವಾಗಿ ಬಿಜೆಪಿ ಪರವಾಗಿರುವ ಅನೇಕ ಕನ್ನಡ ನಾಡಿನ ಟಿವಿ ನ್ಯೂಸ್ ಚಾನೆಲ್‌ಗಳು ಕಾಂಗ್ರೆಸ್ ಸರ್ಕಾರದ ವಿರುದ್ಧವಾಗಿ, ಉದ್ದೇಶ ಇಟ್ಟುಕೊಂಡೇ ಸುದ್ದಿ ಮಾಡುತ್ತಿವೆ ಎಂಬ ಆರೋಪ ಕಾಂಗ್ರೆಸ್ ನಾಯಕರದ್ದಾಗಿದೆ.
ಚಾನೆಲ್‌ಗಳಿಗೆ ಆಘಾತ!: 15 ವರ್ಷಗಳ ಹಿಂದೆ ಕನ್ನಡದಲ್ಲಿ ನ್ಯೂಸ್ ಚಾನೆಲ್ ಗಳನ್ನು ಭೂತ ಕನ್ನಡಿ ಹಿಡಿದು ಟಿವಿ ಸ್ಕ್ರೀನ್ ನೋಡಿ ಹುಡಕಾಡಬೇಕಾಗಿತ್ತು. ಆದರೆ, ಈಗಿನ ಪರಿಸ್ಥಿತಿ ಹೇಗಾಗಿದೆ ಅಂದ್ರೆ, ಕನ್ನಡದಲ್ಲಿ ನೂರಾರು ನ್ಯೂಸ್ ಚಾನೆಲ್ ಇವೆ. ಹೀಗಿದ್ದರೂ ಬಹುತೇಕ ಕನ್ನಡದ ನ್ಯೂಸ್ ಚಾನೆಲ್‌ಗಳು ಕಾಂಗ್ರೆಸ್ ವಿರೋಧಿ ಸುದ್ದಿ ಪ್ರಕಟ ಮಾಡುತ್ತಿವೆ ಎಂಬುದು ಕಾಂಗ್ರೆಸ್ ಆರೋಪವಾಗಿದೆ.
ಹೀಗಾಗಿ, ಹೊಸ ಪ್ಲಾನ್ ಮಾಡಿದೆ ಕರ್ನಾಟಕ ಕಾಂಗ್ರೆಸ್. ಕರ್ನಾಟಕ ಕಾಂಗ್ರೆಸ್ ಈಗ ಮಾಡಿಕೊಂಡ ಪ್ಲಾನ್ ಪ್ರಕಾರ, ಶೀಘ್ರದಲ್ಲೇ ಕಾಂಗ್ರೆಸ್ ನೇತೃತ್ವದಲ್ಲಿ ಹೊಸ ನ್ಯೂಸ್ ಚಾನೆಲ್ ಕನ್ನಡದಲ್ಲಿ ಆರಂಭ ಮಾಡಲು ಚಿಂತನೆ ನಡೆದಿದೆ. ಹಾಗೇ, ಇಂಗ್ಲಿಷ್ ಭಾಷೆಯಲ್ಲೂ ಚಾನೆಲ್ ತೆರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಮತ್ತೊಂದು ಕಡೆ ನ್ಯೂಸ್ ಪೇಪರ್ ಒಂದನ್ನು ಕರ್ನಾಟಕ ಕಾಂಗ್ರೆಸ್ ವತಿಯಿಂದ ಆರಂಭ ಮಾಡೋದಕ್ಕೆ ಚರ್ಚೆಗಳು ನಡೆದಿವೆಯಂತೆ. ಹೀಗೆ ಕರ್ನಾಟಕ ಕಾಂಗ್ರೆಸ್ ವತಿಯಿಂದ ಸ್ವಂತ ನ್ಯೂಸ್ ಚಾನೆಲ್ ಅಥವಾ ಮಾಧ್ಯಮ ಸಂಸ್ಥೆ ಆರಂಭ ಮಾಡುವ ಬಗ್ಗೆ ನಡೆದಿರುವ ಚಿಂತನೆ ಕುರಿತು ಇದೀಗ, ಕರ್ನಾಟಕ ಕಾಂಗ್ರೆಸ್ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ಪ್ಲಾನ್ ಜಾರಿ ಆಗುತ್ತಾ?: ಬಿಜೆಪಿ ಪರ ಇರುವ ಕನ್ನಡ ನ್ಯೂಸ್ ಚಾನೆಲ್‌ಗಳು ತಮ್ಮ ವಿರುದ್ಧ ಬೇಕು ಅಂತಲೇ ಸುದ್ದಿಯನ್ನ ಮಾಡುತ್ತಿವೆ. ಇದರ ಹಿಂದೆ ಖುದ್ದು ಬಿಜೆಪಿ ನಾಯಕರ & ಜೆಡಿಎಸ್ ನಾಯಕರ ಕುತಂತ್ರವು ಅಡಗಿದೆ ಎಂಬ ಆರೋಪವು ಕರ್ನಾಟಕ ಕಾಂಗ್ರೆಸ್ ನಾಯಕರದ್ದು.
ಪರಿಸ್ಥಿತಿ ಹೀಗಿದ್ದಾಗಲೇ ಸ್ವಂತ ಮಾಧ್ಯಮ ಸಂಸ್ಥೆ ಆರಂಭ ಮಾಡಿ ಬಿಜೆಪಿ & ಜೆಡಿಎಸ್ ನಾಯಕರ ವಿರುದ್ಧ ತೊಡೆ ತಟ್ಟುವ ಐಡಿಯಾ ಕರ್ನಾಟಕ ಕಾಂಗ್ರೆಸ್ ನಾಯಕರದ್ದಾಗಿದೆ. ಆದರೆ, ಈ ಪ್ಲಾನ್ ಯಾವಾಗ ಜಾರಿ ಆಗುತ್ತೆ? ಅಥವಾ ಜಾರಿ ಆಗುವ ಮೊದಲೇ ಐಡಿಯಾ ಮುಗಿದು ಹೋಗುತ್ತಾ? ಎಂಬುದು ಕುತೂಹಲ ಮೂಡಿಸಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….