ಹಾವೇರಿ ( ಸೆ.08): ಉಪಕಾರ ಸ್ಮರಣೆ ಹಾಗೂ ಕ್ಷಮಾ ಗುಣವನ್ನು ಜೈನಧರ್ಮ ಪ್ರತಿಪಾದಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ದುಂಢಸಿ ಗ್ರಾಮದಲ್ಲಿ ಜೈನ ಸಮಾಜದ ವತಿಯಿಂದ ಏರ್ಪಡಿಸಿದ ಹಾವೇರಿ ಜಿಲ್ಲಾ ದಿಗಂಬರ ಜೈನ ಸಂಘದ ದಶ ಲಕ್ಷ ಮಹಾಪರ್ವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಎಲ್ಲ ಧರ್ಮಗಳ ಮೂಲ ಮಾನವ ಅಭಿವೃದ್ಧಿ ಮಾನವೀಯತೆ ಎಲ್ಲ ಧರ್ಮಗಳ ಆಗರ, ನಾವೆಲ್ಲರೂ ಪರಸ್ಪರರು ಪ್ರೀತಿ ವಿಶ್ವಾಸದಿಂದ ಬದುಕು ಸಾಗಿಸುವಂತದ್ದು, ಮಾನವ ಉಳಿದೆಲ್ಲ ಪ್ರಾಣಿಗಳಿಗಿಂತ ಶ್ರೇಷ್ಠ, ದೇವರು ಮಾನವನಿಗೆ ಬುದ್ದಿ ಶಕ್ತಿಯನ್ನು ಕೊಟ್ಟಿದ್ದಾನೆ. ಅದನ್ನು ಅಭಿವ್ಯಕ್ತಿ ಮಾಡುವ ಧ್ವನಿಯನ್ನು ಕೊಟ್ಟಿದ್ದಾನೆ.
ಮಾನವ ಕುಲ ಸಾವಿರಾರು ವರ್ಷಗಳಿಂದ ಬೇರೆ ಬೇರೆ ಆಯಾಮದಲ್ಲಿ ಬೆಳೆದುಕೊಂಡು ಬಂದಿದೆ. ಮೂಲ ತತ್ವ ಮಾನೀಯತೆ ಎನ್ನುವುದು ಎಂದೂ ಬದಲಾಗಿಲ್ಲ. ಬದಲಾಗುವುದೂ ಇಲ್ಲ. ಮಾನವ ಧರ್ಮಕ್ಕೆ ಜಯವಾಗಲಿ ಅಂತ ಹೇಳಿದ್ದಾರೆ. ಮನಷ್ಯ ಧರ್ಮಕ್ಕೆ ಜಯವಾಗಲಿ ಅಂತ ಹೇಳಿಲ್ಲ. ಕಾಮ, ಕ್ರೋಧ, ಮದ, ಮತ್ಸರದ ಸಂಕೋಲೆಯಲ್ಲಿ ಇರವುದು ಮನುಷ್ಯ, ಕಾಮ, ಕ್ರೋಧ, ಮದ, ಮತ್ಸರದ ಸಂಕೋಲೆಯಿಂದ ಹೊರ ಬಂದು ಪ್ರೀತಿ ವಿಶ್ವಾಸದ ಸಂಕೋಲೆಯಲ್ಲಿ ಸಿಲುಕುವುದು ಮಾನವ ಧರ್ಮ ಎಂದರು.
ಮನಷ್ಯ ಧರ್ಮದಲ್ಲಿ ಎರಡು ಗುಣ ಮುಖ್ಯ ಒಂದು ಉಪಕಾರ ಸ್ಮರಣೆ, ಯಾರು ಉಪಕಾರ ಸ್ಮರಣೆ ಮಾಡುವುದಿಲ್ಲ ಅವರು ಮನುಷ್ಯರೇ ಅಲ್ಲ. ದಿನನಿತ್ಯ ಭಗವಂತನ ಸ್ಮರಣೆ ಮಾಡುವಾಗ ಭಗವಂತ ನನಗೆ ನೀನು ಅಸ್ತಿತ್ವ ಕೊಟ್ಟಿದ್ದೀಯಾ, ಪ್ರಕೃತಿ ಕೊಟ್ಟಿದ್ದೀಯಾ, ಬಂದು ಬಳಗಕೊಟ್ಟಿದ್ದೀಯಾ ನಿನ್ಮಉಪಕಾರ ಸ್ಮರಣೆ ನಾನು ಎಂದೂ ಮರೆಯುವುದಿಲ್ಲ ಎಂದು ಉಪಕಾರ ಸ್ಮರಣೆ ಮಾಡುವುದು. ಒಂದು ಸಣ್ಣ ಹುಲ್ಲು ಕಡ್ಡಿಯೂ ಉಪಕಾರ ಸ್ಮರಣೆ ಮಾಡುತ್ತದೆ. ಯಾರು ಉಪಕಾರ ಸ್ಮರಣೆ ಮಾಡುತ್ತಾರೆ ಅವರು ಸದಾ ಯಶಸ್ವಿಯಾಗುತ್ತಾರೆ. ಸದಾ ಹಸನ್ಮುಖಿಗಳಾಗಿರುತ್ತಾರೆ.
ಯಾರಿಗೆ ಉಪಕಾರ ಸ್ಮರಣೆ ಮಾಡುವುದಿಲ್ಲ ಅವರು ಅದರ ಭಾರ ಹೊತ್ತುಕೊಂಡು ತಿರುಗಾಡುತ್ತಾರೆ. ಉಪಕಾರ ಸ್ಮರಣೆ ಮಾಡುವಾಗ ಜಿಪುಣತನ ಮಾಡಬಾರದು ಸತ್ಯವನ್ನು ಸಂಪೂರ್ಣವಾಗಿ ಹೇಳುವ ಕೆಲಸ ಮಾಡಬೇಕು. ಸುಳ್ಳಿಗಿಂತ ಅಪಾಯಕಾರಿ ಅರ್ಧ ಸತ್ಯ. ಸುಳ್ಳು ಹೇಳಿದರೆ ಸಿಕ್ಕಿಕೊಳ್ಳುತ್ತಾರೆ. ಅರ್ಧ ಸತ್ಯ ಹೇಳಿದರೆ ಸಿಲುಕಿಕೊಳ್ಳುವುದಿಲ್ಲ, ಹೀಗಾಗಿ ಬಹಳ ಜನ ಅರ್ಧ ಸತ್ಯ ಹೇಳುತ್ತಾರೆ. ಉಪಕಾರ ಸ್ಮರಣೆ ಕಲ್ಮಶ ಇಲ್ಲದ ಸತ್ಯ ಎಂದು ಹೇಳಿದರು.
ಎರಡನೇಯದು ಕ್ಷಮೆ, ಕ್ಷಮೆ ಎನ್ನುವುದು ಬಹಳ ದೊಡ್ಡ ಗುಣ. ಕ್ಷಮೆ ದೇವರಿಗೆ ಸಮ, ದೇವರು ಮಾತ್ರ ಕ್ಷಮೆ ಮಾಡುವ ಗುಣ ಕ್ಷಮಾ ಗುಣ ಹಾಗೂ ಉಪಕಾರ ಸ್ಮರಣೆಯಿಂದ ಮನುಷ್ಯ ಸಂತೋಷವಾಗಿರುತ್ತಾನೆ. ಜೈನ ಧರ್ಮ ಇವೆರಡನ್ನು ಪ್ರತಿಪಾದಿಸುತ್ತದೆ. ಅಹಿಂಸೆ ಸತ್ಯ ಮಾನವೀಯ ಗುಣಗಳಿಂದ ಕೂಡಿರುವಂಥದ್ದು ಜೈನ ಧರ್ಮ, ಮುಂದಿನ ಹತ್ತು ದಿನಗಳಲ್ಲಿ ಕಲ್ಮಷಗಳನ್ನು ತೊಳೆಯುವ ಕೆಲಸವನ್ನು ಮಾಡುತ್ತಿರುವುದು ಶ್ರೇಷ್ಠ ವಾದ ಕೆಲಸ ಎಂದು ಹೇಳಿದರು.
ನಮ್ಮ ಪಕ್ಕದಲ್ಲಿ ಭರ್ಮಾ ದೇಶದಲ್ಲಿ ಅತ್ಯಂತ ಸಣ್ಣ ಸಣ್ಣ ಹಳ್ಳಿಗಳಿವೆ. ಅಲ್ಲಿ ಒಂದು ಆಸ್ಪತ್ರೆ, ಪೊಲಿಸ್ ಠಾಣೆ ಇಲ್ಲ. ಒಂದು ಗಲಾಟೆ ಇಲ್ಲ. ಸುಮಾರು ಐನೂರು ಕಿ.ಮೀ ಹಾಗೇ ಇದೆ. ಅಲ್ಲಿನ ಜನರಿಗೆ ಕನಸಿನಲ್ಲಿ ಯಾರಿಗಾದರೂ ಬೈದರು ಅವರ ಮನೆಯ ಮುಂದೆ ಹೋಗಿ ಹಣ್ಣಿನ ಬುಟ್ಡಿ ಇಟ್ಟು ಕನಸಿನಲ್ಲಿ ಬೈದಿರುವುದಕ್ಕೆ ಕ್ಷಮಿಸಬೇಕು ಎಂದು ಕೇಳುತ್ತಾರೆ. ಅವರು ಹಣ್ಣಿನ ಬುಟ್ಟಿ ತೆಗೆದುಕೊಂಡು ಒಳಗೆ ಹೋದರೆ ಕ್ಚಮಾ ಮಾಡಿದಂತೆ, ಕನಸಿನಲ್ಲಿ ಬೈದರೆ ಕ್ಷಮೆ ಮಾಡುವ ವ್ಯವಸ್ಥೆ ಇದ್ದರೆ ಅಲ್ಲಿ ಹಿಂಸೆ ಬರಲು ಹೇಗೆ ಸಾಧ್ಯ ಇದು ಜೈನ ಧರ್ಮದ ಮೂಲ ತತ್ವ.
ಜೈನ ಧರ್ಮ ಅಂತ ಸೂಕ್ಷ್ಮ ಮಾನವೀಯ ಗುಣಗಳನ್ನು ಹೊಂದಿದೆ. ಭರ್ಮಾ ದೇಶದಲ್ಲಿ ವಿದ್ಯಾವಂತರಿಲ್ಲ, ಎಸ್ಸೆಸ್ಸೆಲ್ಸಿ ಪಿಯುಸಿಯು ಮುಗಿಸಿದವರಿಲ್ಲ. ಅಲ್ಲಿ ಮುಗ್ದ ಜನರಿದ್ದಾರೆ. ಅವರ ಗುಣಗಳನ್ನು ನಾವು ಪ್ರತಿಪಾದಿಸುವ ಕೆಲಸ ಮಾಡಬೇಕು. ಅದನ್ನೇ ತೀರ್ಥಂಕರು, ಮಹಾವೀರರು ಹೇಳಿರುವು ಎಂದರು.
ಮಹಾವೀರರ ಬದುಕಿನಲ್ಲಿ ಸಂಪೂರ್ಣ ತ್ಯಾಗ ಇದೆ. ತ್ಯಾಗ ಎಂದರೆ ಸಂಬಂಧಗಳನ್ನು ಕಡಿತಗೊಳಿಸುವುದು, ಆಸೆ ಮೋಹ ಬಿಡುವುದು, ಕಾಮ ಕ್ರೋಧಗಳನ್ನು ಬಿಡುವುದು, ಮಹಾವೀರರು ಎಲ್ಲ ತ್ಯಾಗ ಮಾಡಲು ತೀರ್ಮಾನ ಮಾಡಿದರು.
ಆಸ್ತಿ, ಅಂತಸ್ತು, ಅರಮನೆ, ಬಂಗಾರ, ವೈಡೂರ್ಯ ಎಲ್ಲ ತ್ಯಾಗ ಮಾಡುತ್ತಾರೆ. ಮೈಮೇಲೆ ಒಂದು ಬಟ್ಟೆ ಇರುತ್ತದೆ. ಅವರ ಎದುರಿಗೆ ಒಬ್ಬ ಕುಂಟ ಬಂದು ಎಲ್ಲರಿಗೂ ದಾನ ಕೊಟ್ಟಿದ್ದೀರಾ ನನಗೂ ಏನಾದರೂ ಕೊಡಿ ಎಂದು ಕೇಳುತ್ತಾನೆ. ಮಹಾವೀರರು ನನ್ನ ಬಳಿ ಏನೂ ಇಲ್ಲ ಎನ್ನುತ್ತಾರೆ. ನೋಡಿ ನಿಮ್ಮ ಬಳಿ ಏನಿದೆ ಅದನ್ನು ಕೊಡಿ ಎನ್ನುತ್ತಾನೆ. ತಮ್ಮ ದೇಹದ ಮೇಲಿರುವ ವಜ್ರ ಖಚಿತವಾದ ಅರ್ಧ ಬಟ್ಟೆಯನ್ನು ಹರಿದು ಕೊಡುತ್ತಾರೆ. ಅಲ್ಲಿಂದ ಕಾಡಿನಲ್ಲಿ ಹೋಗುವಾಗ ಅವರ ಮೈಮೇಲಿನ ಅರ್ಧ ಬಟ್ಟೆಯನ್ನು ಹಿಡಿಯುತ್ತದೆ. ಆಗ ಮಹಾವೀರರು ನನ್ನ ಬಳಿ ಇನ್ನೂ ಇದೆ ಅಂತ ಆ ಬಟ್ಟೆಯನ್ನು ತ್ಯಾಗ ಮಾಡುತ್ತಾರೆ. ಅಂತಹ ಸಂತತಿಗೆ ಜೈನರು ಸೇರಿದ್ದೀರಿ. ನೀವು ಶ್ರೇಷ್ಠರು ಎಂದರು.
ಅಧಿಕಾರ ಇರುತ್ತದೆ ಬರುತ್ತದೆ, ಹೋಗುತ್ತದೆ. ಯಾವುದೂ ಶಾಸ್ವತ ಅಲ್ಲ, ಮನಷ್ಯ ತಾನು ಹುಟ್ಟಿರುವ ಅರಿವು, ಮಾಡಬೇಕಿರುವ ಕರ್ತವ್ಯ, ಯಾವ ಗುಣ ಕಲಿತುಕೊಳ್ಳಬೇಕು ಎನ್ನುವುದು ಮುಖ್ಯ. ಯಶಸ್ಸಿನ ಮಾರ್ಗವನ್ನು ಸುಲಭವಾಗಿ ತಿಳಿದುಕೊಳ್ಳಬೇಕೆಂದರೆ ಜೈನ ಧರ್ಮದಿಂದ ತಿಳಿದುಕೊಳ್ಳಬೇಕು ಎಂದರು.
ಜೈನ ಸಮುದಾಯದೊಂದಿಗೆ ನಮ್ಮ ತಂದೆಯವರ ಕಾಲದಿಂದಲೂ ಬಹಳ ಹಳೆಯ ಸಂಬಂಧ ಇದೆ. ನಾನು ಸಿಎಂ ಆಗಿದ್ದಾಗ ಶಿಗ್ಗಾವಿ ತಾಲೂಕಿನ ಎಲ್ಲ ಸಮುದಾಯಭವನಗಳಿಗೆ 12 ಕೋಟಿ ರೂ. ಕೊಟ್ಟಿದ್ದೆ. ದುಂಡಸಿ ಸಮುದಾಯ ಭವನಕ್ಕೆ 1 ಕೋಟಿ ರೂ. ಕೊಟ್ಟಿದ್ದೆ, ಇನ್ನೂ 25 ಲಕ್ಷ ಕೇಳಿದ್ದೀರಿ, ಬಹಳ ಉತ್ತಮ ಕಟ್ಟಡ ಕಟ್ಟಿದ್ದೀರಿ, ಮುಂದಿನ ದಿನಗಳಲ್ಲಿ ಉತ್ತಮ ರೀತಿಯಲ್ಲಿ ಮಾಡಿಕೊಂಡು ಹೋಗಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಸೇರಿದಂತೆ ಸಮಾಜದ ಹಲವಾರು ಪ್ರಮುಖರು ಹಾಗೂ ಮುಖಂಡರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….