ಕಲಬುರಗಿ, (ಸೆ.08); ಪತ್ನಿಯ ಎದುರಿಗೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಚ್ಚಿ ವ್ಯಕ್ತಿಯೋರ್ವನ ಭೀಕರವಾಗಿ ಕೊಲೆಗೈದಿರುವ ಘಟನೆ ನಗರದ ಹೊರವಲಯದ ಕೆಸರಟಗಿ ಗ್ರಾಮದ ಕ್ವಾಟ್ರಸ್ ಬಳಿ ಸಂಭವಿಸಿದ್ದು, ಹತ್ಯೆಯಾದ ವ್ಯಕ್ತಿಯನ್ನು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಕಪಿಲ್ ಗಾಯಕ್ವಾಡ್ (40) ಎಂದು ಗುರುತಿಸಲಾಗಿದೆ.
ಕೆಲಸ ಮುಗಿಸಿಕೊಂಡು ಪತ್ನಿಯೊಂದಿಗೆ ಕಪಿಲ್ ಮನೆಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ದುಷ್ಕರ್ಮಿಯೋರ್ವ ಅಡ್ಡಗಟ್ಟಿ ಕೊಚ್ಚಿ ಕೊಚ್ಚಿ ಹತ್ಯೆ ಮಾಡಿ ಎಸ್ಕೆಪ್ ಆಗಿದ್ದಾನೆ.
ಈ ವೇಳೆ ಕುತ್ತಿಗೆ, ಹೊಟ್ಟೆ, ಮುಖದ ಭಾಗಕ್ಕೆ ಗಂಭೀರವಾಗಿ ಪೆಟ್ಟಾಗಿ ಕಪಿಲ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಈ ಹತ್ಯೆಯ ಹಿಂದೆ ಕಪಿಲ್ ಪತ್ನಿ ಭಾಗ್ಯ ಅವರ ಕೈವಾಡವಿದೆ ಎಂದ ಗಂಭೀರವಾದ ಆರೋಪವನ್ನು ಮೃತನ ಕುಟುಂಬಸ್ಥರು ಮಾಡಿದ್ದಾರೆ.
ಈ ಕೊಲೆ ಕುರಿತು ಗುಲಬರ್ಗಾ ವಿ.ವಿ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….