ಪ್ರಧಾನ ಮಂತ್ರಿಗಳು ಕೇಕ್ ತಿನ್ನೋಕೆ ಪಾಕಿಸ್ತಾನಕ್ಕೆ ಹೋಗಿದ್ರು ಗೊತ್ತಾ.?; ಸಂತೋಷ್ ಲಾಡ್ ತಿರುಗೇಟು| Santosh lad

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯವನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರೆ ಎಂಬ ಬಿಜೆಪಿ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್‌ ಹೇಳಿಕೆಗೆ ತಿರುಗೇಟು ನೀಡಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh lad), ನಿಮ್ಮ ಪ್ರಧಾನ ಮಂತ್ರಿ ಕೇಕ್ ತಿನ್ನೋಕೆ ಪಾಕಿಸ್ತಾನಕ್ಕೆ ಹೋಗಿದ್ರು ಗೊತ್ತಾ ಎಂದು ಲೇವಡಿ ಮಾಡಿದರು.

ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಬಸವನಗೌಡರ ಯತ್ನಾಳ್ ಅವರು ನೆಗೆಟಿವ್ ಮಾತನಾಡಿದ್ರೆ ಜನಪ್ರಿಯತೆ ಸಿಗುತ್ತೆ ಅಂತ ಮಾತನಾಡ್ತಾರೆ. ಪ್ರಧಾನಮಂತ್ರಿಗಳು ಪಾಕಿಸ್ತಾನಕ್ಕೆ ಹೋಗಿದ್ರು ಅವರಿಗೆ ಯಾರಾದ್ರೂ ಆಮಂತ್ರಣ ನೀಡಿದ್ರಾ? ಈ ಬಗ್ಗೆ ಬಿಜೆಪಿಯವರು ಯಾಕೆ ಮಾತನಾಡಲ್ಲ. ಬರೀ ನಮ್ಮನ್ನ ಕೇಳೋದಲ್ಲ ಈ ರೀತಿ ಹೇಳುವವರನ್ನ ಉಪ ಪ್ರಶ್ನೆ ಕೇಳಿ, ಏನುಕ್ ಹೋಗಿದ್ರು ಪ್ರಧಾನ ಮಂತ್ರಿಗಳು ಅಂತ.

ಅವರದು ಬರೀ ಪಾಕಿಸ್ತಾನ, ಮುಸಲ್ಮಾನ, ಅಫ್ಘಾನಿಸ್ತಾನ ಇದರ ಬಿಟ್ಟರೆ ಜನಪರ ವಿಷಯ ಏನಾದ್ರು ಇದ್ದರೆ ಹೇಳಿ ಚರ್ಚೆ ಮಾಡೋಣ ಎಂದರು.

ಬಿಜೆಪಿ ಅವರು 5 ರಿಂದ 10 ತಂಡ ಮಾಡಲಿ ನಮಗೆ ಸಂಬಂಧ ಇಲ್ಲ 4,567ರ ಮ್ಯೂಟೇಷನ್ ಬದಲಾವಣೆ ಬಿಜೆಪಿ ಕಾಲದಲ್ಲಿ ಆಗಿದೆ ಅದರ ಬಗ್ಗೆ ಉತ್ತರ ಕೊಡಿ ಅಂತ ಅವರನ್ನು ಕೇಳಿ.

ವಕ್ಫ್ ವಿರೋಧಿಸಿ ಬಿಜೆಪಿಯ ಹೋರಾಟದಲ್ಲಿ ಬಣಗಳ ವಿಚಾರದಲ್ಲಿ ಎಲ್ಲಾ ಸರ್ಕಾರಗಳು ನೋಟಿಸ್‌ ಕೊಟ್ಟಿವೆ. ಈ ಹಿಂದೆ ಬಿಜೆಪಿ ಕಾಲದಲ್ಲಿ ಮ್ಯೂಟೇಷನ್ ಚೇಂಜ್ ಆಗಿವೆ. ಇದರ ಬಗ್ಗೆ ಬಿಜೆಪಿ ಅವರು ಚರ್ಚೆ ಮಾಡ್ತಾರಾ? ಅವರ ಕಾಲದಲ್ಲಿ ನಮ್ಮ ಕಾಲದಲ್ಲಿ ಎಷ್ಟು ನೋಟಿಸ್ ಆಗಿವೆ.

ಸಾವಿರಾರು ಎಕರೆ ಇದ್ದವರ ಬಳಿಯಿಂದ ಇಂದಿರಾಗಾಂಧಿ ಬಡವರಿಗೆ ಕೊಡ್ಸಿದ್ರು. ನಾವ್ಯಾಕೆ ಬಡವರ ಭೂಮಿಗಳನ್ನು ತೆಗೆದುಕೊಳ್ಳೋಣ ರೈತರಿಗೆ ಸಮಸ್ಯೆ ಆದ್ರೆ ನಾವು ಸರಿ ಪಡಿಸುವೆ ಅಂತ ಸಿಎಂ ಸ್ಪಷ್ಟಿಕರಣ ಕೂಡ ಕೊಟ್ಟಿದ್ದಾರೆ. ಆದರೆ ಇವರ ಕಾಲದಲ್ಲಾಗಿರೋ 4,567ರ ಬಗ್ಗೆ ಸಮೀಕ್ಷೆ ಮಾಡ್ತಾರಂತಾ ಇವರ ನೋಟಿಸ್‌ ಮ್ಯೂಟೇಷನ್ ಚೇಂಜ್ ಆಗಿದೆ. ಅಲ್ಲ ಇದರ ಬಗ್ಗೆ ಚರ್ಚೆ ಮಾಡಬೇಕು.

ಇದರ ಬಗ್ಗೆ ಸರ್ಕಾರ ಆದಷ್ಟು ಬೇಗ ಉತ್ತರ ಕೊಡುತ್ತೆ ಬಿಜೆಪಿ ಅವರು ರಾಜಕೀಯಕ್ಕೆ ಬಳಸಿಕೊಳ್ಳಲು ಮುಂದಾಗಿದ್ರು. ಬೇಳೆ ಬೇಯಿಸಿಕೊಳ್ಳಲು ಪ್ರಯತ್ನ ಮಾಡಿದ್ರೂ ಎಲ್ಲಿಯೂ ಕ್ಲಿಕ್ ಆಗಲ್ಲಿಲ್ಲ ರಾಜಕೀಯ ಮಾಡೋದ್ ಬಿಟ್ರೆ ಜನ ಪರವಾಗಿ ಬಿಜೆಪಿಯವರು ಯಾವತ್ತು ಮಾತಾಡಲ್ಲ.

ಉಳುವವನೆ ಭೂಮಿ ಒಡೆಯ ಕಾರ್ಯಕ್ರಮ ಮಾಡಿದ್ದೆ ಕಾಂಗ್ರೆಸ್, ಬಿಜೆಪಿ ಆಗ ಸಾಹುಕಾರರ ಪರವಾಗಿ ಕಾರ್ಯಕ್ರಮಕ್ಕೆ ವಿರೋಧ ಮಾಡಿದ್ರು ಎಂದರು.

ಡಿಕೆಶಿ ಹಾಗೂ ಸಿಎಂ ಬಣ ರಾಜಕೀಯ ವಿಚಾರ ಈಗಾಗಲೇ ಸಿಎಂ ಹಾಗೂ ಡಿಸಿಎಂ ಸ್ಪಷ್ಟಿಕರಣ ನೀಡಿದ್ದಾರೆ ಎಂದ ಅವರು ಸಿಎಂ ಬದಲಾವಣೆ ಈಗ ಅಪ್ರಸ್ತುತ ಅದು ಹೈಕಮಾಂಡ್‌ ನಿರ್ಧಾರ ಮಾಡುತ್ತೆ ಎಂದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಮಾಹಿತಿ ಇಲ್ಲ ಅದು ಸಿಎಂ ಮತ್ತು ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರವಾಗಿ ಚರ್ಚೆಗೆ ಅವಕಾಶ ನೀಡುತ್ತೇವೆ. ಆದ್ರೆ ವಿಪಕ್ಷಗಳು ಅದಕ್ಕೆ ವಿರೋಧ ಮಾಡದೇ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಅಭಿವೃದ್ಧಿ ಬಗ್ಗೆ ಚರ್ಚೆಗಳಾಗಬೇಕು ಅನ್ನೋದು ನಮ್ಮ ಉದ್ದೇಶ ಆದ್ರೆ ಅಭಿವೃದ್ದಿ ಬಗ್ಗೆ ವಿಪಕ್ಷ ನಾಯಕರು ಚರ್ಚೆ ಮಾಡಲು ಬಿಡೋದೇ ಇಲ್ಲ ಎಂದರು.

ರಾಜಕೀಯ

ರಣದೀಪ್ ಸುರ್ಜೇವಾಲ ಕರ್ನಾಟಕದ ಸೂಪರ್ ಸಿಎಂ: ನಿಖಿಲ್ ಕುಮಾರಸ್ವಾಮಿ ಟೀಕೆ

ರಣದೀಪ್ ಸುರ್ಜೇವಾಲ ಕರ್ನಾಟಕದ ಸೂಪರ್ ಸಿಎಂ: ನಿಖಿಲ್ ಕುಮಾರಸ್ವಾಮಿ ಟೀಕೆ

ಬೆಂಗಳೂರು: ಕರ್ನಾಟಕದ ಸೂಪರ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ರಣದೀಪ್ ಸುರ್ಜೇವಾಲ (Randeep Surjewala) ಅವರಿಗೆ ಅಭಿನಂದನೆಗಳು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy)

[ccc_my_favorite_select_button post_id="111193"]
ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿ: ಬಿ.ವೈ.ವಿಜಯೇಂದ್ರ

ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿ: ಬಿ.ವೈ.ವಿಜಯೇಂದ್ರ

ಸಿದ್ದರಾಮಯ್ಯನವರು ಮತ್ತು ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಪ್ರಶ್ನಿಸಲು ಬಯಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ (B.Y. Vijayendra) ಅವರು ತಿಳಿಸಿದ್ದಾರೆ.

[ccc_my_favorite_select_button post_id="111198"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಪೊಲೀಸ್ ಹೆಡ್ ಕಾನ್ಸ್ಟೆಬಲ್ ಆತ್ಮಹತ್ಯೆ..!

ಪೊಲೀಸ್ ಹೆಡ್ ಕಾನ್ಸ್ಟೆಬಲ್ ಆತ್ಮಹತ್ಯೆ..!

ಪೊಲೀಸ್ ಠಾಣೆ ಆವರಣದಲ್ಲಿರುವ ರೆಸ್ಟ್ ರೂಮ್ ನಲ್ಲಿ ಹೆಡ್ ಕಾನ್ಸ್ಟೇಬಲ್ ಒಬ್ಬರು ಆತ್ಮಹತ್ಯೆಗೆ ಶರಣಾಗಿರುವ (Suicide) ಘಟನೆ

[ccc_my_favorite_select_button post_id="111207"]
FROM DODDABALAPURA RAILWAY POLICE: ರೈಲಿಗೆ ಸಿಲುಕಿ ವ್ಯಕ್ತಿ ಸಾವು..

FROM DODDABALAPURA RAILWAY POLICE: ರೈಲಿಗೆ ಸಿಲುಕಿ ವ್ಯಕ್ತಿ ಸಾವು..

ಸುಮಾರು 35 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೋರ್ವ ರೈಲಿಗೆ ಸಿಲುಕಿ ಸಾವನಪ್ಪಿರುವ (Dies) ಘಟನೆ ದೊಡ್ಡಬಳ್ಳಾಪುರ- ರಾಜಾನುಕುಂಟೆ ನಡುವಿನ ***

[ccc_my_favorite_select_button post_id="111089"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!