ದೊಡ್ಡಬಳ್ಳಾಪುರ (Doddaballapura): ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡವೀರದಿಪ್ಪಯ್ಯನ ಪಾಳ್ಯ ಸಮೀಪದ ಅರಣ್ಯ ಪ್ರದೇಶದಲ್ಲಿ ನಡೆಸಲಾಗುತ್ತಿದ್ದ ಇಸ್ಪೀಟು ಅಡ್ಡೆಯ ಮೇಲೆ ದಾಳಿ ನಡೆಸಿರುವ ಪೊಲೀಸರು ಮೂವರು ಜೂಜುಕೋರರನ್ನು ಬಂಧಿಸಿದ್ದಾರೆ.
ಇನ್ಸ್ಪೆಕ್ಟರ್ ಅಮರೇಶ್ ಗೌಡ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರ ತಂಡ ದೊಡ್ಡವೀರದಿಪ್ಪಯ್ಯನ ಪಾಳ್ಯ- ಗುಮ್ಮನಹಳ್ಳಿ ನಡುವಿನ ಅರಣ್ಯ ಪ್ರದೇಶದಲ್ಲಿ ಇಸ್ಪೀಟು ಆಟದಲ್ಲಿ ತೊಡಗಿದ್ದ ತ್ಯಾಮಗೊಂಡ್ಲುವಿನ ಸಿದ್ದಪ್ಪ, ಉರ್ಡಿಗೆರೆಯ ಮಂಜುನಾಥ್, ತುಮಕೂರಿನ ಕೃಷ್ಣಮೂರ್ತಿ ಎನ್ನುವವರನ್ನು ಬಂಧಿಸಲಾಗಿದೆ.
ಬಂಧಿತರಿಂದ ಎರಡು ದ್ವಿಚಕ್ರ ವಾಹನ, ರೂ.12600 ನಗದನ್ನು ವಶಪಡಿಸಿಕೊಳ್ಳಲಾಗಿದೆ.
ದಾಳಿಯ ವೇಳೆ ಇನ್ನೂ ಮೂವರು ಜೂಜುಕೋರರು ಪರಾರಿಯಾಗಿದ್ದು, ಒಟ್ಟು ಆರು ಮಂದಿಯ ವಿರುದ್ಧ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ
ಪೊಲೀಸ್ ಸಿಬ್ಬಂದಿಗಳಾದ ಪಾಂಡುರಂಗ, ರೂಪೇಶ್ ಯಾದವ್, ಸೂರ್ಯ ಚಂದ್ರ ಭಾವಿಮನಿ, ಶ್ರೀ ನಿವಾಸ್ ದಾಳಿಯಲ್ಲಿ ಭಾಗವಹಿಸಿದ್ದರು.