ಹರಿತಲೇಖನಿ ದಿನಕ್ಕೊಂದು ಕಥೆ: ಪ್ರಾಮಾಣಿಕತೆ| Daily story

Daily story: ಒಂದು ಸಲ ಸಂತ ಇಬ್ರಾಹಿಮನು ದೇಶ ಸಂಚಾರಕ್ಕೆ ಹೊರಟನು. ಸಂಚರಿಸುತ್ತ ಒಬ್ಬ ಧನಿಕನ ತೋಟಕ್ಕೆ ಬಂದನು. ಆ ಧನಿಕನು ಸಂತ ಇಬ್ರಾಹಿಮನ ಸಾಧಾರಣ ಉಡುಪನ್ನು ಕಂಡು ಅವನನ್ನು ಒಬ್ಬ ಸಾಮಾನ್ಯ ಮನುಷ್ಯನೆಂದು ಭಾವಿಸಿದನು.

ಆ ಧನಿಕನಿಗೆ ಅವನ ತೋಟ ಕಾಯಲು ಒಬ್ಬ ಆಳು ಬೇಕಾಗಿದ್ದನು. ‘ನೀನು ನನ್ನ ತೋಟದ ಕಾವಲು ಮಾಡುವೆಯಾ?’ ಎಂದು ಆ ಧನಿಕನು ಇಬ್ರಾಹಿಮನನ್ನು ಕೇಳಿದನು. ಇಬ್ರಾಹಿಮನಿಗೆ ಆ ತೋಟದ ಶಾಂತ ವಾತಾವರಣ ತುಂಬ ಹಿಡಿಸಿತು. ಏಕಾಂತದಲ್ಲಿ ದೇವರ ಧ್ಯಾನ ಮಾಡಲು ಅವನಿಗೆ ಅದು ಸೂಕ್ತವಾದ ಸ್ಥಳವೆನಿಸಿತು. ಆದ್ದರಿಂದ ಧನಿಕನ ಮಾತನ್ನು ಕೂಡಲೇ ಒಪ್ಪಿಕೊಂಡನು.

ಹೀಗೆ ಬಹಳ ದಿವಸಗಳು ಕಳೆದುಹೋದವು. ಇಬ್ರಾಹಿಮನು ತುಂಬ ಮುತುವರ್ಜಿಯಿಂದ ತೋಟದ ಕಾವಲು ಮಾಡುತ್ತಿದ್ದನು.

ಒಂದು ದಿನ ಆ ಧನಿಕನು ತನ್ನ ಕೆಲವು ಮಿತ್ರರೊಂದಿಗೆ ತನ್ನ ತೋಟಕ್ಕೆ ಬಂದನು. ಮಾವಿನ ಮರದಲ್ಲಿ ಮಾವಿನ ಹಣ್ಣುಗಳಾಗಿದ್ದವು.

ಧನಿಕನು ಇಬ್ರಾಹಿಮನಿಗೆ ಕೆಲವು ಮಾವಿನ ಹಣ್ಣುಗಳನ್ನು ಕಿತ್ತು ತರುವಂತೆ ಹೇಳಿದನು. ಇಬ್ರಾಹಿಮನು ಒಂದು ಮರದಿಂದ ಕೆಲವು ಹಣ್ಣುಗಳನ್ನು ಕಿತ್ತು ತಂದನು. ಆದರೆ ಅವನು ಕಿತ್ತು ತಂದ ಹಣ್ಣುಗಳೆಲ್ಲ ಹುಳಿಯಾಗಿದ್ದವು. ಆಗ ಧನಿಕನು ಇಬ್ರಾಹಿಮನನ್ನು ಕುರಿತು ‘ಹಲವು ದಿನಗಳಿಂದ ನನ್ನ ತೋಟದ ಕಾವಲು ಮಾಡುತ್ತಿರುವೆ. ಆದರೆ ಯಾವ ಮರದ ಹಣ್ಣು ಹುಳಿಯಾಗಿದೆ. ಯಾವ ಮರದ ಹಣ್ಣು ಸಿಹಿಯಾಗಿದೆ ಎಂದು ನಿನಗೆ ಗೊತ್ತಿಲ್ಲವೇ?’ ಎಂದು ಕೇಳಿದನು.

ಧನಿಕನ ಮಾತನ್ನು ಕೇಳಿ ಇಬ್ರಾಹಿಮನು ನಗತೊಡಗಿದನು. ಅವನು ಏಕೆ ನಗುತ್ತಿರುವನೆಂದು ಧನಿಕನಿಗೆ ತಿಳಿಯಲಿಲ್ಲ.

“ನೀನು ಏಕೆ ನಗುತ್ತಿರುವೆ?’ ಎಂದು ಧನಿಕನು ಇಬ್ರಾಹಿಮನಿಗೆ ಕೇಳಿದನು. ಆಗ ಇಬ್ರಾಹಿಮನು ‘ಒಡೆಯರೇ, ನೀವು ನನ್ನನ್ನು ನೇಮಿಸಿರುವುದು ತೋಟವನ್ನು ಕಾಯುವುದಕ್ಕೆ. ಮಾವಿನ ಹಣ್ಣುಗಳನ್ನು ತಿನ್ನುವುದಕ್ಕಲ್ಲ. ನಿಮ್ಮ ಆಜ್ಞೆ ಇಲ್ಲದೆ ನಾನು ಹಣ್ಣುಗಳನ್ನು ತಿನ್ನಲು ಹೇಗೆ ಸಾಧ್ಯ? ನಾನು ಹಣ್ಣುಗಳನ್ನು ತಿಂದೇ ಇಲ್ಲ ಎಂದ ಮೇಲೆ ನನಗೆ ಯಾವ ಮರದ ಹಣ್ಣು ಹುಳಿ, ಯಾವ ಮರದ ಹಣ್ಣು ಸಿಹಿ ಎಂದು ಹೇಗೆ ಗೊತ್ತಾದಿತು?’ ಎಂದು ಕೇಳಿದನು.

ಇಬ್ರಾಹಿಮನ ಪ್ರಾಮಾಣಿಕತೆಯನ್ನು ಕಂಡು ಧನಿಕನು ತಲೆದೂಗಿದನು ಮತ್ತು ತನ್ನ ನಡವಳಿಕೆಗಾಗಿ ಇಬ್ರಾಹಿಮನಲ್ಲಿ ಕ್ಷಮೆ ಯಾಚಿಸಿದನು.

ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಾಗಿಲ್ಲ)

ರಾಜಕೀಯ

ಶ್ರೀಗಳು, ಜನ, ಕಾರ್ಯಕರ್ತರು ಬಯಸಿದ್ದು ತಪ್ಪು ಎಂದು ಹೇಳಲು ಆಗುವುದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ಶ್ರೀಗಳು, ಜನ, ಕಾರ್ಯಕರ್ತರು ಬಯಸಿದ್ದು ತಪ್ಪು ಎಂದು ಹೇಳಲು ಆಗುವುದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

"ಬಹಿರಂಗವಾಗಿ ನಾನು ಏಕೆ ಮಾತನಾಡಲಿ? ನಾನುಂಟು, ಪಕ್ಷವುಂಟು. ನಾವೆಲ್ಲರೂ ಒಟ್ಟಿಗೆ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದೇವೆ" ಎಂದು ತಿಳಿಸಿದರು. D.K. Shivakumar

[ccc_my_favorite_select_button post_id="110708"]
ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್‌ ಅವರಿಗೆ ಬಿ.ವೈ.ವಿಜಯೇಂದ್ರ ಸನ್ಮಾನ

ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್‌ ಅವರಿಗೆ ಬಿ.ವೈ.ವಿಜಯೇಂದ್ರ ಸನ್ಮಾನ

ಬಮೂಲ್ (Bamul) ನಿರ್ದೇಶಕ ಸ್ಥಾನಕ್ಕೆ ದೊಡ್ಡಬಳ್ಳಾಪುರದಿಂದ ವಿಜೇತರಾದ ಬಿ.ಸಿ.ಆನಂದ್ ಕುಮಾರ್ (B.C.Ananad Kumar) ಅವರನ್ನು ಬಿ.ವೈ.ವಿಜಯೇಂದ್ರ (B.Y.Vijayendra)

[ccc_my_favorite_select_button post_id="110404"]
ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ವಿಶ್ವದ ಬೇರೆ ಬೇರೆ ದೇಶಗಳಿಗೆ ಹೊಲಿಕೆ ಮಾಡಿದಾಗ ಭಾರತವು ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ ಸಚಿವ ಪ್ರಲ್ಹಾದ ಜೋಶಿ (Pralhad Joshi)

[ccc_my_favorite_select_button post_id="108459"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಗ್ರಾಪಂ ಅಧ್ಯಕ್ಷೆಗೆ I Love You ಎಂದು PDO ಮೆಸೇಜ್..!; ರಾಜೀನಾಮೆಗೆ ಮುಂದಾದ ಮಹಿಳೆ

ಗ್ರಾಪಂ ಅಧ್ಯಕ್ಷೆಗೆ I Love You ಎಂದು PDO ಮೆಸೇಜ್..!; ರಾಜೀನಾಮೆಗೆ ಮುಂದಾದ

ಗ್ರಾಮಪಂಚಾಯಿತಿ ಅದ್ಯಕ್ಷೆಗೆ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಐ ಲವ್ ಯು (I Love You) ಎಂದು ಕಿರುಕುಳ ಆರೋಪ ಹಿನ್ನೆಲೆ, ಮಹಿಳೆಯೋರ್ವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ

[ccc_my_favorite_select_button post_id="110702"]
ಬ್ರೇಕ್ ಫೇಲ್: 5 ಬಸ್ಸುಗಳ ನಡುವೆ ಅಪಘಾತ.. 6 ಭಕ್ತರಿಗೆ ಗಂಭೀರ ಪೆಟ್ಟು..!

ಬ್ರೇಕ್ ಫೇಲ್: 5 ಬಸ್ಸುಗಳ ನಡುವೆ ಅಪಘಾತ.. 6 ಭಕ್ತರಿಗೆ ಗಂಭೀರ ಪೆಟ್ಟು..!

ಯಾತ್ರೆಗೆ ತೆರಳುತ್ತಿದ್ದ 5 ಬಸ್ಸುಗಳ ನಡುವೆ ಡಿಕ್ಕಿ ಸಂಭವಿಸಿ (Accident) 6 ಮಂದಿ ಭಕ್ತರು ಗಂಭೀರವಾಗಿ ಗಾಯಗೊಂಡಿರುವ ಘಟನೆ

[ccc_my_favorite_select_button post_id="110578"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!