Murder: ಇನ್ಶೂರೆನ್ಸ್ ಹಣಕ್ಕಾಗಿ ತಂದೆಯ ಕೊಲೆ; ಮಗನ ಬಂಧನ

ಪಿರಿಯಾಪಟ್ಟಣ: ಇನ್ಶೂರೆನ್ಸ್ (ವಿಮೆ) ಹಣದ ಆಸೆಗಾಗಿ ತಂದೆಯನ್ನೇ ಕೊಲೆ (Murder) ಮಾಡಿದ ಮಗನೊಬ್ಬನು ತನ್ನ ತಂದೆ ಅಪಘಾತದಿಂದ ಮೃತಪಟ್ಟಿದ್ದಾರೆ ಎಂದು ಕಥೆ ಹೆಣೆಯಲು ಯತ್ನಿಸಿದ ಪ್ರಕರಣ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ.

ತಂದೆಯನ್ನು ಹತ್ಯೆ ಮಾಡಿದ ಮಗನನ್ನು ಪೊಲೀಸರು ಬಂಧಿಸಿದ್ದಾರೆ.

ಪಿರಿಯಾಪಟ್ಟಣದ ಕೊಪ್ಪ ಗ್ರಾಮದ ಗೆರೋಸಿ ಕಾಲೋನಿಯ ಪಾಂಡು ಎಂಬಾತನೇ ತನ್ನ ತಂದೆ ಅಣ್ಣಪ್ಪರನ್ನು ಕೊಲೆ ಮಾಡಿರುವ ಆರೋಪಿ. ಪಿರಿಯಾಪಟ್ಟಣದ ಬೈಲುಕುಪ್ಪೆ ಬಳಿ ಈ ಘಟನೆ ನಡೆದಿದೆ.

ದೂರಿನ ಹಿನ್ನೆಲೆಯಲ್ಲಿ ಸಬ್ ಇನ್ಸ್‌ಪೆಕ್ಟ‌ರ್ ಅಜಯ್ ಕುಮಾರ್ ಮತ್ತು ತಂಡ ಅನುಮಾನದ ಮೇಲೆ ವಿಚಾರಣೆ ನಡೆಸಿದ್ದಾರೆ. ಆಗ ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ತನ್ನ ತಂದೆ ಹೆಸರಿನಲ್ಲಿ ಇನ್ಶೂರೆನ್ಸ್ ಇದೆ. ಹೀಗಾಗಿ, ಅವರು ಅಪಘಾತದಲ್ಲಿ ಸಾವನ್ನಪ್ಪಿದರೆ ಡಬಲ್ ಹಣ ಸಿಗಬಹುದೆಂಬ ಆಸೆಗೆ ಈ ಕೃತ್ಯ ಮಾಡಿದ್ದೇನೆ ಎಂದು ತಪ್ರೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನೊಂದೆಡೆ, ಸಹೋದರ ಅಣ್ಣಪ್ಪ ಮೃತಪಟ್ಟ ಹಿನ್ನೆಲೆಯಲ್ಲಿ ದುಃಖಿತನಾದ ಅವರ ಅಣ್ಣ ಧರ್ಮ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಬೈಲುಕುಪ್ಪೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಮೆ ಹಣಕ್ಕಾಗಿ ಕೊಲೆ

‘ನಿಮಗೆ ಟಿಬೇಟಿಯನ್ ಮೊದಲನೇ ಕ್ಯಾಂಪಿನಲ್ಲಿ ಕೆಲಸ ಇದೆ. ನೀವು ಹೋಗಿ’ ಎಂದು ತಂದೆಗೆ ಹೇಳಿರುವ ಆರೋಪಿ, ಬಳಿಕ ಹಿಂಬದಿಯಿಂದ ಫಾಲೋ ಮಾಡಿಕೊಂಡು ಬಂದು ತಲೆ ಭಾಗಕ್ಕೆ ದೊಣ್ಣೆಯಿಂದ ಬಲವಾಗಿ ಹೊಡೆದಿದ್ದಾನೆ.

ಇದರಿಂದ ತೀವ್ರವಾಗಿ ಗಾಯಗೊಂಡ ಅಣ್ಣಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಳಿಕ ಆರೋ ಪಿಯು ತಂದೆಯ ಶವವನ್ನು ಬಿ.ಎಂ.ರಸ್ತೆಯ ಮಂಚದೇವನಹಳ್ಳಿ ಸಮೀಪ ಎಸೆದಿದ್ದಾನೆ.

ಸ್ವಲ್ಪ ಸಮಯದ ನಂತರ ಠಾಣೆಗೆ ಬಂದು ತನ್ನ ತಂದೆಗೆ ಅಪರಿಚಿತ ವಾಹನ ಡಿಕ್ಕಿಯಾಗಿದ್ದು, ಅವರು ಮೃತಪಟ್ಟಿದ್ದಾರೆ ಎಂದು ಕಥೆ ಕಟ್ಟಿ ದೂರು ನೀಡಿದ್ದನೆಂದು ವರದಿಯಾಗಿದೆ.

ರಾಜಕೀಯ

ಶ್ರೀಗಳು, ಜನ, ಕಾರ್ಯಕರ್ತರು ಬಯಸಿದ್ದು ತಪ್ಪು ಎಂದು ಹೇಳಲು ಆಗುವುದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ಶ್ರೀಗಳು, ಜನ, ಕಾರ್ಯಕರ್ತರು ಬಯಸಿದ್ದು ತಪ್ಪು ಎಂದು ಹೇಳಲು ಆಗುವುದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

"ಬಹಿರಂಗವಾಗಿ ನಾನು ಏಕೆ ಮಾತನಾಡಲಿ? ನಾನುಂಟು, ಪಕ್ಷವುಂಟು. ನಾವೆಲ್ಲರೂ ಒಟ್ಟಿಗೆ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದೇವೆ" ಎಂದು ತಿಳಿಸಿದರು. D.K. Shivakumar

[ccc_my_favorite_select_button post_id="110708"]
ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್‌ ಅವರಿಗೆ ಬಿ.ವೈ.ವಿಜಯೇಂದ್ರ ಸನ್ಮಾನ

ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್‌ ಅವರಿಗೆ ಬಿ.ವೈ.ವಿಜಯೇಂದ್ರ ಸನ್ಮಾನ

ಬಮೂಲ್ (Bamul) ನಿರ್ದೇಶಕ ಸ್ಥಾನಕ್ಕೆ ದೊಡ್ಡಬಳ್ಳಾಪುರದಿಂದ ವಿಜೇತರಾದ ಬಿ.ಸಿ.ಆನಂದ್ ಕುಮಾರ್ (B.C.Ananad Kumar) ಅವರನ್ನು ಬಿ.ವೈ.ವಿಜಯೇಂದ್ರ (B.Y.Vijayendra)

[ccc_my_favorite_select_button post_id="110404"]
ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ವಿಶ್ವದ ಬೇರೆ ಬೇರೆ ದೇಶಗಳಿಗೆ ಹೊಲಿಕೆ ಮಾಡಿದಾಗ ಭಾರತವು ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ ಸಚಿವ ಪ್ರಲ್ಹಾದ ಜೋಶಿ (Pralhad Joshi)

[ccc_my_favorite_select_button post_id="108459"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಗ್ರಾಪಂ ಅಧ್ಯಕ್ಷೆಗೆ I Love You ಎಂದು PDO ಮೆಸೇಜ್..!; ರಾಜೀನಾಮೆಗೆ ಮುಂದಾದ ಮಹಿಳೆ

ಗ್ರಾಪಂ ಅಧ್ಯಕ್ಷೆಗೆ I Love You ಎಂದು PDO ಮೆಸೇಜ್..!; ರಾಜೀನಾಮೆಗೆ ಮುಂದಾದ

ಗ್ರಾಮಪಂಚಾಯಿತಿ ಅದ್ಯಕ್ಷೆಗೆ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಐ ಲವ್ ಯು (I Love You) ಎಂದು ಕಿರುಕುಳ ಆರೋಪ ಹಿನ್ನೆಲೆ, ಮಹಿಳೆಯೋರ್ವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ

[ccc_my_favorite_select_button post_id="110702"]
ಬ್ರೇಕ್ ಫೇಲ್: 5 ಬಸ್ಸುಗಳ ನಡುವೆ ಅಪಘಾತ.. 6 ಭಕ್ತರಿಗೆ ಗಂಭೀರ ಪೆಟ್ಟು..!

ಬ್ರೇಕ್ ಫೇಲ್: 5 ಬಸ್ಸುಗಳ ನಡುವೆ ಅಪಘಾತ.. 6 ಭಕ್ತರಿಗೆ ಗಂಭೀರ ಪೆಟ್ಟು..!

ಯಾತ್ರೆಗೆ ತೆರಳುತ್ತಿದ್ದ 5 ಬಸ್ಸುಗಳ ನಡುವೆ ಡಿಕ್ಕಿ ಸಂಭವಿಸಿ (Accident) 6 ಮಂದಿ ಭಕ್ತರು ಗಂಭೀರವಾಗಿ ಗಾಯಗೊಂಡಿರುವ ಘಟನೆ

[ccc_my_favorite_select_button post_id="110578"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!