ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಗ್ರಾಮದಲ್ಲಿ ಪ್ರತಿ ವರ್ಷದಂತೆ ಭೂತನೆರಿಗೆ ಹಬ್ಬವನ್ನು (Festival for Butanerige) ಸೋಮವಾರ ಸಂಜೆ ಆಚರಿಸಲಾಯಿತು.
ಪ್ರತಿ ವರ್ಷ ಆಷಾಢ ಏಕಾದಶಿಯ ಅಂಗವಾಗಿ ಈ ಜನಪದ ಆಚರಣೆ 5 ಶತಮಾನಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಈ ಬಾರಿ ನಡೆದ ಉತ್ಸವದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.
ಭೂತನೆರಿಗೆ ಆಚರಣೆಗಿದೆ 600 ವರ್ಷಗಳ ಇತಿಹಾಸ
ತೂಬಗೆರೆಯ ಗ್ರಾಮದ ಪಾಳ್ಯ ಆಂಜನೇಯ ದೇವಸ್ಥಾನದಿಂದ ಆರಂಭವಾಗುವ ಭೂತಗಳ ಆರ್ಭಟ ಊರಿನ ವಿವಿಧೆಡೆ ಸಂಚರಿಸಿ ಶ್ರೀಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಮುಕ್ತಾಯವಾಗುತ್ತದೆ, ಕೆಂಚಣ್ಣ ವೇಷಧಾರಿಯಾಗಿ ಶೇಖರ್, ಕರಿಯಣ್ಣ ವೇಷಧಾರಿಯಾಗಿ ಮತ್ತು ತೇರಿನ ಬೀದಿಯ ಮಂಜುನಾಥ್, ಪ್ರಮುಖ ಆಕರ್ಷಣೆಯಾಗಿರುತ್ತಾರೆ.
ಆಂಜನೇಯ ದೇವಸ್ಥಾನದಲ್ಲಿ ಮಂತ್ರವಾದಿ ಆನಂದ್ ಸ್ವಾಮಿ, ಕರಿಯಣ್ಣ – ಕೆಂಚಣ್ಣರ ಮೇಲೆ ಮಂತ್ರಪಠಣ ಮಾಡಿ ಅವರಿಬ್ಬರ ಮೇಲೆ ಭೂತಗಳ ಆವಾಹನೆ ಮಾಡುತ್ತಾರೆ. ಭೂತಗಳ ಆವಾಹನೆ ನಂತರ ಆಕ್ರೋಶಗೊಳ್ಳುವ ಅವರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾರೆ. ಭೂತಗಳ ಆರ್ಭಟವನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ತೂಬಗೆರೆಗೆ ಬರುತ್ತಾರೆ.
ಹಿನ್ನೆಲೆ: ಪ್ರತಿ ವರ್ಷ ಆಷಾಢ ಮಾಸದ ಏಕಾದಶಿಯಾದ ಮಾರನೇ ದಿನವಾದ ದ್ವಾದಶಿಯಂದು ಪುರಾತನ ಕಾಲದಿಂದಲೂ ತೂಬಗೆರೆ ಗ್ರಾಮದಲ್ಲಿ ಭೂತ ನೆರಿಗೆ ಹಬ್ಬವನ್ನು ಆಚರಿಸಿಕೊಂಡು ಬರಲಾಗಿದೆ. ವಿಷ್ಣುವಿನ ದ್ವಾರಪಾಲಕರಾದ ಜಯ – ವಿಜಯರು ಶಾಪಕ್ಕೆ ಗುರಿಯಾಗಿ ಕಲಿಯುಗದಲ್ಲಿ ಕರಿಯಣ್ಣ ಕೆಂಚಣ್ಣರಾಗಿ ಭೂಲೋಕಕ್ಕೆ ಬರುತ್ತಾರೆ ಎಂಬ ಐತಿಹಾಸಿಕ ಹಿನ್ನೆಲೆ ಇದೆ. ಕರಿಯಣ್ಣ ಮತ್ತು ಕೆಂಚಣ್ಣ ವೇಷಧಾರಿಗಳು ಮನೆಗೆ ಬಂದರೆ ಮನೆಯಲ್ಲಿನ ದ್ವೆವ್ವ ಪಿಶಾಚಿಗಳು ಓಡಿ ಹೋಗುತ್ತವೆ ಎಂಬ ನಂಬಿಕೆಯೂ ಇದೆ.
ಪ್ರತಿ ವರ್ಷ ಆಷಾಢ ಮಾಸದ ಏಕಾದಶಿಯಾದ ಮಾರನೇ ದಿನವಾದ ದ್ವಾದಶಿಯಂದು ಪುರಾತನ ಕಾಲದಿಂದಲೂ ತೂಬಗೆರೆ ಗ್ರಾಮದಲ್ಲಿ ಭೂತ ನೆರಿಗೆ ಹಬ್ಬವನ್ನು ಆಚರಿಸಿಕೊಂಡು ಬರಲಾಗಿದೆ. ವಿಷ್ಣುವಿನ ದ್ವಾರಪಾಲಕರಾದ ಜಯ-ವಿಜಯರು ಶಾಪಕ್ಕೆ ಗುರಿಯಾಗಿ ಕಲಿಯುಗದಲ್ಲಿ ಕರಿಯಣ್ಣ ಕೆಂಚಣ್ಣರಾಗಿ ಭೂಲೋಕಕ್ಕೆ ಬರುತ್ತಾರೆ ಎಂಬ ಐತಿಹಾಸಿಕ ಹಿನ್ನೆಲೆ ಇದೆ.
ಈ ವಿಶಿಷ್ಟವಾದ ಆಚರಣೆ ಬಂತೆಂದರೆ ನಮಗೆ ಅದೇನೋ ಸಂಭ್ರಮ ಚಿಕ್ಕಂದಿನಿಂದಲೂ ಈ ಹಬ್ಬವನ್ನು ನೋಡುತ್ತಾ ಬೆಳೆದಿರುವ ನಮಗೆ ಇದೊಂದು ರೀತಿಯ ಸಂಭ್ರಮ ಸಡಗರದ ಈ ನೋಡುತ್ತಾ. ನಮ್ಮೂರಿನಲ್ಲಿ ಮಾತ್ರ ನೋಡ ಸಿಗುವ ಹಬ್ಬ ಎಂಬುವ ಜಂಬ . ಒಟ್ಟಾರೆ ಈಗ ಮತ್ತೊಮ್ಮೆ ಹಬ್ಬ ಬಂದಿದೆ ಎಂದು ಯುವ ಮುಖಂಡ ಉದಯ ಆರಾಧ್ಯ ಅಭಿಪ್ರಾಯಪಟ್ಟರು.