ಬೌಧ್: ರೀಲ್ಸ್ (Reels) ಹುಚ್ಚಿಗಾಗಿ ಅಪ್ರಾಪ್ತ ಬಾಲಕನೋರ್ವ ರೈಲು ಹಳಿಗಳ ನಡುವೆ ಮಲಗಿ ಹುಚ್ಚಾಟ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಒಡಿಶಾ ರಾಜ್ಯದ ಬೌಧ್ ಜಿಲ್ಲೆಯ ಪುರುನಪಾನಿಯಲ್ಲಿ ಈ ಘಟನೆ ನಡೆದಿದ್ದು, ರೀಲ್ಸ್ ಶೋಕಿಗಾಗಿ ರೈಲು ಬರುವ ವೇಳೆ ಅಪಾಯಕಾರಿಯಾಗಿ ರೈಲು ಹಳಿಗಳ ನಡುವೆ ಮಲಗಿದ್ದಾನೆ.
ಈ ಘಟನೆಯನ್ನು ಹುಡುಗನ ಸ್ನೇಹಿತರು ತಮ್ಮ ಫೋನ್‌ಗಳಲ್ಲಿ ಚಿತ್ರೀಕರಿಸಿದ್ದಾರೆ.
రీల్స్ కోసం ప్రాణాలతో చెలగాటం
— Telugu Scribe (@TeluguScribe) July 6, 2025
ఒడిశా – బౌద్ జిల్లాలోని పూరునాపానీలో రీల్స్ పిచ్చిలో ట్రైన్ పట్టాల మధ్య పడుకున్న బాలుడు
దానిని ఫోన్లో వీడియో తీసిన బాలుడి స్నేహితులు
ముగ్గురు మైనర్లను అదుపులోకి తీసుకొని విచారిస్తున్న అధికారులు pic.twitter.com/tf7N5I5kVo
ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಮೂವರು ಅಪ್ರಾಪ್ತ ವಯಸ್ಕರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.