Commission orders to issue purchase order to Golden Homes Builders for breach of contract

ರೈತನಿಗೆ ದೋಷಯುತ ಕೊಯ್ಲುಯಂತ್ರ.. ಅಗ್ರೊ ಇಂಡಸ್ಟ್ರೀಗೆ ಬಿಸಿ ಮುಟ್ಟಿಸಿದ ಗ್ರಾಹಕರ ಆಯೋಗ

ಧಾರವಾಡ: ರೈತನಿಗೆ ದೋಷಯುತ ಹಾರವೆಸ್ಟಿಂಗ್ ( ಕೊಯ್ಲುಯಂತ್ರ) ಮಷೀನ್ ನೀಡಿದ ಗುರು ಹಿಂದುಸ್ಥಾನ ಅಗ್ರೋ ಇಂಡ್ರಸ್ಟ್ರೀಸ್‍ಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ (Consumer Commission) ದಂಡ ವಿಧಿಸಿದೆ.

ನವಲಗುಂದದ ನಿವಾಸಿ ದ್ಯಾಮಪ್ಪ ಹಂಚಿನಾಳ ಎನ್ನುವವರು ವೃತ್ತಿಯಲ್ಲಿ ವ್ಯವಸಾಯವನ್ನು ಅವಲಂಬಿಸಿದ್ದಾರೆ. ತಮ್ಮ ಉಪಜೀವನಕ್ಕಾಗಿ ಬೆರೆಯವರು ಬೆಳೆಗಳನ್ನು ಹಾರ್ವೆಸ್ಟಿಂಗ ಮಷೀನ್‍ನ ಮುಖಾಂತರ ಕೊಯ್ಯಲು ಈ ಮಷೀನನ್ನು ಅವರು ಗುರು ಹಿಂದುಸ್ಥಾನ ಅಗ್ರೊ ಇಂಡಸ್ಟ್ರೀ ಬಳಿ ಖರೀದಿಸಿದ್ದರು.

ಅದಕ್ಕೆ ಅವರು ರೂ.3,50,000 ಬ್ಯಾಂಕಿನಿಂದ ಲೋನ್ ಪಡೆದು ಪಾವತಿಸಿದ್ದರು. ಖರೀದಿಸುವ ಸಮಯದಲ್ಲಿ ಎದುರುದಾರರು ಮಷೀನು ಬೆಳೆಯನ್ನು ಕೊಯ್ಲು ಮಾಡುವಾಗ ಅದು ಬೆಳೆ ಮತ್ತು ಹೊಟ್ಟನ್ನು ಬೇರ್ಪಡಿಸುತ್ತದೆ ಅಂತ ಹೇಳಿದ್ದರು. ಆದರೆ ದೂರುದಾರರು ಅದನ್ನು ವ್ಯವಸಾಯದಲ್ಲಿ ಉಪಯೋಗಿಸಲು ಪ್ರಾರಂಭಿಸದ ನಂತರ ಅದು ಎದುರುದಾರರು ಹೇಳಿದ ರೀತಿ ಮಾಡದೇ ಬೆಳೆ ಮತ್ತು ಹೊಟ್ಟು ಎರಡನ್ನು ಒಟ್ಟು ಗೂಡಿಸಿ ವಿಸರ್ಜಿಸುತ್ತಿತ್ತು.

ಈ ವಿಷಯವನ್ನು ದೂರುದಾರರು ತಮ್ಮ ನೆರೆಯ ರೈತರನ್ನು ವಿಚಾರಿಸಲು ಅವರಿಗೂ ಸಹ ಇಂತಹದೇ ಸಮಸ್ಯೆ ಬಂದಿರುವುದು ಗೊತ್ತಾಯಿತು. ಆದರೆ ಯಂತ್ರ ಸರಿ ಇಲ್ಲದ ಕಾರಣ ದೂರುದಾರರ ಉಪಜೀವನಕ್ಕೆ ತುಂಬಾ ತೊಂದರೆಯಾಗಿ ಮತ್ತು ಬ್ಯಾಂಕಿಗೆ ಲೋನನ್ನು ತುಂಬದೇ ಬಹಳ ನಷ್ಟವನ್ನು ಅನುಭವಿಸಿರುತ್ತಾರೆ.

ಕೊನೆಗೆ ದೂರುದಾರರು ಆ ಯಂತ್ರವನ್ನು ಎದುರುದಾರರ ಡೀಲರಾದ ಗಣಾಚಾರಿ ಅಗ್ರಿಕಲ್ಚರ್ ಇಂಡಸ್ಟ್ರೀಸ್ ಬೆಳಗಾವಿ ಇವರಿಗೆ ಮರಳಿಸಿರುತ್ತಾರೆ. ಆದರೆ ಇವತ್ತಿನವರೆಗೂ ಎದುರುದಾರರು ಆ ಮಷೀನನ್ನು ಸರಿಪಡಿಸಿ ಕೊಟ್ಟಿರುವುದಿಲ್ಲ.

ಇದರಿಂದ ಮನನೊಂದರೈತ ಗ್ರಾಹಕ ಅಂತಹ ಎದುರುದಾರರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯಿದೆಯಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:12/07/2024ಕ್ಕೆ ದೂರು ಸಲ್ಲಿಸಿದ್ದರು.

ಈ ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರುದಾರರು ರೂ.3,50,000 ಪಾವತಿಸಿ ತನ್ನ ಉಪಜೀವನಕ್ಕೆ ಅನುಕೂಲವಾಗಲೆಂದು ಹಾರ್ವೆಸ್ಟಿಂಗ್ ಮಷೀನ್‍ನ್ನು ಎದುರುದಾರರಿಂದ ಖರೀದಿಸಿರುವುದು ದಾಖಲೆಗಳ ಮುಖಾಂತರ ಕಂಡು ಬರುತ್ತದೆ. ಆದರೆ ಖರೀದಿಸಿದ ನಂತರ ಆ ಮಷೀನು ಎದುರುದಾರರು ಹೇಳಿದಂತೆ ಸರಿಯಾಗಿ ಕೆಲಸ ಮಾಡದೇ ಇರುವುದು ದೂರುದಾರರಿಗೆ ಆರ್ಥಿಕ ನಷ್ಟಕ್ಕೆ ಹೊಣೆಯಾಗಿರುತ್ತದೆ.

ಅಲ್ಲದೆ ದೂರುದಾರರು ಬ್ಯಾಂಕನಿಂದ ಲೋನ ಪಡೆದು ಅದನ್ನು ಖರೀದಿಸಿದರೂ ಅದರ ಉಪಯೋಗವಿಲ್ಲದೆ ಆರ್ಥಿಕ ಹೊರೆಯನ್ನು ಅನುಭವಿಸುತ್ತಿರುವುದು ಆಯೋಗಕ್ಕೆ ಕಂಡು ಬಂದಿರುತ್ತದೆ. ಅಲ್ಲದೇ ಮಷೀನು ಎದುರುದಾರರ ಬಳಿಯೇ ಇದ್ದು ಅವರು ಅದನ್ನು ಸರಿಪಡಿಸಿ ದೂರುದಾರರಿಗೆ ಕೊಡದೇ ಇರುವುದು ಗ್ರಾಹಕ ರಕ್ಷಣಾ ಕಾಯಿದೆಯಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತಂತೆ ದೂರುದಾರರು ಮಷೀನ್ ಕೊಟ್ಟಂತಹ ರೂ.3,50,000 ಗಳನ್ನು ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ಕೊಡುವಂತೆ ಎದುರುದಾರರಿಗೆ ಆಯೋಗ ಆದೇಶಿಸಿದೆ.

ಅಲ್ಲದೇ ರೈತನಾಗಿ ತನ್ನ ಉಪಜೀವನಕ್ಕಾಗಿ ಯಂತ್ರವನ್ನು ಖರೀದಿಸಿ ಅದು ಸರಿಯಾಗಿ ಕೆಲಸ ಮಾಡದಿರುವುದರಿಂದ ಅವರಿಗೆ ಆದ ಅನಾನುಕೂಲ, ಮಾನಸೀಕ ತೊಂದರೆಗೆ ರೂ. ಒಂದು ಲಕ್ಷ ಪರಿಹಾರ ಹಾಗೂ ಪ್ರಕರಣದ ಖರ್ಚು ವೆಚ್ಚ 10 ಸಾವಿರಗಳನ್ನು ದೂರುದಾರರಿಗೆ ಕೊಡಲು ಎದುರುದಾರರಾದ ಗುರು ಹಿಂದುಸ್ಥಾನ ಅಗ್ರೋ ಇಂಡ್ರಸ್ಟ್ರೀಸ್‍ಗೆ ಆಯೋಗ ತನ್ನ ಆದೇಶದಲ್ಲಿ ಹೇಳಿದೆ.

ರಾಜಕೀಯ

ಅಡ್ವಾಣಿ, ಯಡಿಯೂರಪ್ಪರಂತೆ 75 ವರ್ಷಕ್ಕೆ ಮೋದಿ ನಿವೃತ್ತಿ ಘೋಷಿಸುವರೆ..?! ಕಾವೇರಿದ ಚರ್ಚೆ

ಅಡ್ವಾಣಿ, ಯಡಿಯೂರಪ್ಪರಂತೆ 75 ವರ್ಷಕ್ಕೆ ಮೋದಿ ನಿವೃತ್ತಿ ಘೋಷಿಸುವರೆ..?! ಕಾವೇರಿದ ಚರ್ಚೆ

ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಇದೇ ಸೆಪ್ಟೆಂಬರ್ ವೇಳೆಗೆ 75 ವರ್ಷಕ್ಕೆ ಕಾಲಿಡಲಿದ್ದಾರೆ.

[ccc_my_favorite_select_button post_id="110804"]
ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್‌ ಅವರಿಗೆ ಬಿ.ವೈ.ವಿಜಯೇಂದ್ರ ಸನ್ಮಾನ

ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್‌ ಅವರಿಗೆ ಬಿ.ವೈ.ವಿಜಯೇಂದ್ರ ಸನ್ಮಾನ

ಬಮೂಲ್ (Bamul) ನಿರ್ದೇಶಕ ಸ್ಥಾನಕ್ಕೆ ದೊಡ್ಡಬಳ್ಳಾಪುರದಿಂದ ವಿಜೇತರಾದ ಬಿ.ಸಿ.ಆನಂದ್ ಕುಮಾರ್ (B.C.Ananad Kumar) ಅವರನ್ನು ಬಿ.ವೈ.ವಿಜಯೇಂದ್ರ (B.Y.Vijayendra)

[ccc_my_favorite_select_button post_id="110404"]
ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ವಿಶ್ವದ ಬೇರೆ ಬೇರೆ ದೇಶಗಳಿಗೆ ಹೊಲಿಕೆ ಮಾಡಿದಾಗ ಭಾರತವು ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ ಸಚಿವ ಪ್ರಲ್ಹಾದ ಜೋಶಿ (Pralhad Joshi)

[ccc_my_favorite_select_button post_id="108459"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಗ್ರಾಪಂ ಅಧ್ಯಕ್ಷೆಗೆ I Love You ಎಂದು PDO ಮೆಸೇಜ್..!; ರಾಜೀನಾಮೆಗೆ ಮುಂದಾದ ಮಹಿಳೆ

ಗ್ರಾಪಂ ಅಧ್ಯಕ್ಷೆಗೆ I Love You ಎಂದು PDO ಮೆಸೇಜ್..!; ರಾಜೀನಾಮೆಗೆ ಮುಂದಾದ

ಗ್ರಾಮಪಂಚಾಯಿತಿ ಅದ್ಯಕ್ಷೆಗೆ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಐ ಲವ್ ಯು (I Love You) ಎಂದು ಕಿರುಕುಳ ಆರೋಪ ಹಿನ್ನೆಲೆ, ಮಹಿಳೆಯೋರ್ವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ

[ccc_my_favorite_select_button post_id="110702"]
ದೊಡ್ಡಬಳ್ಳಾಪುರ: ಅಪಘಾತದಲ್ಲಿ ಗಾಯಗೊಂಡವರನ್ನು ಕರೆದೊಯ್ಯುತ್ತಿದ್ದ  ಅಂಬುಲೆನ್ಸ್ಗೆ ಆಕ್ಸಿಡೆಂಟ್..!| Video ನೋಡಿ

ದೊಡ್ಡಬಳ್ಳಾಪುರ: ಅಪಘಾತದಲ್ಲಿ ಗಾಯಗೊಂಡವರನ್ನು ಕರೆದೊಯ್ಯುತ್ತಿದ್ದ ಅಂಬುಲೆನ್ಸ್ಗೆ ಆಕ್ಸಿಡೆಂಟ್..!| Video ನೋಡಿ

ಮಹಿಳೆಯೋರ್ವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ 108 ಅಂಬುಲೆನ್ಸ್ಗೆ (108 Ambulance) ಕಾರೊಂದು ಡಿಕ್ಕಿ ಹೊಡೆದಿರುವ ಘಟನೆ (Accident) ತಾಲೂಕಿನ

[ccc_my_favorite_select_button post_id="110756"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!