ದೊಡ್ಡಬಳ್ಳಾಪುರ: ತಾಲೂಕಿನ ಐತಿಹಾಸಿಕ ಹುಲುಕುಡಿ (Hulukudi) ಕ್ಷೇತ್ರದಲ್ಲಿ ಶ್ರೀ ಹುಲುಕುಡಿ ವೀರಭದ್ರಸ್ವಾಮಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್ನ ನೇತೃತ್ವದಲ್ಲಿ 12ನೇ ವರ್ಷದ ಹುಲುಕುಡಿ ಗಿರಿ ಪ್ರದಕ್ಷಿಣೆ ಕಾರ್ಯಕ್ರಮ ಜು.10ರಂದು ಬೆಳಿಗ್ಗೆ 8.30ರಿಂದ ಆರಂಭವಾಗಲಿದೆ.
ಬೆಟ್ಟದ ತಪ್ಪಲಿನ ವೀರಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆ ಆರಂಭವಾಗಲಿದ್ದು, ಆಂಜನೇಯಸ್ವಾಮಿ ದೇವಾಲಯದ ಮೂಲಕ ಸ್ವಸ್ಥಾನ ತಲುಪಲಿದೆ.
ಭಕ್ತಾದಿಗಳಿಗೆ ತಿಂಡಿ ಹಾಗೂ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.