2028 ಕ್ಕೆ ನಾನೇ ಈ ರಾಜ್ಯದ ಮುಖ್ಯಮಂತ್ರಿ: ಬಸನಗೌಡ ಪಾಟೀಲ ಯತ್ನಾಳ್‌

I am the Chief Minister of this state for 2028: Basanagowda Patila Yatnal

ಹಾವೇರಿ(ಹಾನಗಲ್): 2028 ಕ್ಕೆ ನಾನೇ ಈ ರಾಜ್ಯದ ಮುಖ್ಯಮಂತ್ರಿ ( Chief Minister). ನನ್ನ ಕೈಯಾಗ ಸರಕಾರ ಕೊಡಲಿ, ಈ ರಾಜ್ಯದ ಕಥೆಯೇ ಬೇರೆಯಾಗುತ್ತದೆ. ಪೊಲೀಸರ ಕೈಗೆ ಎಕೆ-47 ಕೊಟ್ಟು ಕಾನೂನು ಧರ್ಮ ಉಳಿಸುವ ಕೆಲಸಕ್ಕೆ ಅವಕಾಶ ನೀಡಬೇಕು ಎಂಬ ಸೂಚನೆ ನೀಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ (Basanagowda Patil Yatnal) ಹೇಳಿದರು.

ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಹಾವಣಗಿ ಗ್ರಾಮದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮನ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತ ಯಾವ ದಾಳಿಗೂ ಬಗ್ಗಿಲ್ಲ, ಬಗ್ಗುವುದೂ ಇಲ್ಲ, ಜಾತೀಯತೆ ತೊಲಗಿ ಹಿಂದುತ್ವ ನಮ್ಮ ಉಸಿರಾಗಬೇಕು, ಹಿಂದೂ ಸಂಕೇತ ಧರಿಸಲು ಹಿಂದೇಟು ಯಾರೂ ಹಾಕಬೇಡಿ ಎಂದರು.

ಸಿದ್ದರಾಮಯ್ಯ ಸರಕಾರದವರು ಓಟಿಗಾಗಿ ಇಸ್ಲಾಂ ಅಂದರೆ ಶಾಂತಿ, ಹಿಂದೂ ಮುಸ್ಲಿಂ ಭಾಯಿ ಭಾಯಿ ಎಂದೆಲ್ಲ ಬೂಟಾಟಿಕೆ ಮಾಡುತ್ತಿದ್ದಾರೆ. ಇನ್ನೊಂದೆಡೆ ಲಿಂಗಾಯತ ಮಠಾಧೀಶರು ಇಸ್ಲಾ ಲಿಂಗಾಯತ ಒಂದೇ ಎಂದು ಹೇಳುತ್ತ, ಮತ್ತೊಂದೆಡೆ ಲಿಂಗಾಯತರನ್ನೇ ಒಡೆಯುತ್ತಿದ್ದಾರೆ ಎಂದರು.

ನಮ್ಮನ್ನು ವಿಭಜಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ನಡೆಯುತ್ತಿದೆ

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ನಮ್ಮನ್ನು ವಿಭಜಿಸಿ ತುಂಡು ಮಾಡಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು.

ಈ ದೇಶ ಉಳಿದರೆ ನಾವು ಉಳಿಯುತ್ತೇವೆ. ಅಭದ್ರತೆ ಹುಟ್ಟಿಸುವ ಶಕ್ತಿಗಳನ್ನು ಹೊಡೆದೂಡಿಸಲು ನಾವೆಲ್ಲ ಒಂದಾಗಬೇಕು. ನಾವೆಲ್ಲ ಒಂದಾಗಿದ್ದೇವೆ ಎಂದರೆ ನಮ್ಮ ಬಳಿ ಯಾರೂ ಬರುವುದಿಲ್ಲ ಎಂದು ಹೇಳಿದ್ದಾರೆ.

ಹಾವಣಗಿ ಗ್ರಾಮದಲ್ಲಿ ಐತಿಹಾಸಿಕ ದಿನ. ಗ್ರಾಮದ ಚರಿತೆಯಲ್ಲಿ ಬಹಳ ಮಹತ್ವದ ದಿನ ಆಗಿ ಬರುವಂತ ದಿನಗಳಲ್ಲಿ ಉಳಿಯುತ್ತದೆ. ಯಾಕೆಂದರೆ ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟ ಮಾಡಿರುವ ವೀರರಾಣಿ ಕಿತ್ತೂರು ಚೆನ್ನಮ್ಮನ ಪ್ರತಿಮೆ ಅನಾವರಣ ಮಾಡಿರುವ ದಿನ.

ಬಹಳಷ್ಟು ಜನರು ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ಅಂತ ಹೇಳುತ್ತಾರೆ. ಆದರೆ, 1824 ರಲ್ಲಿಯೇ ವೀರರಾಣಿ ಕಿತ್ತೂರು ಚೆನ್ನಮ್ಮ ಬ್ರಿಟೀಷ್ ಅಧಿಕಾರಿ ಥ್ಯಾಕರೆಯ ರುಂಡವನ್ನು ಹೊಡೆದುರುಳಿಸಿದ್ದಳು. ಅದು ಆಗಿ ನಲವತ್ತು ವರ್ಷದ ನಂತರ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಬಿಟೀಷರ ವಿರುದ್ಧ ಹೋರಾಟ ಮಾಡಿದಳು ಎಂದು ಹೇಳಿದರು.

ವೀರರಾಣಿ ಕಿತ್ತೂರು ಚೆನ್ನಮ್ಮ ರಾಣಿ ಅಬ್ಬಕ್ಕ ಅವರು ಎಷ್ಟೇ ಕಷ್ಟ ಬಂದರೂ ಈ ದೇಶದ ಮೇಲಿನ ಭಕ್ತಿ ಕಡಿಮೆಯಾಗಲಿಲ್ಲ. ಕಿತ್ತೂರು ಚೆನ್ನಮ್ಮ ಬಿಟೀಷರ ವಿರುದ್ಧ ಖಡ್ಗ ಹಿಡಿದು ಹೋರಾಟ ಮಾಡಿದಳು. ಅವಳು ವಿಧವೆಯಾದರೂ ಬ್ರಿಟೀಷರ ವಿರುದ್ಧ ಹೊರಾಡಿದಳು. ಬ್ರಿಟೀಷರು ಕಪ್ಪ ಕೊಡಬೇಕು ಎಂದಾಗ ನಾವೇಕೆ ಕಪ್ಪ ಕೊಡಬೇಕು ಎಂದು ಥ್ಯಾಕರೆಯನ್ನು ರುಂಡ ಹಾರಿಸಿದಳು.

ಎರಡನೇ ಯುದ್ಧದಲ್ಲಿ ಚೆನ್ನಮ್ಮಳನ್ನು ಮೋಸದಿಂದ ಸೋಲಿಸಿ ಅವಳನ್ನ ಬೈಲಹೊಂಗಲ ಜೈಲಿನಲ್ಲಿ ಬಂಧಿಸಿ ಅವಳ ನೈತಿಕ ಸ್ಥೆರ್ಯ ಕಳೆಯುವ ಕೆಲಸ ಮಾಡಿದ್ದರು. ಅದಕ್ಕೆ ಚೆನ್ನಮ್ಮ ಎದೆಗುಂದಿರಲಿಲ್ಲ. ಆದರೆ, ಯಾವಾಗ ರಾಯಣ್ಣನನ್ನು ಬಂಧಿಸಿದ್ದೇವೆ ಎಂದು ಹೇಳುತ್ತಾರೆ ಆಗ ಚೆನ್ನಮ್ಮ ಸ್ನೇಹ ತ್ಯಾಗ ಮಾಡುತ್ತಾಳೆ ಎಂದರು.

ಈ ದೇಶಕ್ಕೆ ಚರಿತ್ರೆ ಇದೆ. ಚಾರಿತ್ರ್ಯ ಬೇಕಾಗಿದೆ. ದೇಶಕ್ಕಾಗಿ ಸರ್ವಸ್ವ ತ್ಯಾಗ ಮಾಡಿದ್ದಾರೆ ಅವರ ಜೀವನ ತಿಳಿದುಕೊಂಡು ನಮ್ಮ ಚಾರಿತ್ರ್ಯ ಕಟ್ಟಿಕೊಳ್ಳಬೇಕಿದೆ. ಇವತ್ತು ದೇಶ ಸದೃಢವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ದೇಶದಲ್ಲಿ ಅಭದ್ರತೆ ಹುಟ್ಟಿಸುವ ಕೆಲಸ ಆಗುತ್ತಿದೆ. ಅಭದ್ರತೆ ಹುಟ್ಟಿಸುವ ಶಕ್ತಿಗಳನ್ನು ಹೊಡೆದೂಡಿಸಲು ನಾವೆಲ್ಲ ಒಂದಾಗಬೇಕು.

ನಾವೆಲ್ಲ ಭಾರತೀಯರು, ನಮ್ಮ ಸಂಕೇತ ಹಿಂದುತ್ವ, ನಾವೆಲ್ಲ ಹನುಮಪ್ಪ, ಶಿವ, ಗಣೇಶನನ್ನು ಪೂಜಿಸುತ್ತೇವೆ. ದೇವರಲ್ಲಿ ಬೇಧವಿಲ್ಲ. ನಮ್ಮನ್ನು ವಿಭಜಿಸಿ ತುಂಡು ಮಾಡಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು.

ಈ ದೇಶ ಉಳಿದರೆ ನಾವು ಉಳಿಯುತ್ತೇವೆ. ನಾವೆಲ್ಲಾ ಒಂದಾಗಿದ್ದೇವೆ ಎಂದರೆ ನಮ್ಮ ಬಳಿ ಯಾರೂ ಬರುವುದಿಲ್ಲ. ನಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಒಂದು ಕಾಲದಲ್ಲಿ ಯಾರ ಬಳಿ ಭೂಮಿ ಇತ್ತು ಅವರು ಜಗತ್ತು ಆಳಿದರು. ಮತ್ತೆ ದುಡಿದ್ದವರು ಜಗತ್ತು ಆಳಿದರು.

ಈಗ ಜ್ಞಾನ ಇದ್ದವರು ಜಗತ್ತು ಆಳುತ್ತಾರೆ. ಚೆನ್ನಮ್ಮನಿಂದ ನಾವು ದೇಶ ಭಕ್ತಿಯನ್ನು ಕಲಿತಿದ್ದೇವೆ. ನಾವು ಮಾಡುವ ಕೆಲಸ ದೇಶಕ್ಕೆ ಒಳಿತಾಗಬೇಕು. ತನಗಾಗಿ ಪ್ರಾಣಿಯೂ ಬದುಕುತ್ತದೆ ಅಂತ ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಇತರರಿಗೆ ಬದುಕಿದಾಗ ದೇವರು ಮೆಚ್ಚುತ್ತಾನೆ ಎಂದು ಹೇಳಿದ್ದಾರೆ.

ನಾವೆಲ್ಲರೂ ಒಂದು ಧ್ವಜ, ಧರ್ಮದಲ್ಲಿ ಒಂದಾಗಬೇಕು. ಕಿತ್ತೂರು ಚೆನ್ನಮ್ಮ ಭಗತ್ ಸಿಂಗ್ ಸೇರಿದಂತೆ ಅನೇಕ ವೀರರಿದ್ದಾರೆ. ಸ್ವಾತಂತ್ರ್ಯ ಬಂದಾಗ ಒಬ್ಬ ಪೊಪೇಸರ್ ವಿದ್ಯಾರ್ಥಿಗೆ ದೇಶಕ್ಕಾಗಿ ಏನು ಮಾಡುತ್ತೀಯಾ ಎಂದು ಕೇಳಿದರು ಆತ ದೇಶಕ್ಕಾಗಿ ಪ್ರಾಣ ಕೊಡುತ್ತೇನೆ ಎಂದ ಅದಕ್ಕೆ ಪೊಫೇಸರ್ ದೇಶಕ್ಕಾಗಿ ಪ್ರಾಣ ಕೊಡುವುದು ಬೇಡ, ದೇಶಕ್ಕಾಗಿ ದುಡಿ, ದೇಶಕ್ಕಾಗಿ ಬಾಳು, ಬುದ್ಧಿವಂತಿಕೆಯನ್ನು ದೇಶಕ್ಕಾಗಿ ಬಳಸು ಎಂದು ಹೇಳೀದರು. ಇವತ್ತು ಆ ಕಾಲ ಬಂದಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳು ಲಿಂಗಾಯತ ಪಂಚಮಸಾಲಿ ಪೀಠ, ಕೂಡಲಸಂಗಮ, ಶ್ರೀ ಮ.ನಿ.ಪ್ರ ಶಿವಬಸವ ಮಹಾಸ್ವಾಮಿಗಳು ವಿರಕ್ತಮಠ, ಅಕ್ಕಿಆಲೂರ, ಶ್ರೀ ಷ.ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಮುತ್ತಿನಕಂತಿಮಠ ಅಕ್ಕಿ ಆಲೂರ ಶ್ರೀಗಳವರು ಸಾನಿಧ್ಯ ವಹಿಸಿದ್ದರು.

ರಾಜಕೀಯ

ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ, ಕ್ಷೇತ್ರ ಮರು ವಿಂಗಡನೆ ಮಸೂದೆಗೆ ಸೋಲಾದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ Narendra Modi) ಅವರು ನೀಡಿದ ಭಾಷಣದಲ್ಲಿ 59 ಬಾರಿ ಕಾಂಗ್ರೆಸ್‌ (Congress) ಹೆಸರು ಮಾತ್ರವೇ ಕೇಳಿಸಿದೆ

[ccc_my_favorite_select_button post_id="121182"]
ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ, ಕ್ಷೇತ್ರ ಮರು ವಿಂಗಡನೆ ಮಸೂದೆಗೆ ಸೋಲಾದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ Narendra Modi) ಅವರು ನೀಡಿದ ಭಾಷಣದಲ್ಲಿ 59 ಬಾರಿ ಕಾಂಗ್ರೆಸ್‌ (Congress) ಹೆಸರು ಮಾತ್ರವೇ ಕೇಳಿಸಿದೆ

[ccc_my_favorite_select_button post_id="121182"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (CSK) ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಡಿಜೆ ಸಿಎಸ್​ಕೆ ಅಭಿಮಾನಿಗಳನ್ನು ಹಾಗೂ ಆಟಗಾರರನ್ನು ಅವಮಾನಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್

[ccc_my_favorite_select_button post_id="121029"]
ಸುಳ್ಳು ವಿಡಿಯೋ ಪೋಸ್ಟ್.. ನಟ ದುನಿಯಾ ವಿಜಯ್‌, ಭಾಸ್ಕರ್ ರಾವ್ಗೆ ಸಂಕಷ್ಟ..!

ಸುಳ್ಳು ವಿಡಿಯೋ ಪೋಸ್ಟ್.. ನಟ ದುನಿಯಾ ವಿಜಯ್‌, ಭಾಸ್ಕರ್ ರಾವ್ಗೆ ಸಂಕಷ್ಟ..!

ಝಾಂಬಿ ಡ್ರಗ್ಸ್ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿಯ ವಿಡಿಯೊ ಶೇರ್ ಮಾಡಿದ್ದ ನಟ ದುನಿಯಾ ವಿಜಯ್‌ಗೆ (Duniya Vijay) ಸಂಕಷ್ಟ ಎದುರಾಗಿದೆ.

[ccc_my_favorite_select_button post_id="121217"]
ದೊಡ್ಡಬಳ್ಳಾಪುರ: ಕ್ಯಾಂಟರ್- ಟ್ರ್ಯಾಕ್ಟರ್ ನಡುವೆ ಬೆಳ್ಳಂಬೆಳಗ್ಗೆ ಅಪಘಾತ.. ಓರ್ವ ಸಾವು

ದೊಡ್ಡಬಳ್ಳಾಪುರ: ಕ್ಯಾಂಟರ್- ಟ್ರ್ಯಾಕ್ಟರ್ ನಡುವೆ ಬೆಳ್ಳಂಬೆಳಗ್ಗೆ ಅಪಘಾತ.. ಓರ್ವ ಸಾವು

ಕ್ಯಾಂಟರ್ ಹಾಗೂ ಟ್ರಾಕ್ಟರ್ ನಡುವೆ ಡಿಕ್ಕಿ (Accident) ಸಂಭವಿಸಿ, ಓರ್ವ ಸಾವನಪ್ಪಿರುವ ಘಟನೆ ತಾಲೂಕಿನ *** ಬಳಿ ಇಂದು ಬೆಳಗ್ಗಿನ ಜಾವ ಸಂಭವಿಸಿದೆ.

[ccc_my_favorite_select_button post_id="121087"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!