ದೊಡ್ಡಬಳ್ಳಾಪುರ: ಸ್ಪೀಕರ್ ಸ್ಥಾನಕ್ಕೆ ಅಗೌರವವಾಗಿ ವರ್ತಿಸಿ ಎರಡು ಬಾರಿ ವಿಧಾನಸಭೆ ಅಧಿವೇಶನದಿಂದ ಅಮಾನತ್ತಾಗಿದ್ದ ದೊಡ್ಡಬಳ್ಳಾಪುರ ಶಾಸಕ ಸುದ್ದಿಗೋಷ್ಠಿ ನಡೆಸಿ, ಸರಕಾರಕ್ಕೆ ಉಪದೇಶ ನೀಡುತ್ತಿದ್ದಾರೆ ಎಂದು ದೊಡ್ಡಬಳ್ಳಾಪುರ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಪುನೀತ್ ಗೌಡ ಮಲ್ಲೋಹಳ್ಳಿ (Puneet Gowda Mallohalli) ಲೇವಡಿ ಮಾಡಿದ್ದಾರೆ.
ನಿನ್ನೆ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಸುದ್ದಿಗೋಷ್ಠಿ ನಡೆಸಿ, ಬೆಂಗಳೂರಿನಲ್ಲಿ ಬುಧವಾರ ನಡೆದ ಆರ್.ಸಿ.ಬಿ ಸಂಭ್ರಮಾಚರಣೆ ಸಮಯದಲ್ಲಿ ಸಂಭವಿಸಿದ ಕಾಲ್ತುಳಿತ, ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಸೇರಿದಂತೆ ಅನೇಕ ವಿಚಾರಗಳ ಕುರಿತು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಪುನೀತ್ ಗೌಡ ಮಲ್ಲೋಹಳ್ಳಿ ಅವರು ಶಾಸಕ ಧೀರಜ್ ಮುನಿರಾಜು ಅವರಿಗೆ ತಿರುಗೇಟು ನೀಡಿದ್ದು, ಶಾಸಕನಾಗಿ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾದವರು ಮೊದಲು ತಾಲೂಕಿನ ಜನರ ಸಮಸ್ಯೆಗೆ ದನಿಯಾಗುವತ್ತ ಗಮನ ಹರಿಸಲಿ.
ಪಕ್ಷದ ವರಿಷ್ಠರ ಗಮನ ಸೆಳೆಯಲು ಸ್ಪೀಕರ್ ಮೇಲೆ ಪೇಪರ್ ಎಸೆದು, ಅನುಚಿತವಾಗಿ ವರ್ತಿಸಿ, ಆಯ್ಕೆಯಾದ ಎರಡು ವರ್ಷದಲ್ಲಿ ಎರಡು ಬಾರಿ ಅಮಾನತಾಗಿ ದೊಡ್ಡಬಳ್ಳಾಪುರ ತಾಲೂಕಿನ ಮರ್ಯಾದೆ ಕಳೆದಿರುವ ಇವರು, ರಾಜ್ಯದ ಬಡವರ ಆಶಾಕಿರಣವಾಗಿರುವ ಹೆಮ್ಮೆಯ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಮಾತಾಡುತ್ತಾರೆ.
ಈ ಮುಂಚೆ ಕಳೆದ ಯುಗಾದಿ ಹಬ್ಬದ ದಿನ ನಡೆಸಿದ ಸುದ್ದಿಗೋಷ್ಠಿಯಲ್ಲಿ, ಕಾಂಗ್ರೆಸ್ ಸರ್ಕಾರದಿಂದ ದೊಡ್ಡಬಳ್ಳಾಪುರ ತಾಲೂಕಿಗೆ ಅನ್ಯಾಯವಾಗಿಲ್ಲ, ಸಿದ್ದರಾಮಯ್ಯ ಅಪ್ಪಾಜಿ, ಡಿಕೆ ಶಿವಕುಮಾರ್ ಅವರು ಅನುದಾನ ಕೊಟ್ಟಿದ್ದಾರೆ. ನಾನು ಅವರ ವಿರುದ್ಧ ಮಾತಾಡುವುದಿಲ್ಲ ಎಂದಿದ್ದು ಮರೆತು, ಈಗ ಬೇಕಾಬಿಟ್ಟಿಯಾಗಿ ಮಾತಾಡುವುದು ದೊಡ್ಡಬಳ್ಳಾಪುರ ಬಿಜೆಪಿ ಶಾಸಕರ ದ್ವಿಮುಖ ನೀತಿಗೆ ಸಾಕ್ಷಿಯಾಗಿದೆ.
ಹೌದು RCB ಸಂಭ್ರಮಾಚರಣೆ ವೇಳೆ ದುರ್ಘಟನೆ ಸಂಭವಿಸಿದೆ, ಅಭಿಮಾನಿಗಳ ಉತ್ಸಾಹ, ಉನ್ಮಾದದ ಕಾರಣ ಆಗ ಬಾರದ ಘಟನೆ ಆಗಿದೆ. ಮತ್ತೆ ಈಗಾಗದಂತೆ ಜಾಗ್ರತೆ ಎಲ್ಲರೂ ಸೇರಿ ವಹಿಸೋಣ. ಆದರೆ ಇದರಲ್ಲಿ ರಾಜಕೀಯ ಮಾಡ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುವ ಮನಸ್ಥಿತಿ ಏತಕೆ.
ಅಲ್ಲಸ್ವಾಮಿ ಕೋಟ್ಯಾಂತರ ಜನರ ಭಾವನೆಗೆ ಕಾಂಗ್ರೆಸ್ ಸರ್ಕಾರದ ಸಿಎಂ, ಡಿಸಿಎಂ ಮನ್ನಣೇ ನೀಡಿದ್ದಾರೆ. ಆದರೆ ಉಗ್ರರ ದಾಳಿಯಲ್ಲಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದರೆ, ಮೋದಿ ಅವರು ಬಿಹಾರ ಚುನಾವಣೆ ಪ್ರಚಾರಕ್ಕೆ ಹೋಗಿದ್ರಲ್ವಾ ಅವರು ಮಾತ್ರ ಜನನಾಯಕ ಅಲ್ವಾ, 27 ಜನ ಸತ್ತರೆ ನಿಮಗೆ ಲೆಕ್ಕಾ ಇಲ್ವಾ..? ಅಥವಾ ಮೋದಿ ಅವರಿಗೆ ನೈತಿಕತೆ ಇಲ್ವಾ ಎಂದು ಪುನೀತ್ ಗೌಡ ಮಲ್ಲೋಹಳ್ಳಿ ಪ್ರಶ್ನಿಸಿದರು.
ಆಕಸ್ಮಿಕ ಘಟನೆಯ ಕುರಿತು ಇಷ್ಟೇಲ್ಲಾ ಮಾತಾಡುವ ದೊಡ್ಡಬಳ್ಳಾಪುರ ಶಾಸಕ, ಪಹಲ್ಗಾಮ್ ದಾಳಿ ಬಗ್ಗೆ ಯಾಕ್ ಮಾತಾಡಲ್ಲ, 27 ಜನ ಅಮಾಯಕರ ಸಾವು ಸಾವಲ್ಲವೇ.? ಕುಂಭಮೇಳದಲ್ಲಿ ಕಾಲ್ತುಳಿತದಲ್ಲಿ ಸಾವನಪ್ಪಿದವರ ಸಾವು ಸಾವಲ್ಲವೇ ಮಾತಾಡಿ ಅದರ ಬಗ್ಗೆ ಕೂಡ ಎಂದು ಹರಿಹಾಯ್ದರು.
ನಮ್ಮ ದೇಶದ ವೀರ ಯೋಧರು ಪಾಪಿ ಪಾಕಿಸ್ತಾನದ ವಿರುದ್ಧ ದಿಟ್ಟ ಹೋರಾಟ ನಡೆಸುತ್ತಿದ್ದರೆ, ಅಮೇರಿಕಾ ಅಧ್ಯಕ್ಷ ಟ್ರಂಪ್ ಮಾತು ಕೇಳಿ ಕದನ ವಿರಾಮ ಘೋಷಿಸಿದರಲ್ಲ ಪ್ರಧಾನಿ ಮೋದಿ ಅವರು ಇದಕ್ಕೆ ಯಾವ ಕಾರಣಕ್ಕೆ ಉತ್ತರ ಕೊಡಿ.
ಮಾಧ್ಯಮಗಳ ಮುಂದೇ ವಿರಾವೇಷದಿಂದ ಮಾತನಾಡುವ ದೊಡ್ಡಬಳ್ಳಾಪುರ ಶಾಸಕ ಡಿಸಿಎಂ ಡಿಕೆ ಶಿವಕುಮಾರ್ ಅವರು ಘಾಟಿ ಸುಬ್ರಹ್ಮಣ್ಯಕ್ಕ ಬಂದಾಗ ದೌಡಾಯಿಸಿ ಶಾಲು ಹೊದಿಸಿ ಸನ್ಮಾನ ಮಾಡಿದ್ದು ಮರೆತೋಯ್ತಾ ಎಂದು ವ್ಯಂಗ್ಯವಾಡಿದರು.