ದೊಡ್ಡಬಳ್ಳಾಪುರ : ತಾಲ್ಲೂಕಿನ ಮಧುರೆ ಹೋಬಳಿಯ ಚನ್ನಾದೇವಿ ಅಗ್ರಹಾರದ ದಾಖ್ಲೆ ಗ್ರಾಮವಾದ ಗಾರುಡಿಗರಪಾಳ್ಯ (ಕೋಡಿಪಾಳ್ಯ) ಗ್ರಾಮವನ್ನು ಹೋಂ ಕ್ವಾರಂಟೈನ್ ನಿಂದ ತೆರವು ಮಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ಪಿ.ಎನ್.ರವೀಂದ್ರ ಅವರು ಆದೇಶಿಸಿದ್ದಾರೆ.
ಕೋಡಿಪಾಳ್ಯ ಗ್ರಾಮದಲ್ಲಿ ಒಬ್ಬ ವ್ಯಕ್ತಿಗೆ ಕೋವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆ ಗ್ರಾಮವನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು.
ಕೋಡಿಪಾಳ್ಯ ಗ್ರಾಮದಲ್ಲಿ ಏ.13ರ ನಂತರ ಇಲ್ಲಯವರೆಗೆ ಯಾವುದೇ ಕೋವಿಡ್-19 ಪ್ರಕರಣ ದೃಢಪಡದಿರುವುದರಿಂದ, ಗ್ರಾಮವನ್ನು ಹೋಂ ಕ್ವಾರಂಟೈನ್ ನಿಂದ ತೆರವುಗೊಳಿಸಿ ಆದೇಶಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.