ದೊಡ್ಡಬಳ್ಳಾಪುರ : ತಾಲೂಕು ಮೊಬೈಲ್ ಮತ್ತು ಕರೆನ್ಸಿ ವ್ಯಾಪಾರಸ್ಥರ ಸಂಘ ಹಾಗೂ ಆರ್‍ಯವೈಶ್ಯ ಮಂಡಲಿ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಗರದ ವಾಸವಿ ಕಲ್ಯಾಣ ಮಂದಿರದಲ್ಲಿ ನಡೆಯಿತು.
ಡಿವೈಎಸ್‌ಪಿ ಟಿ.ರಂಗಪ್ಪ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಇಂದು ವೈಜ್ಞಾನಿಕವಾಗಿ ಎಷ್ಟೇ ಆವಿಷ್ಕಾರಗಳಾಗಿದ್ದರೂ ಇಂದಿಗೂ ಕೃತಕ ರಕ್ತವನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ. ರಕ್ತವನ್ನು ರಕ್ತದಾನದಿಂದ ಮಾತ್ರ ಪಡೆಯಬಹುದಾಗಿದೆ. ಕೊರೊನಾ ಲಾಕ್‌ಡೌನ್ ಹಿನ್ನಲೆಯಲ್ಲಿ ರಕ್ತದಾನದ ಕೊರತೆ ಹೆಚ್ಚಾಗುತ್ತಿದ್ದು, ರಕ್ತದಾನ ಶಿಬಿರಗಳು ಈ ದಿಸೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಸಂಘಟನೆಗಳು ರಕ್ತದಾನ ಶಿಬಿರ ಹಮ್ಮಿಕೊಳ್ಳುತ್ತಿರುವುದು ಅಭಿನಂದನೀಯ. ಆದರೆ ಶಿಬಿರಗಳಲ್ಲಿ ಕೊವಿಡ್-೧೯ ಸೋಂಕು ಹರಡದಂತೆ ಎಲ್ಲರೂ ಎಚ್ಚರ ವಹಿಸಿ, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಮೊಬೈಲ್ ಮತ್ತು ಕರೆನ್ಸಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಂ.ವಿಶ್ವನಾಥ್,ಗೌರವ ಅಧ್ಯಕ್ಷ ಕೃಷ್ಣಪ್ಪ,ಉಪಾಧ್ಯಕ್ಷ ಬಿ.ಎನ್.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ರಮೇಶ್,ಕಾರ್ಯಾಧ್ಯಕ್ಷ ಶಬೀರ್ ಖಾನ್,ಸಹ ಕಾರ್‍ಯದರ್ಶಿ ಪ್ರದೀಪ್ ಕುಮಾರ್, ಖಜಾಂಚಿ ಮನುಕುಮಾರ್, ಸಂಘಟನಾ ಕಾರ್ಯದರ್ಶಿ ಬಾಲ ಮುರಳಿ ಕೃಷ್ಣ ಆರ್‍ಯವೈಶ್ಯ ಮಂಡಲಿ ರಾಜ್ಯ ನಿರ್ದೇಶಕರಾದ ಅಮರನಾಥ್ ಎಸ್.ಸುಂಕು,ಎಸ್.ಮಂಜುನಾಥ್,ಜಿಲ್ಲಾಧ್ಯಕ್ಷ ಅನಿಲ್ ಕುಮಾರ್,ನಾಗರಾಜ್, ದೇವನಾಥ್,ವೆಂಕಟೇಶ್ ಮೊದಲಾದವರು ಭಾಗವಹಿಸಿದ್ದರು.