ಹರಿತಲೇಖನಿ ವಿಶೇಷ ದೊಡ್ಡಬಳ್ಳಾಪುರ : ಮಹಾರಾಷ್ಟ್ರದ ಮುಂಬೈಯಿಂದ ಬಾಗೇಪಲ್ಲಿ ಮೂಲಕ ಬಂದ,ತಾಲೂಕಿನ ಹೊಸಹಳ್ಳಿ ತಾಂಡ್ಯದ 6 ಮಂದಿಯನ್ನು ಗ್ರಾಮಕ್ಕೆ ತೆರಳಲು ಅವಕಾಶ ನೀಡದೆ ನೇರವಾಗಿ ಕ್ವಾರಂಟೈನ್‌ಗೆ ಕಳಿಸುವ ಮೂಲಕ ದೊಡ್ಡಬಳ್ಳಾಪುರಕ್ಕೆ ಬಂದೊದಗ ಬಹುದಾಗಿದ್ದ ಬಹುದೊಡ್ಡ ಅಪಾಯವನ್ನು ಕರೊನಾ ವಾರಿಯರ್ಸ್ ತಡೆದಿದ್ದಾರೆ.
ರಾಜ್ಯ ಸರ್ಕಾರ ಲಾಕ್‌ಡೌನ್ ಸಡಿಲಗೊಳಿಸಿ,ಕಾರ್ಮಿಕರು ಅಂತಾರಾಜ್ಯ ಪ್ರಯಾಣಕ್ಕೆ ಅವಕಾಶ ಕೊಟ್ಟ ಹಿನ್ನಲೆ.ಮುಂಬೈನಲ್ಲಿ ಕಳೆದ ಐದು ವರ್ಷಗಳಿಂದ ಮನೆ ಕೆಲಸ ಮಾಡುತ್ತಿದ್ದ ಹೊಸಹಳ್ಳಿ ತಾಂಡ್ಯದ ಆರು ಮಂದಿ,ಮೇ.19ರಂದು ಬಾಗೇಪಲ್ಲಿ ಮೂಲಕ ಸ್ವಗ್ರಾಮಕ್ಕೆ ಬರುವುದನ್ನು ತಿಳಿದ,ಕರೊನಾ ವಾರಿಯರ್ಸ್‌ಗಳಾದ ಘಾಟಿ ಸರ್ಕಾರಿ ಆಸ್ಪತ್ರೆಯ ಡಾ.ಸುಚಿತ್ರ,ಆರೋಗ್ಯ ಸಹಾಯಕಿ ಯಶಸ್ವಿನಿ,ಆಶಾ ಕಾರ್ಯಕರ್ತೆ ಬೇಬಿಬಾಯಿ ನಿರಂತರವಾಗಿ ಅವರ ಜಾಡನ್ನೆ ಕಾದು ಕುಳಿತಿದ್ದು,ತಡರಾತ್ರಿ ಒಂದು ಗಂಟೆಗೆ ಗ್ರಾಮಕ್ಕೆ ಬರುವ ಮುನ್ನವೇ ತಡೆದು, ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಕ್ವಾರಂಟೈನ್‌ಗೆ ಒಳಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಳಿದಂತೆ ನಗರದ ಸಾರ್ವಜನಿಕ ಆಸ್ಪತ್ರೆಯ ಕರೊನಾವಾರಿಯರ್ ಡಾ.ಮೀನಾ ಇವರು ಕ್ವಾರಂಟೈನ್‌ಗೆ ಒಳಗಾದ ಕೂಡಲೆ,ಇವರ ಗಂಟಲು ದ್ರವ ಪಡೆದು ಪರೀಕ್ಷೆಗೆ ಕಳಿಸಿದ್ದು ಸ್ವ ಗ್ರಾಮಕ್ಕೆ ಹಿಂತಿರುಗುತ್ತಿದ್ದ 6 ಮಂದಿಯಲ್ಲಿ,ಮೂವರು ಮಹಿಳೆಯರಿಗೆ ಕರೊನಾ ಸೋಂಕು ದೃಡಪಟ್ಟಿದೆ.
ಒಂದು ವೇಳೆ ಕರೊನಾ ವಾರಿಯರ್ಸ್ ಸಲ್ಪ ಅಜಾಗರೂಕತೆ ತೋರಿದ್ದರು,ದೊಡ್ಡಬಳ್ಳಾಪುರಕ್ಕೆ ಉಂಟಾಗಬಹುದಾಗಿದ್ದ ಅಪಾಯವನ್ನು ಊಹಿಸಲು ಅಸಾಧ್ಯವಾಗಿತ್ತು ಎನ್ನುತ್ತವೆ ವೈದ್ಯಕೀಯ ಮೂಲಗಳು.
ಮಹಾರಾಷ್ಟ್ರದಿಂದ ಬರುತ್ತಿದ್ದವರ ಬಗ್ಗೆ ನಿಗಾವಹಿಸಿ,ದೊಡ್ಡಬಳ್ಳಾಪುರಕ್ಕೆ ಕರೊನಾ ಹರಡದಂತೆ ಶ್ರಮಿಸಿದ ಕರೊನಾ ವಾರಿಯರ್ಸ್‌ಗಳನ್ನು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
” ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೊರೊನಾ ಅಂಕಿ-ಅಂಶ “
ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನದಲ್ಲಿ ಐದು ಕೋವಿಡ್-19 ಪ್ರಕರಣಗಳು ದೃಢಪಡುವ ಮೂಲಕ ಕೊರೊನಾ ಮುಕ್ತ ಜಿಲ್ಲೆ ಎನ್ನುವ ಪಟ್ಟಿಯಿಂದ ಹೊರಬಂದಿದೆ.ಇಲ್ಲಿಯವರೆಗೆ ದೃಢ ಪಟ್ಟಿರುವ ಎಲ್ಲಾ ಪ್ರಕರಣಗಳಲ್ಲೂ ಹೊರಗಿನಿಂದ ಬಂದು ಕ್ವಾರಂಟೈನಲ್ಲಿ ಇದ್ದವರೇ ಆಗಿರುವುದು ಸಾರ್ವಜನಕರಲ್ಲಿನ ಆತಂಕವನ್ನು ಕೊಂಚಮಟ್ಟಿಗೆ ದೂರಮಾಡಿದೆ.
ಹಾಗೆಯೇ ಶುಕ್ರವಾರ ಕೋವಿಡ್-19 ದೃಢಪಟ್ಟಿರುವ ಐದು ಪ್ರಕರಣಗಳಲ್ಲೂ ಮಹಿಳೆಯರೇ ಆಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಐವರಲ್ಲಿ ಇಂದು ಕೊರೋನಾ ವೈರಾಣು ಸೋಂಕು ದೃಢಪಟ್ಟಿದ್ದು, ಎಲ್ಲರೂ ಮಹಿಳೆಯರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಪಿ-1606, ಪಿ-1607 ಹಾಗೂ ಪಿ-1608, ಮಹಾರಾಷ್ಟ್ರ- ಮುಂಬೈ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.
ನೆಲಮಂಗಲ ತಾಲ್ಲೂಕಿನಲ್ಲಿ ಪಿ-1686, ತೀವ್ರ ಉಸಿರಾಟದ ಸಮಸ್ಯೆ ಹಾಗೂ ಹೊಸಕೋಟೆ ತಾಲ್ಲೂಕಿನಲ್ಲಿ ಪಿ-1724, ಇನ್ಫ್ಲೂಯೆನ್ಜಾ ಲೈಕ್ ಇಲ್ನೆಸ್ (ಐಎಲ್ಐ) ತೊಂದರೆಯುಳ್ಳವರಾಗಿದ್ದಾರೆ.
ನಾಲ್ಕು ಕೊರೋನಾ ಸೋಂಕಿತರು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹಾಗೂ ನೆಲಮಂಗಲ ತಾಲ್ಲೂಕಿನ ಕೊರೋನಾ ಸೋಂಕಿತ ಮಹಿಳೆ, ತುಮಕೂರು ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದ್ದಾರೆ.