ದೊಡ್ಡಬಳ್ಳಾಪುರ : ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದ್ದ ಪ್ಯಾಟೇ ಹುಡ್ಗೀರ್ ಹಳ್ಳಿ ಲೈಫು ಸೀಸನ್ 4ರ ವಿನ್ನರ್ ದೊಡ್ಡಬಳ್ಳಾಪುರದ ನಿವಾಸಿ ಮಬೀನಾ ಮೈಕಲ್ ರಸ್ತೆ ಅಪಘಾತದಲ್ಲಿ ಮಂಗಳವಾರ ಸಂಜೆ ಮೃತಪಟ್ಟಿದ್ದಾರೆ.
ಬೆಂಗಳೂರಿನಿಂದ ನಾಗಮಂಗಲ ತಾಲ್ಲೂಕಿನ ದೇವಿಹಳ್ಳಿ ಬಳಿಯಲ್ಲಿ ಹುಟ್ಟೂರಾದ ಸೋಮವಾರ ಪೇಟೆಯ ಅಜ್ಜಿ ಮನೆಗೆ ಸ್ನೇಹಿತರೊಂದಿಗೆ ತೆರಳುತ್ತಿದ್ದ ವೇಳೆ ಕಾರ್ ಹಾಗೂ ಟ್ರಾಕ್ಟರ್ ನಡುವೆ ಮುಖಾಮುಖಿ ಅಪಘಾತವಾಗಿದೆ.
ಅಪಘಾತ ನಡೆದ ಕೂಡಲೆ ಮಬೀನಾರಿಗೆ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ,ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯುತ್ತಿದ್ದ ವೇಳೆ ಮಾರ್ಗಮಧ್ಯದಲ್ಲಿ ಸಾವನಪ್ಪಿದ್ದಾರೆ.ಉಳಿದಿಬ್ಬರಿಗೆ ತೀವ್ರ ಪೆಟ್ಟಾಗಿದೆ
ಘಟನೆ ಕುರಿತು ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
” ದೊಡ್ಡಬಳ್ಳಾಪುರದ ಮಬೀನಾ ”
ದೊಡ್ಡಬಳ್ಳಾಪುರದಲ್ಲಿ ಹಾಲಿನ ಡೈರಿ ಚಾಲಕರಾಗಿದ್ದ ದಿವಂಗತ ಮೈಕಲ್.ಎಂ.ಡಿ.ಹಾಗೂ ವಿನ್ಸಿ ಮೈಕಲ್ ದಂಪತಿಗಳ ಇಬ್ಬರು ಮಕ್ಕಳಲ್ಲಿ ಹಿರಿಯರಾದ ಮಬೀನಾ ಮೈಕಲ್ ದೊಡ್ಡಬಳ್ಳಾಪುರದ ಗಂಗಾಧರಪುರ ಲೇಔಟ್ ನಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಿದ್ದರು.
ಪ್ಯಾಟೇ ಹುಡ್ಗೀರ್ ಹಳ್ಳಿ ಲೈಫು ಸೀಸನ್ 4ರ ವಿನ್ನರ್ ಆಗಿದಲ್ಲದೆ,ಸಹ ನಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು,ಅಲ್ಲದೆ ನಗರದ ಹೊರವಲಯದಲ್ಲಿನ ಪಾಲನಜೋಗಹಳ್ಳಿ ಬಳಿ ಡ್ಯಾನ್ಸ್ ತಂಡವನ್ನು ಕಟ್ಟಿಕೊಂಡು ಡ್ಯಾನ್ಸ್ ತರಬೇತಿ ನೀಡುತ್ತಿದ್ದರು.
ಮಬೀನಾ ಅಕಾಲಿಕ ಮರಣದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,ನೆಟ್ಟಿಗರು ಸಂತಾಪ ಸೂಚಿದ್ದಾರೆ
ಮಾಹಿತಿ : ಕೃಷ್ಣಮೂರ್ತಿ